‘ಕಾರ್ಪೊರೇಟ್‌ ಶಕ್ತಿಗಳಿಂದ ಪ್ರಜಾಪ್ರಭುತ್ವ ಹೈಜಾಕ್‌’: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

KannadaprabhaNewsNetwork |  
Published : Dec 29, 2023, 01:32 AM IST
೨೭ಕೆಎಲ್‌ಆರ್-೧ಕೋಲಾರದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳುವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜಾ ಪ್ರಭುತ್ವದ ಗುಣಮಟ್ಟವು ದಿನೇ ದಿನೇ ಕುಸಿಯುತ್ತಿದೆ. ಸಮರ್ಪವಾಗಿ ಅನುಷ್ಠನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜಾತಿಗಳಲ್ಲಿ ಜೀವಂತ ಇಲ್ಲ, ಉಪಜಾತಿಗಳಲ್ಲಿ ಜೀವ ಇದೆ, ಬ್ರಾಹ್ಮಣ್ಯಶಾಯಿಯಲ್ಲಿ ಅಂಬೇಡ್ಕರ್‌ರನ್ನು ಕಾಣಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಕಾರ್ಪೊರೇಟ್ ಶಕ್ತಿಗಳು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿವೆ. ಜಾತ್ಯತೀತ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಿಸಲಿದ್ದಾರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಬದಲಾಗಿ ಸಾವರ್ಕರ್‌ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆತಂಕ ವ್ಯಕ್ತಪಡಿಸಿದರು.

ನಗರದ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳುವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಜಾತಂತ್ರ ಕುಸಿಸುತ್ತಿದೆ

ಭಾರತ ದೇಶವು ವಿರೋಧಾಭಾಸದತ್ತ ಹೆಜ್ಜೆ ಹಾಕುತ್ತಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಲಸವಾಗದೆ ರಾಜಕೀಯ ಪಕ್ಷಗಳಿಗೆ ಮಾತ್ರ ಶಕ್ತಿ ತುಂಬಿದೆ, ಪ್ರಜಾ ಪ್ರಭುತ್ವದ ಗುಣಮಟ್ಟವು ದಿನೇ ದಿನೇ ಕುಸಿಯುತ್ತಿದೆ. ಸಮರ್ಪವಾಗಿ ಅನುಷ್ಠನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜಾತಿಗಳಲ್ಲಿ ಜೀವಂತ ಇಲ್ಲ, ಉಪಜಾತಿಗಳಲ್ಲಿ ಜೀವ ಇದೆ, ಬ್ರಾಹ್ಮಣ್ಯಶಾಯಿಯಲ್ಲಿ ಅಂಬೇಡ್ಕರ್‌ರನ್ನು ಕಾಣಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಆಗಮಿಸಿದಾಗ ತಮಟೆ ವಾದ್ಯ ಹಾಗೂ ಪಟಾಕಿ ಸಿಡಿಸಿರುವುದಕ್ಕೆ ಬೇಸರಗೊಂಡ ಅವರು ತಮಟೆ ಮತ್ತು ಚರ್ಮವಾದ್ಯಗಳು ಬಾರಿಸುವುದು ಸಾಮಾನ್ಯ. ಯಾರಾದರೂ ಮೃತರಾದ ಸಂದರ್ಭದಲ್ಲಿ ಮೃತರನ್ನು ಜಾಗೃತಗೊಳಿಸಲು ಹಾಗೂ ದೇವರನ್ನು ಆಹ್ವಾನಿಸಲು ಬಾರಿಸುತ್ತಾರೆ, ಆದರೆ ಇಲ್ಲಿ ಇದು ಯಾವುದು ಇರಲಿಲ್ಲ ಆದರೂ ವಾದ್ಯಬಾರಿಸಿ ಪಟಾಕಿ ಸಿಡಿಸಿದ್ದು ಪ್ರಶ್ನಾರ್ಹವಾಗಿದೆ ಎಂದರು.

ಅಂಬೇಡ್ಕರ್ ಒಂದು ಧರ್ಮ

ಡಿ.೬ ರಂದು ನಗರದ ಕೆ.ಇ,ಬಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್.೨ ಎಂಬ ಹೊಸ ಕಾರ್ಯಕ್ರಮ ೬೬ ವರ್ಷದ ನಂತರ ನಾಮಕರಿಸಿ ಮಾಡಲಾಯಿತು, ಅಂಬೇಡ್ಕರ್ ಒಂದು ಧರ್ಮ, ಪುನರುತ್ಥಾನಗೊಳಿಸಬೇಕು, ಅಂಬೇಡ್ಕರ್‌ ಕುರಿತು ಅಧ್ಯಯನ ಮಾಡಬೇಕು. ಡಿ.೨೫ರಂದು ಮನುಶಾಸ್ತ್ರವನ್ನು ಸುಟ್ಟು ಹಾಕಿದ ದಿನವಾಗಿದೆ. ಡಿ.೩೦ ಕುವೆಂಪು ಜನ್ಮದಿನಾಚರಣೆ, ಅಂಬೇಡ್ಕರ್ ಮತ್ತು ಕುವೆಂಪು ಇಬ್ಬರು ವಿಶ್ವ ಮಾನವರಾಗಿದ್ದು, ವಿಶ್ವದ ಎರಡು ಕಣ್ಣುಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ನೆಲಕ್ಕೆ ವಿದಾಯ ಹೇಳಲು ಬಯಸಿದ್ದು ಬಹುಶಃ ಇದು ನನ್ನ ಕೊನೆಯ ಕಾರ್ಯಕ್ರಮವಾಗಿದೆ. ಈ ನೆಲದಲ್ಲಿ ನೆಲೆಸಿದ್ದು, ೨೫ ವರ್ಷದಿಂದ ನಿರಂತರವಾಗಿ ವೇದಿಕೆಗಳಲ್ಲಿ ಮಾತನಾಡಿದ್ದೇನೆ, ಬೇರೆ ನೆಲದಿಂದ ನನ್ನ ಪ್ರಯೋಗಿಕೆ ಪ್ರಾರಂಭವಾಗಲಿದೆ. ಈ ನೆಲದಲ್ಲಿ ಡಿಸೆಂಬರ್ ಮಾಹೆಯವರೆಗೆ ಮಾತ್ರ ಎಂದು ನೋವು ವ್ಯಕ್ತಪಡಿಸಿದರು.

ದಲಿತ ಸಂಘಟನೆ ಮುಖಂಡರಾದ ಮಾವಳ್ಳಿ ಶ್ರೀನಿವಾಸ್, ಸಮಾಜ ಸೇವಕ ಎ.ಶ್ರೀನಿವಾಸ್, ಚಲನ ಚಿತ್ರನಟ ಚೇತನ್, ಮುಖಂಡರಾದ ಎಂ.ಮುನಿರಾಜು, ಎ.ಪಿ.ರಂಗನಾಥ್, ಕಾಶೀ, ಗಾಂಧಿನಗರ ವಿ.ಶ್ರೀನಿವಾಸ್, ಮಾರ್ಜೇನಹಳ್ಳಿ ಬಾಬು, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಗ್ರಾಮ ವಿಕಾಸ: ಡಾ. ಹೆಗ್ಗಡೆ
ಕೊಣಂಜಗೇರಿ ಗ್ರಾ.ಪಂ. ನೂತನ ಕಟ್ಟಡದ ಉದ್ಘಾಟನೆ