ಕನ್ನಡಪ್ರಭ ವಾರ್ತೆ ಪಡುಬಿದ್ರಿ
ನಂತರ ಮಾತನಾಡಿದ ಅವರು, ಬಹುತೇಕ ಜನತೆಯ ಅವಲಂಬಿತ ವೃತ್ತಿ ಕೃಷಿ, ಕಾಂಗ್ರೆಸ್ ಸರ್ಕಾರ ಕೃಷಿಗೆ, ಕೃಷಿಗೆ ಒತ್ತು ನೀಡುತ್ತಿದೆ. ನನ್ನದೆಂಬುದು ಏನಿಲ್ಲ ಎಂದು ಜನತೆ ಸಂಕಷ್ಟದಲ್ಲಿದ್ದಾಗ ಉಳುವವನೇ ಹೊಲದೊಡೆಯ ಕಾನೂನು ಮೂಲಕ ಕಾಂಗ್ರೆಸ್ ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಬದುಕು, ಮನೆ ಬೆಳಗಲು ಸಹಾಯ ಮಾಡಿದೆ ಎಂದರು.
ಜನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ, ಬಡತನದಲ್ಲೂ ಆಟಿಯ ಕಾಲದಲ್ಲಿ ಕೂಡು ಕುಟುಂಬದ ಹಸಿವನ್ನು ನುಂಗಿ ಬದುಕಿದ ಅಂದಿನ ನಮ್ಮ ಹಿರಿಯ ನೆನಪು ನಮಗಿರಬೇಕು. ಇಂದಿನ ರಾಸಾಯನಿಕಯುಕ್ತ ಆಹಾರದಿಂದ ನಗುತ್ತಿರುವ ನಮಗೆ, ಆಟಿಯ ಖಾದ್ಯಗಳ ಸೇವನೆ ಔಷಧಿಯಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೊಯುದ್ದೀನ್ ಪಡುಬಿದ್ರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಚಲನಚಿತ್ರ, ರಂಗಭೂಮಿ ಕಲಾವಿದ ಶಶಿಧರ್ ಗುಜರನ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಂಚಿನಡ್ಕ, ಪೌರ ಕಾರ್ಮಿಕರಾದ ಪ್ರಸಾದ್ ಕಂಚಿನಡ್ಕ, ಶಶಿಕುಮಾರ್ ಬೆಳಪು ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಿತ ಡ್ಯಾಝ್ಲ್ ಸ್ಟುಡಿಯೋ ನೃತ್ಯ ತಂಡದಿಂದ ನೃತ್ಯೋತ್ಸವ ವೈಭವದ ಜೊತೆಗೆ ಆಟಿದ ತಮ್ಮನ ಸಾಮೂಹಿಕ ಭೋಜನ ನಡೆಯಿತು.