ಭಾರತದಲ್ಲಿ ಹಲವರ ವಾಟ್ಸಾಪ್‌ಖಾತೆ ದಿಢೀರ್‌ ಬ್ಲಾಕ್‌, ಆಕ್ರೋಶ

KannadaprabhaNewsNetwork |  
Published : Aug 05, 2026, 03:00 AM IST
ಮೆಟಾ | Kannada Prabha

ಸಾರಾಂಶ

ಭಾರತವೂ ಸೇರಿ ಹಲವೆಡೆ ವಾಟ್ಸಾಪ್‌ ತನ್ನ ಹಲವು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ ಬ್ಲಾಕ್‌ ಮಾಡಿ ಶಾಕ್‌ ನೀಡಿದೆ. ‘ನಿಮ್ಮ ಖಾತೆ 24 ಗಂಟೆಗಳ ಪರಿಶೀಲನೆಯಲ್ಲಿದೆ’ ಎಂಬ ಸಂದೇಶ ಕಳುಹಿಸಿ ದಿಢೀರ್‌ ಹಲವರ ಖಾತೆ ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿದೆ. ಸಂಸ್ಥೆಯ ಈ ದಿಢೀರ್‌ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- ಸುರಕ್ಷತೆ ಕಾರಣಕ್ಕೆ 24 ಗಂಟೆ ಪರಿಶೀಲನೆಯಲ್ಲಿಟ್ಟಿದ್ದೇವೆ

- ತಪ್ಪಾಗಿದ್ರೆ ಸರಿಪಡಿಸುವ ಕೆಲ್ಸ ಮಾಡುತ್ತೇವೆ: ವಾಟ್ಸಾಪ್‌

ನವದೆಹಲಿ: ಭಾರತವೂ ಸೇರಿ ಹಲವೆಡೆ ವಾಟ್ಸಾಪ್‌ ತನ್ನ ಹಲವು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ ಬ್ಲಾಕ್‌ ಮಾಡಿ ಶಾಕ್‌ ನೀಡಿದೆ. ‘ನಿಮ್ಮ ಖಾತೆ 24 ಗಂಟೆಗಳ ಪರಿಶೀಲನೆಯಲ್ಲಿದೆ’ ಎಂಬ ಸಂದೇಶ ಕಳುಹಿಸಿ ದಿಢೀರ್‌ ಹಲವರ ಖಾತೆ ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿದೆ. ಸಂಸ್ಥೆಯ ಈ ದಿಢೀರ್‌ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ಸುರಕ್ಷತಾ ಕ್ರಮಗಳ ಅನುಷ್ಠಾನದ ವೇಳೆ ಕೆಲ ಸಮಸ್ಯೆಗಳು ಉಂಟಾಗಬಹುದು. ನಮ್ಮ ಸೇವೆಯ ದುರ್ಬಳಕೆ ತಡೆಯಲು ಹಾಗೂ ಇತರೆ ಬಳಕೆದಾರರ ಸುರಕ್ಷತೆಯ ಉದ್ದೇಶದಿಂದ ನಾವು ಕೆಲ ಖಾತೆಗಳನ್ನು ನಿಷೇಧಿಸುವ ಕೆಲಸ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮಿಂದ ತಪ್ಪುಗಳೂ ಆಗಬಹುದು. ಅದು ಗಮನಕ್ಕೆ ಬಂದ ತಕ್ಷಣ ನಾವು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ವಾಟ್ಸಾಪ್‌ ವಕ್ತಾರರೊಬ್ಬರು ಈ ಬೆಳವಣಿಗೆಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡಿದ್ದಾರೆ.

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಬೆಳವಣಿಗೆ ಆಗಿದ್ದು, ಹಲವು ಬಳಕೆದಾರರು ವಾಟ್ಸಾಪ್‌ ಮೂಲಕ ಚಾಟ್‌ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದಾರೆ. ಈ ವೇಳೆ ಅವರ ವಾಟ್ಸಾಪ್‌ ಸ್ಕ್ರೀನ್‌ನಲ್ಲಿ ‘ನಿಮ್ಮ ಖಾತೆ 24 ಗಂಟೆ ಪರಿಶೀಲನೆಯಲ್ಲಿದೆ’ ಎಂಬ ಸಂದೇಶ ಹಾಕಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚಂದ್ರನ ಮೇಲೆ ನಾಳೆ ಸ್ಪೇಸ್‌ ಎಕ್ಸ್‌ನ ರಾಕೆಟ್‌ ಕ್ರ್ಯಾಶ್‌
ಮೋದಿ ವಿಡಿಯೋ ಡಿಲೀಟ್‌ : ಜುಕರ್‌ಬರ್ಗ್‌ ಕ್ಷಮೆಗೆ ಪಟ್ಟು