ಕಲಾವೈಭವದಲ್ಲಿ ಪಾಲ್ಗೊಂಡ ಅಮೆರಿಕಾ ಸಾಗಿನಾವ ವಿವಿ ಡೀನ್, ಪ್ರೊಫೆಸರ್ , ಅಧ್ಯಾಪಾಕರು, ಶಿಕ್ಷಕರು

KannadaprabhaNewsNetwork | Published : Aug 12, 2024 1:11 AM

ಸಾರಾಂಶ

ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯದೊಂದಿಗೆ ವಿದ್ಯಾರ್ಥಿ ವಿನಿಮಯ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಾಗಿನಾವ ವಿವಿ ಪ್ರಾಧ್ಯಾಪಕರು, ಶಿಕ್ಷಕರು ಸಂಸ್ಥೆಗೆ ಆಗಮಿಸಿ ಶಾಲೆಯಲ್ಲಿ ನಡೆಯುವ ತರಗತಿಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಲಾವೈಭವ ಕಾರ್ಯಕ್ರಮದಲ್ಲಿ ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯ ಡೀನ್, ಪ್ರೊಫೆಸರ್, ಅಧ್ಯಾಪಕರು ಹಾಗೂ ಶಿಕ್ಷಕರು ಭಾಗವಹಿಸಿ ಮಕ್ಕಳ ವೈವಿದ್ಯಮ ಚಿತ್ರಕಲೆಯನ್ನು ವೀಕ್ಷಣೆ ಮಾಡಿದರು.

ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯದೊಂದಿಗೆ ವಿದ್ಯಾರ್ಥಿ ವಿನಿಮಯ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಾಗಿನಾವ ವಿವಿ ಪ್ರಾಧ್ಯಾಪಕರು, ಶಿಕ್ಷಕರು ಸಂಸ್ಥೆಗೆ ಆಗಮಿಸಿ ಶಾಲೆಯಲ್ಲಿ ನಡೆಯುವ ತರಗತಿಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು.

ನಂತರ ಶಾಲೆಯ ಶಿಕ್ಷಣದ ಗುಣಮಟ್ಟದ ಜತೆಗೆ ಪಠ್ಯೇತರ ಚಟುವಟಿಕೆಗಳ ಗುಣಮಟ್ಟವನ್ನು ವೀಕ್ಷಣೆ ಮಾಡಿದರು. ನಂತ ಕಲಾವೈಭವ ಕಾರ್ಯಕ್ರಮದಲ್ಲಿ ತಂಡ ಭಾಗವಹಿಸಿ ಮಕ್ಕಳು ಪ್ರದರ್ಶಿಸಿದ್ದ ವೈವಿದ್ಯಮ ಚಿತ್ರಕಲೆಗಳನ್ನು ವೀಕ್ಷಣೆ ಮಾಡಿದರು. ವಿಶೇಷವಾಗಿ ಶಾಲೆಯಲ್ಲಿ ಮಕ್ಕಳಿಗೆ ಪರಿಚಯಿಸಿ ಪ್ರದರ್ಶಿಸಲಾಗಿದ್ದ ರೋಬೋಟಿಕ್ಸ್ ಮಾದರಿಗಳನ್ನು ವೀಕ್ಷಣೆ ಮಾಡಿ ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಶಾಲಾ ಮಕ್ಕಳ ಕಲೆ, ವೈಶಿಷ್ಟ್ಯ, ಸಂವಾದ, ಕೌಶಲ್ಯ ಹಾಗೂ ಶಾಲೆಯಲ್ಲಿ ಮಕ್ಕಳ ಶಿಕ್ಷಣದ ಗುಣಮಟ್ಟಕ್ಕೆ ಕೈಗೊಂಡಿರುವ ವಿನೂತನ ಕಾರ್ಯಕ್ರಮಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ನಡೆದ ಪೋಷಕರ ಸಭೆಯಲ್ಲಿ ಪೋಷಕರೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದ ಬಗ್ಗೆ ಚರ್ಚಿಸಿದರು. ಎಲ್ಲಾ ಪೋಷಕರು ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಕೇಳಿ ಶಾಲೆ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದರು.

ಈ ವೇಳೆ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಪ್ರಾಂಶುಪಾಲೆ ಮಾಚಮ್ಮ, ಆಡಳಿತಾಕಾರಿ ನಿವೇತನಾಗೇಶ್ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.

ನಾಳೆ ಪ್ರತಿಭಾ ಪುರಸ್ಕಾರ, ಅಭಿನಂದನೆ, ಧನ ಸಹಾಯ ಸಮಾರಂಭ

ಮಂಡ್ಯ:ಭಾರತ ಸೇವಾದಳ, ಸೆಂಟ್ ಜಾನ್ ಆಂಬುಲೆನ್ಸ್ , ದಿಯಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆ.14ರಂದು ಸುಭಾಷ್ ನಗರದ ಡಾ.ನಾ.ಸು.ಹರ್ಡಿಕರ್ ಭವನದಲ್ಲಿ ಪ್ರತಿಭಾ ಪುರಸ್ಕಾರ, ಅಭಿನಂದನೆ, ಧನ ಸಹಾಯ ಸಮಾರಂಭವನ್ನು ಆಯೋಜಿಸಲಾಗಿದೆ.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಜಿಲ್ಲಾ ಅಭಿವೃದ್ಧಿ ಪಥ, ಆನೆ ಪಾರ್ಕ್ ಗ್ರೂಪ್‌, ಜಿಲ್ಲಾ ಬ್ರಾಹ್ಮಣ ಬಳಗ ಸಹಕಾರದಲ್ಲಿಸಮಾರಂಭವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸುವರು, ಭಾರತ ಸೇವಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಕಮಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಸೇವಾದಳ ಅಧ್ಯಕ್ಷ ಬಿ.ಸಿ.ಶಿವಾನಂದ, ಸೆಂಟ್ ಜಾನ್ ಸೇವಾದಳ ಕಾರ್ಯದರ್ಶಿ ಜಿ.ವಿ.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡುವರು. ಸೇವಾದಳದ ಕೇಂದ್ರ ಸಮಿತಿ ಸದಸ್ಯ ವೈ.ಬಿ.ಬಸವರಾಜು ಪ್ರತಿಭಾ ಪುರಸ್ಕಾರ ನೆರವೇರಿಸುವರು. ಅತಿಥಿಗಳಾಗಿ ಚಿತ್ರ ನಟ ಶಂಕರ್ ಅಶ್ವಥ್, ನಗರಸಭಾ ಸದಸ್ಯ ಎಂ.ಎನ್ .ಶ್ರೀಧರ್, ಜಿಲ್ಲಾ ಕಾಂಗ್ರೆಸ್ ಮುಖಂಡ ರುದ್ರಪ್ಪ, ಎಕೆಬಿಎಂಎಸ್ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಬೇಲೂರು ಸೋಮಶೇಖರ್, ಸೇವಾದಳ ಜಿಲ್ಲಾ ಖಜಾಂಚಿ ಶಿವಪ್ರಕಾಶ್, ಸೆಂಟ್ ಜಾನ್ ಖಜಾಂಚಿ ಸಜ್ಜನ್ ರಾಜ್ ಕೊಠಾರಿ ಹಲವರು ಭಾಗವಹಿಸುವರು.

Share this article