ಬಯೋಕಾನ್‌ಗೆ ಕ್ಲೇರ್‌ ಮಜುಂದಾರ್‌ ಉತ್ತರಾಧಿಕಾರಿ

KannadaprabhaNewsNetwork |  
Published : May 06, 2026, 04:15 AM IST
ಕ್ಲೇರ್‌  | Kannada Prabha

ಸಾರಾಂಶ

ಬೆಂಗಳೂರು ಮೂಲದ ಬಹುರಾಷ್ಟ್ರೀಯ ಬಯೋಟೆಕ್‌ ದಿಗ್ಗಜ ಕಂಪನಿ ಬಯೋಕಾನ್‌ನ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಅ‍ವರು ತಮ್ಮ ಉತ್ತರಾಧಿಕಾರಿಯಾಗಿ ಸಂಬಂಧದಲ್ಲಿ ಸೊಸೆಯಾಗಿರುವ ಕ್ಲೇರ್‌ ಮಜುಂದಾರ್‌ (37) ಅವರ ಹೆಸರು ಘೋಷಿಸಿದ್ದಾರೆ.

- ಕಿರಣ್‌ ಮಜುಂದಾರ್‌ರಿಂದ ಘೋಷಣೆ

ನವದೆಹಲಿ: ಬೆಂಗಳೂರು ಮೂಲದ ಬಹುರಾಷ್ಟ್ರೀಯ ಬಯೋಟೆಕ್‌ ದಿಗ್ಗಜ ಕಂಪನಿ ಬಯೋಕಾನ್‌ನ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಅ‍ವರು ತಮ್ಮ ಉತ್ತರಾಧಿಕಾರಿಯಾಗಿ ಸಂಬಂಧದಲ್ಲಿ ಸೊಸೆಯಾಗಿರುವ ಕ್ಲೇರ್‌ ಮಜುಂದಾರ್‌ (37) ಅವರ ಹೆಸರು ಘೋಷಿಸಿದ್ದಾರೆ.

ಕಿರಣ್‌ ಮಜುಂದಾರ್‌ (73) ಅ‍ವರಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಸೊಸೆಯನ್ನೇ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ. ಕ್ಲೇರ್‌ ಅವರ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಬಯೋಟೆಕ್‌ ವ್ಯವಹಾರ ಮುನ್ನಡೆಸುವ ಸಾಮರ್ಥ್ಯ ಮನಗಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಮೆಸ್ಯಾಚುಯೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಬಯೋಲಾಜಿಕಲ್‌ ಎಂಜಿನಿಯರಿಂಗ್‌ ಪದವೀಧರೆಯಾಗಿರುವ ಕ್ಲೇರ್‌, ಕ್ಯಾನ್ಸರ್‌ ಬಯೋಲಜಿಯಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ಬಯೋಕಾನ್‌ನಿಂದ ಪ್ರೇರಣೆಗೊಂಡು ಸ್ಥಾಪಿತ ಬಿಕಾರಾ ಥೆರಪಿಟಿಕ್ಸ್‌ನನ ಸಿಇಒ ಆಗಿದ್ದಾರೆ. ಈ ಕಂಪನಿಯು 2024ರಲ್ಲಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿದೆ. ಸದ್ಯ ಅದರ ಮೌಲ್ಯ 6,800 ಕೋಟಿ ರು. ಆಗಿದ್ದು, ₹1,52,480 ಕೋಟಿ ಮಾರುಕಟ್ಟೆ ಬಂಡವಾಳದತ್ತ ಈ ಕಂಪನಿ ದಾಪುಗಾಲಿಡುತ್ತಿದೆ. ಕ್ಲೇರ್‌ ಅವರಿಗೆ ಹಂತ ಹಂತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಕಿರಣ್‌ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೊರೋನಾ ರೀತಿ ‘ಹಂಟು ವೈರಸ್‌’ ಪತ್ತೆ: ಸೋಂಕಿಗೆ 3 ಬಲಿ
ಬಂಗಾಳ ಫಲಿತಾಂಶ ಬೆನ್ನಲ್ಲೇ ಐಪ್ಯಾಕ್‌ ಜತೆ ಎಸ್‌ಪಿ ನಂಟು ಕಟ್‌