40 ಕಾರ್ಮಿಕರು ರಕ್ಷಣೆಗೆ ಮತ್ತೆ ಅಡ್ಡಿ

KannadaprabhaNewsNetwork |  
Published : Nov 16, 2023, 01:15 AM IST
ರಕ್ಷಣಾ ಕಾರ್ಯಾಚರಣೆ | Kannada Prabha

ಸಾರಾಂಶ

ಇಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಅದರಲ್ಲಿ ಸಿಲುಕಿಕೊಂಡಿರುವ 40 ಜನ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗಿದೆ. ಮಣ್ಣು ಕುಸಿತದ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಕುಸಿತ ಸಂಭವಿಸುತ್ತಿದೆ.

ಉತ್ತರಕಾಶಿ: ಇಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಅದರಲ್ಲಿ ಸಿಲುಕಿಕೊಂಡಿರುವ 40 ಜನ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗಿದೆ. ಮಣ್ಣು ಕುಸಿತದ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಕುಸಿತ ಸಂಭವಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಗಂಟೆಗೆ 5 ಮೀಟರ್‌ ದೂರ ಜಾಗ ತೆರವುಗೊಳಿಸುವ ಅತ್ಯಾಧುನಿಕ ಯಂತ್ರವೊಂದನ್ನು ವಿಮಾನದ ಮೂಲಕ ತರಲಾಗಿದೆ. ಈ ಯಂತ್ರವನ್ನು ಬಿಡಿಬಿಡಿಯಾಗಿ ತಂದು ಜೋಡಿಸಿ, ಗುರುವಾರದಿಂದ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಕಾರ್ಯಾಚರಣೆ ಆರಂಭಿಸಿದ ಕನಿಷ್ಠ 10 ಗಂಟೆಗಳ ಬಳಿಕ ಅದು ಕಾರ್ಮಿಕರು ಇರುವ ಸ್ಥಳ ತಲುಪಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ ಗುರುವಾರ ಸಂಜೆಯ ಬಳಿಕವಷ್ಟೇ ಕಾರ್ಮಿಕರ ರಕ್ಷಣೆ ಭರವಸೆ ವ್ಯಕ್ತವಾಗಿದೆ.

ಈ ನಡುವೆ ನೀರು, ಅಹಾರಕ್ಕಿಂತ ಒಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರು ಮಾನಸಿಕವಾಗಿ ಖಿನ್ನತೆಯ ಸಮಸ್ಯೆ, ಶೌಚದ ಸಮಸ್ಯೆ ಎದುರಿಸುತ್ತಿರಬಹುದು. ಅದೇ ಅವರನ್ನು ಹೆಚ್ಚಾಗಿ ಕಾಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2 ದಿನಕ್ಕಾಗುವಷ್ಟೇ ಎಲ್ಪಿಜಿ - ಹೋಟೆಲ್‌ನಲ್ಲಿ ಮೆನು ಕಡಿತ, ಕಾಫಿ ಬದಲು ಜ್ಯೂಸ್‌!
40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌