ಚಂದಾ ಚೋರಿ ಪ್ರಹಸನ: ರಾಗಾ, ಪಪ್ಪು ವಿರುದ್ಧ ಎಫ್‌ಐಆರ್‌

KannadaprabhaNewsNetwork |  
Published : Aug 02, 2026, 01:45 AM IST
Rahul Gandhi

ಸಾರಾಂಶ

ಅಯೋಧ್ಯೆ ಚಂದಾ ಚೋರಿ ವಿರುದ್ಧದ ಪ್ರತಿಭಟನೆ ವೇಳೆ ಸನಾತನ ಧರ್ಮಕ್ಕೆ ಅವಮಾನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದರಾದ ಪಪ್ಪು ಯಾದವ್‌ ಹಾಗೂ ಅವಧೇಶ್ ಪ್ರಸಾದ್ ವಿರುದ್ಧ ವಾರಾಣಸಿ ಹಾಗೂ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಾರಾಣಸಿ/ನವದೆಹಲಿ: ‘ಸಂಸತ್‌ನಲ್ಲಿ ಅಯೋಧ್ಯೆ ಚಂದಾ ಚೋರಿ ವಿರುದ್ಧದ ಪ್ರತಿಭಟನೆ ವೇಳೆ ಸನಾತನ ಧರ್ಮಕ್ಕೆ ಅವಮಾನಿಸಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದರಾದ ಪಪ್ಪು ಯಾದವ್‌ ಹಾಗೂ ಅವಧೇಶ್ ಪ್ರಸಾದ್ ವಿರುದ್ಧ ವಾರಾಣಸಿ ಹಾಗೂ ದೆಹಲಿಯಲ್ಲಿ ಎಫ್‌ಐಆರ್‌

ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೆಹಲಿಯಲ್ಲಿ ಬಿಜೆಪಿ ಸಂಸದೆ ಸ್ವರಾಜ್‌ ಬಾನ್ಸುರಿ ಸ್ವರಾಜ್‌, ಪಾರ್ಲಿಮೆಂಟ್‌ ಸ್ಟ್ರೀಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಕೆಲವು ಸಂತರು ಈ ಕುರಿತು ವಾರಾಣಸಿಯ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಎಫ್‌ಐಆರ್ ದಾಖಲಾಗಿದೆ.

ಅಯೋಧ್ಯೆ ದೇಣಿಗೆ ಕಳ್ಳತನವನ್ನು ಬಿಂಬಿಸುವ ಪ್ರಹಸನ

ಅಯೋಧ್ಯೆ ದೇಣಿಗೆ ಕಳ್ಳತನವನ್ನು ಬಿಂಬಿಸುವ ಪ್ರಹಸನವೊಂದನ್ನು ಲೋಕಸಭೆ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಅದರಲ್ಲಿ ಪಪ್ಪು ಸಂತರ ವೇಷ ಧರಿಸಿದ್ದರು. ಆಗ ರಾಹುಲ್‌ ಕಾಣಿಕೆ ಡಬ್ಬಿಗೆ ಹಣ ಹಾಕುವ ರೀತಿ ನಟಿಸಿದ್ದರು. ಅಯೋಧ್ಯೆ (ಫೈಜಾಬಾದ್) ಎಸ್ಪಿ ಸಂಸದ ಅವಧೇಶ ಪ್ರಸಾದ್ ಕೂಡ ಅದರಲ್ಲಿ ನಟಿಸಿದ್ದರು.

ಅದರಂತೆ ರಾಹುಲ್‌ ಜತೆಗೆ ಬಿಹಾರದ ಪೂರ್ಣಿಯಾ ಸಂಸದ ಪಪ್ಪು ಯಾದವ್ , ಉತ್ತರಪ್ರದೇಶದ ಫೈಜಾಬಾದ್‌ ಕ್ಷೇತ್ರದ ಎಸ್‌ಪಿ ಸಂಸದ ಅವಧೇಶ್ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬರೀ ರೀಲ್ಸ್‌ ಮಾಡ್ತೀರೋ, ಕೇಸ್ ಹಿಂಪಡೀತಿರೋ?: ಮೋದಿಗೆ ದೀಪ್ಕೆ ಪ್ರಶ್ನೆ
ಜುಲೈನಲ್ಲಿ ಭರ್ಜರಿ ₹2.11 ಲಕ್ಷ ಕೋಟಿ ಜಿಎಸ್‌ಟಿ : 2ನೇ ಗರಿಷ್ಠ