ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಕ್ಕಳಲ್ಲಿ ಕ್ರಿಯಾಶೀಲತೆ ಅಡಗಿದ್ದು ಅದನ್ನು ಹೊರ ತರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಮಕ್ಕಳ ಸಾಹಿತಿ ಹ.ಮಾ.ಪೂಜಾರ ಹೇಳಿದರು. ತಾಲೂಕಿನ ಕೋರವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ “ಶಿಕ್ಷಣ ಯಾತ್ರೆ “ ಯೋಜನೆ ದೇವರ ಹಿಪ್ಪರಗಿ, ಜಿಲ್ಲಾಡಳಿತ ಸಹಯೋಗದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಹಕ್ಕುಗಳಾದ ಬದುಕುವ, ರಕ್ಷಣೆ, ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುವಂತೆ ಮಾಡಲು ಉಜ್ವಲ ಸಂಸ್ಥೆ ಹಗಲಿರುಳು ಸೇವೆ ಸಲ್ಲಿಸುತ್ತಲಿದ್ದು, ಅವರ ಸೇವೆ ಶ್ಲಾಘನೀಯ ಎಂದರು.ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಾಲವಾದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ ಮುಖ್ಯಗುರುಗಳಾದ ಮುಸ್ತಫಾ ಕುಡಚಿ, ಕಡಕೋಳ ಪ್ರಾಥಮಿಕ ಶಾಲೆಯ ರಘು.ಎಸ್, ಯಾಳವಾರ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಜ್ಯೋತಿ ಮೇತ್ರಿ, ಜಾಲವಾದ ಸರಕಾರಿ ಉರ್ದು ಶಾಲೆಯ ಸಹಶಿಕ್ಷಕಿ ತಸ್ನೀಮ್ ಆಯಿಶಾ, ಅಂಗನವಾಡಿ ಕಾರ್ಯಕರ್ತೆಯರಾದ ಮಣೂರ ಗ್ರಾಮದ ಶಾಂತಾಬಾಯಿ ಚಿಗರಿ, ಪಡಗಾನೂರಿನ ಮದುಮತಿ ಕಮತಗಿ, ಕೋರವಾರ ಗ್ರಾಮದ ಪ್ರೇಮಾ ಕುಳೇಕುಮಟಗಿಗೆ ಮಕ್ಕಳ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಎಸ್ ಎ ಕೋರವಾರ. ಯಶೋದಾ ಜೋಶಿ, ಉಜ್ಜಲ ಸಂಸ್ಥೆಯ ಐ ಎಲ್ ಪಿ ಯೋಜನೆ ನಿರ್ದೇಶಕರಾದ ವಾಸುದೇವ ತೋಳಬಂದಿ, ಶಿಕ್ಷಣ ಇಲಾಖೆ ಬಿಆರ್‌ಪಿ ಶ್ರೀದೇವಿ ರೆಬಿನಾಳ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಸೋಮಯ್ಯ ಹೀರೆಮಠ, ಗ್ರಾಪಂ ಅಧ್ಯಕ್ಷೆ ಶೈನಜೀಬಿ ಬ್ಯಾಕೋಡ, ಉಪಾಧ್ಯಕ್ಷ ಮಹಾದೇವಪ್ಪ ರಾಮನಳ್ಳಿ, ಸದಸ್ಯರಾದ ರಾಜಶೇಖರ ಛಾಯಗೋಳ, ಬಸನಗೌಡ ಬಿರಾದಾರ, ಕಾರ್ಯದರ್ಶಿ ಜಿ.ವಿ.ಪಟ್ಟಣಶೆಟ್ಟಿ. ಸಿಬ್ಬಂದಿ ಮುನ್ನಾ ಟಕ್ಕಳಕಿ, ಪ್ರಮುಖರಾದ ರಾಜಶೇಖರಗೌಡ ಪೋಲಿಸ್ ಪಾಟೀಲ, ಕಂದಾಯ ಇಲಾಖೆ ರಾಘವೇಂದ್ರ ಜೋಶಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧಾದಿಕಾರಿ ಸಿದ್ದಪ್ಪ ಚಿರ್ಚಿನಕಲ್ಲ, ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆಯ ಮುಖ್ಯಗುರುಗಳು, ಉಜ್ಜಲ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ, ಸಂಯೋಜಕ ಸಾಗರ ಘಾಟಗೆ, ಭೀಮಬಾಯಿ ಹೇರೂರ, ಮಲ್ಲಮ್ಮ ಹೊನ್ನಳ್ಳಿ, ಪ್ರಾಥಮಿಕ, ಪ್ರೌಢ ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ,ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉಜ್ಜಲ ಸಂಸ್ಥೆಯ- ಐ ಎಲ್ ಪಿ ಯೋಜನೆ ಶಶಿಕಾಂತ ಸುಂಗಠಾಣ ಕಾರ್ಯಕ್ರಮ ನಿರೂಪಿಸಿರು. ಬಾಗಣ್ಣ ಹಾಳಕಿ ಸ್ವಾಗತಿಸಿದ್ದರು, ಶ್ರೀಶೈಲ ಜೋಗೂರ ವಂದಿಸಿದರು.