;Resize=(412,232))
ನವದೆಹಲಿ : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪುಕೋಟೆ ಸಂಕೀರ್ಣದಲ್ಲಿ ಮೊದಲ ಬಾರಿಗೆ ಪೂರ್ಣ 6 ಚರಣಗಳೊಂದಿಗೆ ವಂದೇ ಮಾತರಂ ಗೀತೆ ಹಾಡಲಾಯಿತು, ನಂತರ ರಾಷ್ಟ್ರಗೀತೆಯನ್ನು ಹಾಡಲಾಯಿತು.
ರಾಷ್ಟ್ರೀಯ ಗೀತೆ ವಂದೇ ಮಾತರಂ ನ 150ನೇ ವರ್ಷಾಚರಣೆ ಈಗ ನಡೆಯುತ್ತಿದೆ. ಹೀಗಾಗಿ ಗೋಡೆಯ ಮೇಲಿನ ಹೂವಿನ ಅಲಂಕಾರದ ಮಧ್ಯದಲ್ಲಿ ರಾಷ್ಟ್ರಧ್ವಜ ಚಿತ್ರಿಸಲಾಗಿತ್ತು. ಅದರ ಪಕ್ಕದಲ್ಲಿ ಹಿಂದಿಯಲ್ಲಿ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
‘ಇಂದು ಈ ಸಮಾರಂಭದಲ್ಲಿ ಹಾಜರಿರುವ ಪ್ರತಿಯೊಬ್ಬರಿಗೂ ಇದು ಐತಿಹಾಸಿಕ ಕ್ಷಣ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಆ.15ರಂದು ಕೆಂಪುಕೋಟೆಯಿಂದ ವಂದೇ ಮಾತರಂ ಪ್ರತಿಧ್ವನಿಸುತ್ತಿದೆ. ಮತ್ತು ನಾವು ಇಂದು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಇದಕ್ಕಿಂತ ಅದ್ಭುತವಾದ ಸಂದರ್ಭ ಇನ್ನೊಂದಿಲ್ಲ. ಪ್ರತಿ ಹೃದಯ ಬಡಿತವೂ ವಂದೇ ಮಾತರಂ ಪಠಣದೊಂದಿಗೆ ಪ್ರತಿಧ್ವನಿಸುತ್ತದೆ’ ಎಂದು ಮೋದಿ ಹರ್ಷಿಸಿದರು.
ನವದೆಹಲಿ: ಶನಿವಾರ ಕೆಂಪು ಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸತತ ಎರಡನೇ ವರ್ಷ ಭಾಗವಹಿಸಲಿಲ್ಲ.
ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರಿಗೆ ಆಸನ ವ್ಯವಸ್ಥೆ ಅವರ ಸ್ಥಾನಗಳಿಗೆ ಅನುಗುಣವಾಗಿರಲಿಲ್ಲ. ಇಬ್ಬರೂ ಉಭಯ ಸದನಗಳ ಪ್ರತಿಪಕ್ಷದ ನಾಯಕರಾಗಿರುವ ಕಾರಣ ಅವರಿಗೆಮುಂದಿನ ಸಾಳಿನಲ್ಲೇ ಆಸನ ವ್ಯವಸ್ಥೆ ಮಾಡಬೇಕು. ಆದರೆ ಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷವೂ ಇಬ್ಬರೂ ಭಾಗವಹಿಸಿರಲಿಲ್ಲ. ಇನ್ನು 2024ರಲ್ಲಿ ರಾಹುಲ್ ಗಾಂಧಿ ಅವರಿಗೆ 5ನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಇದು ವಿವಾದಕ್ಕೀಡಾಗಿತ್ತು.
ಕೆಂಪುಕೋಟೆ ಸ್ವಾತಂತ್ರ್ಯ ದಿನಾಚಣೆಯಲ್ಲಿ ಭಾಗವಹಿಸದ ರಾಹುಲ್ ಗಾಂಧಿ ದಿಮಾಗಿ ನಕ್ಸಲ್ ಮನಸ್ಥಿತಿಯವರು ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದಾರೆ.