ಕನ್ನಡಪ್ರಭ ವಾರ್ತೆ ಬೀಳಗಿ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿಗಳು ವಹಿಸಲಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ಅವರು ಸಮಾರಂಭ ಉದ್ಘಾಟಿಸುವರು. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆಯನ್ನು ವಸತಿ ಸಚಿವ ಜಮೀರ ಅಹ್ಮದಖಾನ್ ನೆರವೇರಿಸುವರು. ಭಾವಚಿತ್ರಗಳಿಗೆ ಪುಷ್ಪನಮನವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ನೆರವೇರಿಸುವರು. ಶಾಸಕ ಜೆ ಟಿ ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಸ್ ಆರ್ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ, ಬಿಡಿಸಿಸಿ ಬ್ಯಾಂಕ್ ಬಾಗಲಕೋಟೆ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವಪ್ರಭು ಸರನಾಡಗೌಡರ, ವೀಣಾ ಕಾಶಪ್ಪನವರ, ರಕ್ಷಿತಾ ಈಟಿ, ಹಣಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಕಸ್ತೂರಿ ಲಿಂಗಣ್ಣವರ, ಪಪಂ ಸದಸ್ಯರಾದ ರುಕ್ಮಿಣಿ ಗಚ್ಚಿನಮನಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೋಳ್ಳಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು ವಿಶೇಷ ಉಪನ್ಯಾಸ ನೀಡುವರು.೭ರಂದು ಸಂಜೆ ಇಲ್ಲಿನ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಟಿಪ್ಪು ವೃತ್ತ ಗಾಂಧಿ ವೃತ್ತದಿಂದ ಕದಂಗಲ್ಲ ಹಣಮಂತರಾಯ ರಂಗಮಂದಿರದವರಿಗೆ ಭಾವಚಿತ್ರ ಮೆರವಣಿಗೆ ಮತ್ತು ಬೃಹತ್ ಪಂಜಿನ ಮೆರವಣಿಗೆ ಜರುಗಲಿದೆ. ಎಲ್ಲ ಪ್ರಗತಿಪರ ಚಿಂತಕರು,ಯುವಕರು,ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಾರುತಿ ಚಿಕ್ಕಾಲಗುಂಡಿ, ಜಿಲ್ಲಾ ಅಲ್ಪಸಂಖ್ಯಾತರ ಸಂಚಾಲಕ ಕಾಶಿಂಅಲಿ ಗೋಠೆ, ಚಿನ್ನಪ್ಪ ಬಂಡಿವಡ್ಡರ, ಸಿದ್ದು ಹಿರೇಮನಿ, ಶಿವನಿಂಗ ಕಾತರಕಿ ಸೇರಿದಂತೆ ಇತರರು ಇದ್ದರು.