ಸೆ.1ಕ್ಕೆ ದೆಹಲಿ ಚಲೋ: ಸಿಪಿಐನಿಂದ ಜಾಗೃತಿ, ಪಾದಯಾತ್ರೆ

KannadaprabhaNewsNetwork |  
Published : Aug 07, 2026, 01:30 AM IST
6ಕೆಡಿವಿಜಿ4, 5-ಸಿಪಿಐನಿಂದ ಸೆ.1ರಂದು ಹಮ್ಮಿಕೊಂಡ ದೆಹಲಿ ಚಲೋ ಚಳವಳಿಯ ಪೂರ್ವಭಾವಿಯಾಗಿ ದಾವಣಗೆರೆ ತಾ. ಬೂದಿಹಾಳ್ ಗ್ರಾಮದಲ್ಲಿ ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸ್ಥಳೀಯ ವಿವಿಧ ಸಮಸ್ಯೆ ಪರಿಹರಿಸುವಂತೆ, ಸಾರ್ವಜನಿಕರ ಹಕ್ಕುಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಸೆ.1ರಿಂದ ಹಮ್ಮಿಕೊಂಡಿರುವ ದೆಹಲಿ ಚಲೋ ಚಳವಳಿ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಮಂಡಳಿಯಿಂದ ಜಾಗೃತಿ ಪಾದಯಾತ್ರೆಗೆ ತಾಲೂಕಿನ ಬೂದಿಹಾಳು ಗ್ರಾಮದಲ್ಲಿ ಗುರುವಾರ ಚಾಲನೆ ನೀಡಲಾಯಿತು.

- ಬೆಲೆ ಏರಿಕೆ, ನಿರುದ್ಯೋಗ, ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಸಿಪಿಐ ಮುಖಂಡರ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸ್ಥಳೀಯ ವಿವಿಧ ಸಮಸ್ಯೆ ಪರಿಹರಿಸುವಂತೆ, ಸಾರ್ವಜನಿಕರ ಹಕ್ಕುಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಸೆ.1ರಿಂದ ಹಮ್ಮಿಕೊಂಡಿರುವ ದೆಹಲಿ ಚಲೋ ಚಳವಳಿ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಮಂಡಳಿಯಿಂದ ಜಾಗೃತಿ ಪಾದಯಾತ್ರೆಗೆ ತಾಲೂಕಿನ ಬೂದಿಹಾಳು ಗ್ರಾಮದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು, ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಜಾಥಾ ಸಂಚರಿಸಲಿದ್ದು, ಚಳವಳಿಯಲ್ಲಿ ಕಾರ್ಮಿಕರು, ರೈತರು, ಯುವಜನರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಪಕ್ಷದ ಮುಖಂಡರು, ರಾಜ್ಯ- ಕೇಂದ್ರ ಸರ್ಕಾರಗಳು ಜಿಲ್ಲೆಯ ಬಡವರಿಗೆ ನಿವೇಶನ ಹಂಚಬೇಕು, ಮನೆ ನಿರ್ಮಾಣಕ್ಕೆ ₹5 ಲಕ್ಷ ಉಚಿತ ಸಹಾಯಧನ ನೀಡಬೇಕು. ಜವಳಿ ಪಾರ್ಕ್ ಸೇರಿ ಹೊಸ ಕೈಗಾರಿಕೆ ಸ್ಥಾಪಿಸಬೇಕು. ಅಭಿವೃದ್ಧಿ ದೃಷ್ಟಿಯಿಂದ ದಾವಣಗೆರೆಯಲ್ಲಿ ಶೀಘ್ರ ವಿಮಾನ ನಿಲ್ದಾಣ ನಿರ್ಮಿಸಬೇಕು. ನಗರ, ಗ್ರಾಮೀಣ ಭಾಗದಲ್ಲಿ ''''ಜಲಸಿರಿ'''' ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ಭಾಗಗಳಿಗೆ ತುಂಗಭದ್ರಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು. ದಾವಣಗೆರೆ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕಾ.ಪಂಪಾಪತಿ ಹೆಸರನ್ನು ನಾಮಕರಣ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು, ದಿನಗೂಲಿಯನ್ನು 700ಕ್ಕೆ ಏರಿಸಬೇಕು ಹಾಗೂ ಯೋಜನೆಯ ಹಳೆ ಹೆಸರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆ ನೇತೃತ್ವವನ್ನು ಸಿಪಿಐ ಮುಖಂಡರಾದ ಜಿ.ರಘು, ಅವರಗೆರೆ ಚಂದ್ರು, ಎಚ್.ಜಿ.ಉಮೇಶ ಅವರಗೆರೆ, ಎಚ್.ಕೆ. ಕೊಟ್ರಪ್ಪ, ಜಿ.ಯಲ್ಲಪ್ಪ ಇತರೆ ಮುಖಂಡರು ವಹಿಸಲಿದ್ದರು. ಗ್ರಾಮಸ್ಥರಾದ ಕೆ.ಟಿ.ಕೊಟ್ರೇಶ, ಆರ್.ಎಂ.ದೊಡ್ಡಬಸಪ್ಪ,‌ ಎನ್.ಸಿ.ಹಾಲಣ್ಣ, ನಂದ್ಯಾಲ ಬಸಣ್ಣ, ಬಳ್ಳಾರಿ ರೇವಣಸಿದ್ದಪ್ಪ, ಡಿ.ಎಸ್. ಚಂದ್ರಪ್ಪ, ಕೆ.ದುಗ್ಗಪ್ಪ, ಎಲ್.ವಸಂತಕುಮಾರ, ಕೆ.ಎಂ.ನಾಗರಾಜ, ಡಿ.ಎಸ್.ಶಿವಪ್ಪ, ಕೆರೇನಹಳ್ಳಿ ರಾಜು, ನರೇಗಾ ರಂಗನಾಥ, ಕೆ.ಬಾನಪ್ಪ, ಜಿ.ಯಲ್ಲಪ್ಪ, ಪಿ.ಷಣ್ಮುಖಸ್ವಾಮಿ, ಜಯಣ್ಣ, ಸರೋಜ, ರಮೇಶ ದಾಸರ್, ಸಿ.ರಮೇಶ, ವಿ.ಲಕ್ಷ್ಮಣ , ಎ.ತಿಪ್ಪೇಶ್, ಮರಿಯಪ್ಪ ಯರಗುಂಟೆ, ಸುರೇಶ, ಮೌನೇಶ್, ಶೇಖರ ನಾಯಕ ಸೇರಿದಂತೆ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

- - -

* ಪ್ರಮುಖ ಬೇಡಿಕೆಗಳು

- ಬರ ಪರಿಹಾರ ತಕ್ಷಣ ಘೋಷಿಸಬೇಕು, ವಿದ್ಯುತ್ ಖಾಸಗೀಕರಣ ರದ್ದುಗೊಳಿಸಬೇಕು.

- ಬಿತ್ತನೆಬೀಜ ಹಾಗೂ ರಸಗೊಬ್ಬರ ರಿಯಾಯಿತಿ ದರದಲ್ಲಿ ರೈತರಿಗೆ ನೀಡಬೇಕು.

- ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.

- ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ತಡೆದು ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಅಭಿವೃದ್ಧಿ ಪಡಿಸಬೇಕು.

- ತಡೆಹಿಡಿಯಲಾದ ಪಿಂಚಣಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು.

- - -

-6ಕೆಡಿವಿಜಿ4, 5:

ಸಿಪಿಐನಿಂದ ಸೆ.1ರಂದು ಹಮ್ಮಿಕೊಂಡ ದೆಹಲಿ ಚಲೋ ಚಳವಳಿಯ ಪೂರ್ವಭಾವಿಯಾಗಿ ದಾವಣಗೆರೆ ತಾ. ಬೂದಿಹಾಳ್ ಗ್ರಾಮದಲ್ಲಿ ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ, ನಾಡಿದ್ದು ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ
ರೈತ ಕೋಟಾದಡಿ ನಾನು ಸಚಿವ ಸ್ಥಾನ ಕೇಳಿದ್ದೆ: ಶಿವಗಂಗಾ