ಲಂಚ ಸ್ವೀಕರಿಸುವುದು ಭ್ರಷ್ಟಾಚಾರವಲ್ಲ, ಆ ರೀತಿ ಯೋಚನೆ ಮಾಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಕನಸು ಮನಸ್ಸಿನಲ್ಲಿಯೂ ಭ್ರಷ್ಟಾಚಾರದ ಪರವಾಗಿ ಯೋಚಿಸಬಾರದು. ಸದಾ ನಮ್ಮ ಮನಸ್ಸು ಭ್ರಷ್ಟಾಚಾರದ ವಿರುದ್ಧವಾಗಿರಬೇಕು. ಭ್ರಷ್ಟಾಚಾರ ಹೋರಾಟ ಸಣ್ಣ ವಿಚಾರವಲ್ಲ, ಅತ್ಯಂತ ಕಠಿಣ ಸಂದರ್ಭಗಳು ಎದುರಾಗುತ್ತವೆ. ಅಂತಹ ಪರಿಸ್ಥಿತಿಗಳನ್ನು ಎದುರಿಸಲು ಸಂಘಟಿತರಾಗಿ ದೃಢವಾಗಿ ನಿಂತರೆ ಹಂತ ಹಂತವಾಗಿ ಲೋಪ ತಡೆಯಲು ಸಾಧ್ಯವಿದೆ. ಯುದ್ಧವನ್ನು ಬೇಕಾದರೆ ಗೆಲ್ಲಬಹುದು ಆದರೆ, ಭ್ರಷ್ಟಾಚಾರ ವನ್ನು ಸೋಲಿಸುವುದು ಬಹಳ ಕಷ್ಟದ ಕೆಲಸವೆಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜನರು ಭ್ರಷ್ಟಾಚಾರವನ್ನು ಧೈರ್ಯವಾಗಿ ವಿರೋಧಿಸುವ ಮನಸು ಮಾಡಿದರೆ ಖಂಡಿತ ಅದಕ್ಕೆ ಕಡಿವಾಣ ಹಾಕಬಹುದೆಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಕರ್ನಾಟಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಹಾಗೂ ಕಾರ್ಯಾಚರಣೆ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತಿಳಿವಳಿಕೆ ಮೂಲಕ ಪರಿಹರಿಸುವ ಪ್ರಯತ್ನ ಆಗಬೇಕು. ಸ್ವಜನ ಪಕ್ಷಪಾತ, ಜಾತೀಯತೆಯಿಂದ ಹೊರತಾಗಿರಬೇಕು. ಸಂಘಟನಾತ್ಮಕ ಹೋರಾಟ ಹೆಚ್ಚಾದರೆ ಭ್ರಷ್ಟಾಚಾರ ವನ್ನು ತಗ್ಗಿಸಲು ಸಾಧ್ಯವಿದೆಯೆಂದು ಹೇಳಿದರು.ಲಂಚ ಸ್ವೀಕರಿಸುವುದು ಭ್ರಷ್ಟಾಚಾರವಲ್ಲ, ಆ ರೀತಿ ಯೋಚನೆ ಮಾಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಕನಸು ಮನಸ್ಸಿನಲ್ಲಿಯೂ ಭ್ರಷ್ಟಾಚಾರದ ಪರವಾಗಿ ಯೋಚಿಸಬಾರದು. ಸದಾ ನಮ್ಮ ಮನಸ್ಸು ಭ್ರಷ್ಟಾಚಾರದ ವಿರುದ್ಧವಾಗಿರಬೇಕು. ಭ್ರಷ್ಟಾಚಾರ ಹೋರಾಟ ಸಣ್ಣ ವಿಚಾರವಲ್ಲ, ಅತ್ಯಂತ ಕಠಿಣ ಸಂದರ್ಭಗಳು ಎದುರಾಗುತ್ತವೆ. ಅಂತಹ ಪರಿಸ್ಥಿತಿಗಳನ್ನು ಎದುರಿಸಲು ಸಂಘಟಿತರಾಗಿ ದೃಢವಾಗಿ ನಿಂತರೆ ಹಂತ ಹಂತವಾಗಿ ಲೋಪ ತಡೆಯಲು ಸಾಧ್ಯವಿದೆ. ಯುದ್ಧವನ್ನು ಬೇಕಾದರೆ ಗೆಲ್ಲಬಹುದು ಆದರೆ, ಭ್ರಷ್ಟಾಚಾರ ವನ್ನು ಸೋಲಿಸುವುದು ಬಹಳ ಕಷ್ಟದ ಕೆಲಸವೆಂದರು.ಹಿಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳನ್ನು ಏಕಾಂಗಿಯಾಗಿ ಎದುರಿಸುತ್ತಿದ್ದ ಕಾಲವಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಸಂಘಟನೆಗಳು ಹುಟ್ಟಿಕೊಂಡಿರುವುದು ಒಂದು ರೀತಿಯ ಸಾಂಸ್ಥಿಕ ಹೋರಾಟಕ್ಕೆ ಬಲ ಸಿಕ್ಕಂತಾಗಿದೆ. ಗುಂಪಿನಲ್ಲಿ ಹೋಗಿ ಭ್ರಷ್ಟಾಚಾರಿಗಳನ್ನು ಧೈರ್ಯವಾಗಿ ಕೇಳುವ ಪ್ರಯತ್ನಗಳಾದರೆ ಭ್ರಷ್ಟಾಚಾರಿಗಳು ಸಹ ಹೆದರುತ್ತಾರೆ. ಇಂತಹ ಸಂಘಟನೆಗಳ ಅವಶ್ಯಕತೆ ದೇಶಾದ್ಯಂತ ಇದೆ. ಇದರ ಸದುಪ ಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮ ಉದ್ಘಾಟಿಸಿದ ಹಾಸನದ ನಿವೃತ್ತ ಸೆಷನ್ಸ್ ನ್ಯಾಯಾಧೀಶ ಬಿ. ವೆಂಕಟೇಶ್ ಅವರು ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ನಾನು ಸಹ ನಿಮ್ಮ ಜೊತೆ ಕೈಜೋಡಿಸುತ್ತೇನೆ. ನಾನು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿನಿತ್ಯ ಸಾರ್ವಜನಿಕರಿಗೆ ಲಭ್ಯವಿದ್ದು ನಾನು ಕಾನೂನು ರೀತಿಯ ಸಲಹೆಗಳನ್ನು ನೀಡುತ್ತೇನೆಂದರು.ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎನ್. ಎಸ್. ಮಂಜುನಾಥ್ ಮಾತನಾಡಿ, ನಮ್ಮ ದೇಶ ಜಗತ್ತಿನ ಭ್ರಷ್ಟಾಚಾರ ಪಟ್ಟಿಯಲ್ಲಿ ೯೧ ಸ್ಥಾನದಲ್ಲಿದೆ. ಈ ಭ್ರಷ್ಟಾಚಾರವು ಭಾರತದ ಆತ್ಮದ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವುದು ಎಷ್ಟು ಅಪರಾಧವೋ ಅದಕ್ಕೆ ಪ್ರೋತ್ಸಾಹಿಸುವುದು ಕೂಡ ಅಷ್ಟೇ ಅಪರಾಧವಾಗಿದೆ ಎಂದರು. ಇದನ್ನು ಸಂಘಟಿತ ರೂಪದಲ್ಲಿ ದೇಶಾದ್ಯಂತ ನಿರ್ಮೂಲನೆ ಮಾಡುವ ಪಣತೊಟ್ಟು ಈ ಹಿಂದೆ ಅಣ್ಣ ಹಜಾರೆಯವರ ಜೊತೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೇಶ್ ಶುಕ್ಲ ಅವರು ೨೦೧೨ರಲ್ಲಿ ಸಮಿತಿ ಸ್ಥಾಪನೆ ಮಾಡಿದ್ದಾರೆಂದರು.ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ದಯಾನಂದ್, ಶ್ರೀಶೈಲ ಕುಂಬಾರ, ವಿಭಾಗಿಯ ಅಧ್ಯಕ್ಷ ಎಸ್. ಗುರುಸ್ವಾಮಿ, ಮಾಧ್ಯಮ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ಟಿ.ಮಲ್ಲೇಶ್, ಕೆ. ಎಂ. ಪುಷ್ಪಾವತಿ ಮತ್ತಿತರಿದ್ದರು.ಪದಾಧಿಕಾರಿಗಳ ಪದಗ್ರಹಣ:
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಹಾಗೂ ಕಾರ್ಯಾಚರಣೆ ಸಮಿತಿ ಅಧ್ಯಕ್ಷರಾಗಿ ಎನ್.ಎಸ್. ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ. ಜಯರಾಮ್, ಖಜಾಂಚಿ ಸ್ಥಾನಕ್ಕೆ ಎಸ್. ಎಂ. ಪುಷ್ಟ, ಕಾರ್ಯಧ್ಯಕ್ಷೆ ಯಶೋಧ, ಉಪಾಧ್ಯಕ್ಷರಾಗಿ ಬಿ.ರಾಘವೇಂದ್ರ, ಎನ್.ಜೆ. ಸೋಮನಾಥ, ಡಿ.ಕೆ.ಮಧು, ಜಂಟಿ ಕಾರ್ಯದರ್ಶಿಯಾಗಿ ಕೆ.ಎಸ್. ವೇದ, ಬಿ.ಎಲ್. ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಎನ್. ಭಗವಾನ್, ಸಿ.ಎಲ್. ಮಹದೇವ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿ.ಎಂ. ಸರಸ್ವತಿ, ಕಾರ್ಯದರ್ಶಿಯಾಗಿ ಎಚ್. ವಿ. ಸಿದ್ದೇಶ್ ಅಧಿಕಾರ ವಹಿಸಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.