ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಯೋಗಿ- ಜೋಗಿ ಸಂಗಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಅನ್ನ, ಅಕ್ಷರ, ಜ್ಞಾನ ದಾಸೋಹ, ಕೌಶಲ್ಯಾಭಿವೃದ್ಧಿ ಸೇರಿದಂತೆ ಯಾವುದೇ ತರವಾದ ಸೇವೆ ನೀಡಲು ಆದಿಚುಂಚನಗಿರಿ ಮಠ ಸಜ್ಜಾಗಿದೆ. ಆದರೆ, ಆ ಮಠ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸೇವೆ ನೀಡಬೇಕೆಂದರೆ ಪಡೆದುಕೊಂಡದಕ್ಕೆ ಪ್ರತಿಯಾಗಿ ಮಠದ ಕಣಜ ತುಂಬಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದರು.ಪಡೆದುಕೊಂಡು ಕೊಡುವ ವ್ಯಕ್ತಿ ಕೃತಜ್ಞನಾಗುತ್ತಾನೆ. ಹಾಗೇ ಹೋಗುವ ವ್ಯಕ್ತಿ ಕೃತಘ್ನನಾಗುತ್ತಾನೆ. ಕೃತಜ್ಞತೆಗೂ ಕೃತಘ್ನತೆಗೂ ಬಹಳ ವ್ಯತ್ಯಾಸವಿಲ್ಲ. ಆದಿಶ್ರೀಮಠದ ಮೂಲಕ ನಡೆಯುತ್ತಿರುವ ಸೇವಾ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ತಿಳಿಸುವ ಜೊತೆಗೆ ಇಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವ ಕೆಲಸವನ್ನು ಜೋಗಪ್ಪಂದಿರು ಮಾಡಬೇಕು ಎಂದರು.
ಒಬ್ಬ ವ್ಯಕ್ತಿ ಸಂತೋಷವಾಗಿ ಬದುಕಬೇಕೆಂದರೆ ಅವನ ಬದುಕು, ದೇಹ, ನೋಟದಲ್ಲಿ ಶಿಸ್ತು ಎಂಬ ಶೌಚ ಇರಬೇಕು. ನಮ್ಮ ಇಂದ್ರೀಯಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡದ್ದೇ ಆದರೆ ಬದುಕು ಸುಂದರವಾಗಿರುತ್ತದೆ. ಬದುಕಿನಲ್ಲಿ ಕಷ್ಟ ಸುಖ ಎರಡೂ ಬರುತ್ತವೆ ಬರುವುದು ಹೋಗಲಿಕ್ಕೋಸ್ಕರ. ಈ ಎಲ್ಲ ಸಂದರ್ಭದಲ್ಲಿಯೂ ಸಹ ಸೋಲು ಗೆಲುವು ನೋವು ನಲಿವುಗಳ ನಡುವೆ ಸಂತೋಷವನ್ನಿಟ್ಟುಕೊಳ್ಳಬೇಕು ಎಂದರು.
ಐತಿಹಾಸಿಕ ಪರಂಪರೆ ಹೊಂದಿರುವ ಶ್ರೀಮಠದಲ್ಲಿ ಶಿಕ್ಷಣ ಪಡೆದಿರುವ ಪ್ರತಿಯೊಬ್ಬರೂ ಸಹ ಉದಾತ್ಥ ಮನೋಭಾವ ಬೆಳೆಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕು. ಶ್ರೀಮಠದಲ್ಲಿ ಸಿಗುವ ಹರ್ಷ ಮತ್ತು ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು. ಹಿರಿಯ ಪತ್ರಕರ್ತ ಹರಿಪ್ರಸಾದ್, ಮದ್ದೂರು ಶಾಸಕ ಕೆ.ಎಂ.ಉದಯ್, ಮೈಸೂರಿನ ಮಾಜಿ ಶಾಸಕ ಎಲ್.ನಾಗೇಂದ್ರ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಮಾತನಾಡಿದರು.
ಜೋಗಪ್ಪಂದಿರೆಂದರೆ ಊರಿಗೆ ಧಾರ್ಮಿಕ ಮುಖಂಡರಿದ್ದಂತೆ. ನಿಮ್ಮ ನಡೆ, ನುಡಿ, ಶೌಚ, ಸಂತೋಷ ಎಲ್ಲವನ್ನೂ ನೋಡುತ್ತಿರುತ್ತಾರೆ. ಅದಕ್ಕೊಂದಿಷ್ಟು ತಪಸ್ಸಿನ ಅವಶ್ಯಕತೆ ಇರುತ್ತದೆ. ತಪಸ್ಸಿನ ಜೊತೆಗೆ ನಮ್ಮ ತತ್ವ, ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಥ ಪರಂಪರೆಯ ಮೌಲಿಕವಾಗಿರುವ ನಾಲ್ಕು ನಿಯಮಗಳ ಚೌಕಟ್ಟಿನಲ್ಲಿ ಸಮಾಜವನ್ನು ಮತ್ತಷ್ಟು ಎತ್ತರಕ್ಕೆ ಕಟ್ಟಲು ಸಾಧ್ಯವಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಮುಂದಿನ ದಿನಗಳಲ್ಲಿ ಪುರುಷಪ್ಪಂದಿರು, ಜೋಗಪ್ಪಂದಿರು, ಚೂಡಪ್ಪಂದಿರು ಮತ್ತು ಸುಬೇದಾರ್‌ಗಳಿಗೆ ಶ್ರೀಮಠದ ನಾಥ ಪರಂಪರೆ ಇರುವ ಮೌಲಿಕ ತತ್ವ ನಿಯಮಗಳನ್ನು ಸೃಷ್ಟಿಸಿ ಅವುಗಳನ್ನು ಅನುಸರಿಸುವ ತರಬೇತಿಯನ್ನೂ ಸಹ ನೀಡಲಾಗುವುದು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಉತ್ತಮ ಶಿಕ್ಷಣ ಸಿಕ್ಕರೆ ಆ ವ್ಯಕ್ತಿ ಬಹಳ ಎತ್ತರಕ್ಕೆ ಬೆಳೆಯಬಹುದು ಅಥವಾ ಎತ್ತರಕ್ಕೆ ಬೆಳೆದಿರುವ ವ್ಯಕ್ತಿಯ ಜೊತೆ ನಿಲ್ಲಲು ಸಾಧ್ಯವಾಗುತ್ತದೆ. ಅಂತಹ ಅವಕಾಶ ಮಾಡಿಕೊಡುತ್ತಿರುವ ಶ್ರೀಮಠದ ಕಾರ್ಯ ನಿಜಕ್ಕೂ ಶ್ಲಾಘನೀಯ. ಹಾಗಾಗಿ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟನ್ನು ಶ್ರೀಮಠಕ್ಕೆ ಕೊಟ್ಟರೆ ಅದು ಪುಣ್ಯದ ಕೆಲಸಕ್ಕೆ ಬಳಕೆಯಾಗುತ್ತದೆ.