ಬೈಕ್‌ಗಳಿಗೆ ಕರ್ಕಶ ಶಬ್ಧದ ದುಬಾರಿ ಬೆಲೆಯ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡರೆ ‘ಬುಲ್ಡೋಜರ್ ಶಿಕ್ಷೆ’

KannadaprabhaNewsNetwork |  
Published : Aug 29, 2024, 01:00 AM ISTUpdated : Aug 29, 2024, 05:44 AM IST
ಸಿಕೆಬಿ-1 ಕರ್ಕಶ ಶಬ್ಧ ಮಾಡಿದ ಸೈಲೆನ್ಸರ್ ಗಳ ಮೇಲೆ ಚಿಕ್ಕಬಳ್ಳಾಪುರ  ಬುಲ್ಡೋಜರ್ ಹರಿಸಿ ನಾಶಪಡಿಸಿದರು | Kannada Prabha

ಸಾರಾಂಶ

ಒಂದು ಬೈಕ್ ಸೈಲೆನ್ಸರ್ 50 ಸಾವಿರ ರು.ಗಳು. ಕೆಲವರು 20 ಸಾವಿರ, 25 ಸಾವಿರ ರೂಪಾಯಿ ಕೊಟ್ಟು ಸೈಲೆನ್ಸರ್ ಹಾಕಿಸಿರುತ್ತಾರೆ. ಅದೇ ದುಡ್ಡನ್ನು ಕೊಟ್ಟು ಪುಸ್ತಕಗಳನ್ನು ಖರೀದಿಸಿ ಓದಿ, ಮತ್ತು ಅನಾಥ, ವೃದ್ದಾಶ್ರಮಗಳಿಗೆ ಸಹಾಯ ಮಾಡಿ ಅಥವಾ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ನೀಡಲು ಬಳಸಲಿ

 ಚಿಕ್ಕಬಳ್ಳಾಪುರ :  ಬೈಕ್‌ಗಳಿಗೆ ದುಬಾರಿ ಬೆಲೆಯ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ 200 ಕ್ಕೂ ಹೆಚ್ಚು ಬೈಕ್‌ಗಳ ಸೈಲೆನ್ಸರ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಅವುಗಳ ಮೇಲೆ ರೋಡ್‌ ರೋಲರ್‌ ಹರಿಸಿ ನಾಶಪಡಿಸುವ ಮೂಲಕ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರವರ ನಿರ್ದೇಶನದಂತೆ ನಗರ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕರ್ಕಶ ಶಬ್ದ ಮಾಡುವಂತಹ ಸುಮಾರು 8ರಿಂದ10 ಲಕ್ಷ ರುಪಾಯಿ ಮೌಲ್ಯದ 200 ಕ್ಕೂ ಹೆಚ್ಚು ಬೈಕ್ ಗಳ ಸೈಲೆನ್ಸರ್ ಗಳನ್ನು ರೋಡ್ ರೋಲರ್‌ ಹರಿಸಿ ನಾಶಪಡಿಸಲಾಯಿತು. ಇದೇ ವೇಳೆ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಎಸ್ಪಿ ಚೌಕ್ಸೆ ನೀಡಿದರು.ತಿಂಗಳಿಂದ ನಡೆದ ಕಾರ್ಯಾಚರಣೆ

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಬೈಕ್ ಸೈಲೆನ್ಸರ್ 50 ಸಾವಿರ ರು.ಗಳು. ಕೆಲವರು 20 ಸಾವಿರ, 25 ಸಾವಿರ ರೂಪಾಯಿ ಕೊಟ್ಟು ಸೈಲೆನ್ಸರ್ ಹಾಕಿಸಿರುತ್ತಾರೆ. ಅದೇ ದುಡ್ಡನ್ನು ಕೊಟ್ಟು ಪುಸ್ತಕಗಳನ್ನು ಖರೀದಿಸಿ ಓದಿ, ಮತ್ತು ಅನಾಥ, ವೃದ್ದಾಶ್ರಮಗಳಿಗೆ ಸಹಾಯ ಮಾಡಿ ಅಥವಾ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ನೀಡಿ ಎಂದು ಯುವಕರಿಗೆ ಸಲಹೆ ನೀಡಿದರು.

ಅಂಗಡಿಗಳ ಮೇಲೆ ದಾಳಿ

ಇದು ಆರಂಭ ಮಾತ್ರ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕರ್ಕಶ ಸೈಲೆನ್ಸರ್ ಗಳು ಅಳವಡಿಸಿರುವ ಬೈಕ್ ಗಳ ವಿರುದ್ಧ, ಸೈಲೆನ್ಸರ್ ಅಳವಡಿಸುವ ಮತ್ತು ಮಾರುವ ಅಂಗಡಿಗಳ ಮೇಲೆ ದಾಳಿ ಮಾಡಿ ಜಪ್ತಿ ಮಾಡುತ್ತೇವೆ ಎಂದು ವಾಹನ ಸವಾರರಿಗೂ ಮತ್ತು ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಅದೇ ರೀತಿ ವಾಹನಗಳಿಗೆ ಅತಿ ಹೆಚ್ಚು ಬೆಳಕು ಬರುವ ಎಲ್ಇಡಿ ಲೈಟ್ ಗಳನ್ನು ಅಳವಡಿಸಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದೇವೆ. ಹೈ ಭೀಮ್ ಎಲ್ಇಡಿ ಹಾಕುವುದರಿಂದ ಎದುರಿಗೆ ಬರುವ ವಾಹನ ಚಾಲಕರಿಗೆ ರಸ್ತೆ ಕಾಣದೆ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ಅಪಘಾತಗಳು ಆಗುವ ಸಂಭವ ಇರುತ್ತದೆ. ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಈ ವೇಳೆ ಎಎಸ್ಪಿ ರಾಜಾ ಇಮಾಮ್ ಖಾಸೀಂ, ಡಿವೈಎಸ್ಪಿಪಿ ಎಸ್.ಶಿವಕುಮಾರ್, ನಗರ ಪೋಲಿಸ್ ಠಾಣೆ ಪಿಎಸ್ಐ ಹೆಚ್.ನಂಜುಂಡಯ್ಯ, ಸಂಚಾರಿ ಪೋಲಿಸ್ ಠಾಣೆ ಪಿಎಸ್ಐ ಮಂಜುಳ, ನಂದಿಗಿರಿಧಾಮ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ