ಬರೀ ರೀಲ್ಸ್‌ ಮಾಡ್ತೀರೋ, ಕೇಸ್ ಹಿಂಪಡೀತಿರೋ?: ಮೋದಿಗೆ ದೀಪ್ಕೆ ಪ್ರಶ್ನೆ

KannadaprabhaNewsNetwork |  
Published : Aug 02, 2026, 03:00 AM ISTUpdated : Aug 02, 2026, 04:11 AM IST
abhijeet deepke

ಸಾರಾಂಶ

ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಕ್ಕಳನ್ನು ಕ್ಷಮಿಸುವಂತೆ ಪ್ರಧಾನಿ ಮೋದಿ ಮಾಡಿದ ವಿಡಿಯೋಗೆ ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಶನಿವಾರ ಪ್ರತಿಕ್ರಿಯಿಸಿದ್ದು, ‘ನೀವು ರೀಲ್ಸ್‌ ಮಾತ್ರ ಮಾಡುತ್ತೀರೋ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತೀರೋ?’ ಎಂದು ಪ್ರಶ್ನಿಸಿaದ್ದಾರೆ.

ಪುಣೆ: ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಕ್ಕಳನ್ನು ಕ್ಷಮಿಸುವಂತೆ ಪ್ರಧಾನಿ ಮೋದಿ ಮಾಡಿದ ವಿಡಿಯೋಗೆ ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಶನಿವಾರ ಪ್ರತಿಕ್ರಿಯಿಸಿದ್ದು, ‘ನೀವು ರೀಲ್ಸ್‌ ಮಾತ್ರ ಮಾಡುತ್ತೀರೋ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತೀರೋ?’ ಎಂದು ಪ್ರಶ್ನಿಸಿದ್ದಾರೆ.  

ವಿದ್ಯಾರ್ಥಿಗಳನ್ನು ‘ಫ್ರೆಂಡ್ಸ್‌’ ಎಂದು ಕರೆದಿದ್ದರು.

ತಮ್ಮ ಸೆಲ್ಫಿ ವಿಡಿಯೋಗಳಲ್ಲಿ ಮೋದಿ, ವಿದ್ಯಾರ್ಥಿಗಳನ್ನು ‘ಫ್ರೆಂಡ್ಸ್‌’ ಎಂದು ಕರೆದಿದ್ದರು. ಇದನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವ ದೀಪ್ಕೆ, ‘ಫ್ರೆಂಡ್‌, ನೀವು ಮಕ್ಕಳನ್ನು ಕೇವಲ ರೀಲ್‌ಗಳ ಮೂಲಕ ಕ್ಷಮಿಸುತ್ತೀರಾ ಅಥವಾ ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೀರಾ?’ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ನಾಟಕ- ಕಾಂಗ್ರೆಸ್:

‘ಮೋದಿ ತಮ್ಮನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆ ಎಂದು ಹೇಳುವ ಮೂಲಕ ಬಲಿಪಶುವಿನ ನಾಟಕ ಮಾಡುತ್ತಿದ್ದಾರೆ. ಇದರ ಬದಲು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್‌ ಆಗ್ರಹಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚಂದಾ ಚೋರಿ ಪ್ರಹಸನ: ರಾಗಾ, ಪಪ್ಪು ವಿರುದ್ಧ ಎಫ್‌ಐಆರ್‌
ಜುಲೈನಲ್ಲಿ ಭರ್ಜರಿ ₹2.11 ಲಕ್ಷ ಕೋಟಿ ಜಿಎಸ್‌ಟಿ: 2ನೇ ಗರಿಷ್ಠ