ದೇವರ ದಾಸಿಮಯ್ಯರ ವಚನಗಳು ಸಮಾಜಕ್ಕೆ ದಾರಿದೀಪ

KannadaprabhaNewsNetwork |  
Published : Mar 31, 2026, 01:30 AM IST
ನಗರದ ಸುಬ್ರಹ್ಮಣ್ಯ ನಗರದಲ್ಲಿ, ತಾಲೂಕು ಆಡಳಿತ ಕಚೇರಿ, ಅರಸೀಕೆರೆ ತಾಲೂಕು ದೇವಾಂಗ ಸಂಘ ಹಾಗೂ ಶ್ರೀ ದೇವರ ದಾಸಿಮಯ್ಯ ದೇವಾಂಗ ಸಮಾಜ ಟ್ರಸ್ಟ್ (ರಿ),  ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಕಾರ, ದೇವಾಂಗ ಮಹಾಪುರುಷ, ನೇಕಾರರ ಆರಾಧ್ಯ ದೇವರ ದಾಸಿಮಯ್ಯರ ಜಯಂತ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಸುಬ್ರಹ್ಮಣ್ಯ ನಗರದಲ್ಲಿ, ತಾಲೂಕು ಆಡಳಿತ ಕಚೇರಿ, ಅರಸೀಕೆರೆ ತಾಲೂಕು ದೇವಾಂಗ ಸಂಘ ಹಾಗೂ ಶ್ರೀ ದೇವರ ದಾಸಿಮಯ್ಯ ದೇವಾಂಗ ಸಮಾಜ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಕಾರ, ದೇವಾಂಗ ಮಹಾಪುರುಷ, ನೇಕಾರರ ಆರಾಧ್ಯ ದೇವರ ದಾಸಿಮಯ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದೇವರ ದಾಸಿಮಯ್ಯರು ಕೇವಲ ಒಂದು ಸಮುದಾಯದ ನಾಯಕರಲ್ಲ; ಅವರು ಸಮಾಜ ಪರಿವರ್ತನೆಯ ಸಂದೇಶವಾಹಕರು. ಶ್ರಮವೇ ಶ್ರೇಷ್ಠ, ಕೈಕೆಲಸವೇ ಕೈಲಾಸ ಎಂಬ ಜೀವನ ತತ್ವವನ್ನುವಚನಗಳ ಮೂಲಕ ಸಾರಿದ್ದಾರೆ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಮಾಜದಲ್ಲಿ ಶ್ರಮಕ್ಕೆ ಗೌರವ, ಸಮಾನತೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿದ ಮಹಾನ್ ವಚನಕಾರ ದೇವರ ದಾಸಿಮಯ್ಯರ ಜೀವನ ಮತ್ತು ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಎಂ. ಶಿವಲಿಂಗೇಗೌಡ ಹೇಳಿದರು.ನಗರದ ಸುಬ್ರಹ್ಮಣ್ಯ ನಗರದಲ್ಲಿ, ತಾಲೂಕು ಆಡಳಿತ ಕಚೇರಿ, ಅರಸೀಕೆರೆ ತಾಲೂಕು ದೇವಾಂಗ ಸಂಘ ಹಾಗೂ ಶ್ರೀ ದೇವರ ದಾಸಿಮಯ್ಯ ದೇವಾಂಗ ಸಮಾಜ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಕಾರ, ದೇವಾಂಗ ಮಹಾಪುರುಷ, ನೇಕಾರರ ಆರಾಧ್ಯ ದೇವರ ದಾಸಿಮಯ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದೇವರ ದಾಸಿಮಯ್ಯರು ಕೇವಲ ಒಂದು ಸಮುದಾಯದ ನಾಯಕರಲ್ಲ; ಅವರು ಸಮಾಜ ಪರಿವರ್ತನೆಯ ಸಂದೇಶವಾಹಕರು. ಶ್ರಮವೇ ಶ್ರೇಷ್ಠ, ಕೈಕೆಲಸವೇ ಕೈಲಾಸ ಎಂಬ ಜೀವನ ತತ್ವವನ್ನುವಚನಗಳ ಮೂಲಕ ಸಾರಿದ್ದಾರೆ ಹೇಳಿದರು.ಜಾತಿ, ಅಹಂಕಾರ, ಅಸಮಾನತೆ, ಮೂಢನಂಬಿಕೆಗಳ ನಡುವೆ ಸಿಲುಕಿದ್ದ ಸಮಾಜಕ್ಕೆ ದೇವರ ದಾಸಿಮಯ್ಯರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದರು. ಮನುಷ್ಯನ ಮೌಲ್ಯವನ್ನು ಅವನ ಶ್ರಮ, ಸತ್ಯನಿಷ್ಠೆ ಮತ್ತು ಬದುಕಿನ ಸಾದ್ಗುಣಗಳಿಂದ ಅಳೆಯಬೇಕು ಎಂಬ ಸಂದೇಶವನ್ನು ಅವರು ನೀಡಿದರು ಎಂದು ಹೇಳಿದರು.ದೇವಾಂಗ ಸಮಾಜದ ಬಗ್ಗೆ ಮಾತನಾಡಿದ ಅವರು, ವಸ್ತ್ರ ಸಂಸ್ಕೃತಿಯ ಮೂಲಕ ನಾಗರಿಕ ಸಮಾಜದ ರೂಪುಗೊಳಿಸುವಿಕೆಯಲ್ಲಿ ದೇವಾಂಗ ಸಮುದಾಯದ ಪಾತ್ರ ಅಪಾರ. ದೇವಾಲಯಗಳಿಂದ ಹಿಡಿದು ಮನೆಮನೆಗಳವರೆಗೆ ವಸ್ತ್ರಧಾರಣೆಯ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಈ ಸಮಾಜದ ಶ್ರಮಕ್ಕೆ ಅಪಾರ ಗೌರವ ಸಲ್ಲಬೇಕು ಎಂದು ಹೇಳಿದರು.ನೇಕಾರಿಕೆ ಕೇವಲ ಉದ್ಯೋಗವಲ್ಲ ಅದು ಒಂದು ಪರಂಪರೆ, ಒಂದು ಸಂಸ್ಕೃತಿ, ಒಂದು ಜೀವನಶೈಲಿ, ದೇವರ ದಾಸಿಮಯ್ಯರು ಈ ಶ್ರಮಪರ ಜೀವನಕ್ಕೆ ಆಧ್ಯಾತ್ಮಿಕ ಮೌಲ್ಯ ನೀಡಿದ ಮಹಾನ್ ವ್ಯಕ್ತಿತ್ವ, ಇಂದಿನ ಪೀಳಿಗೆ ದೇವರ ದಾಸಿಮಯ್ಯರ ವಚನಗಳನ್ನು ಓದಿ, ಅದರ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಮಾಜದಲ್ಲಿ ಸಂಘಟನೆ, ಶಿಕ್ಷಣ, ಸ್ವಾಭಿಮಾನ ಮತ್ತು ಶ್ರಮದ ಮೌಲ್ಯವನ್ನು ಅರಿಯುವ ಕೆಲಸ ದೇವರ ದಾಸಿಮಯ್ಯರ ಚಿಂತನೆಯಿಂದ ಸಾಧ್ಯ ಎಂದರು. ಜಯಂತಿಗಳು ಕೇವಲ ಆಚರಣೆಗಾಗಿ ಅಲ್ಲ, ಆ ಮಹನೀಯರ ಆದರ್ಶಗಳನ್ನು ಸ್ಮರಿಸಿ, ಸಮಾಜಕ್ಕೆ ಹೊಸ ದಿಕ್ಕು ನೀಡುವ ಸಂಕಲ್ಪದ ದಿನಗಳಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್, ದೇವರ ದಾಸಿಮಯ್ಯರ ಜಯಂತಿ ಆಚರಣೆ ಮೂಲಕ ಶ್ರಮಜೀವಿ ಸಮುದಾಯಗಳ ಇತಿಹಾಸ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದೆ ,ಸಮಾಜದ ಒಗ್ಗಟ್ಟು ಮತ್ತು ಮೌಲ್ಯಾಧಾರಿತ ಬದುಕಿಗೆ ಇಂತಹ ಜಯಂತಿಗಳು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ, ರವಿಚಂದ್ರನ್, ಸಿದ್ದಪ್ಪ, ಪರಮೇಶ್ವರ್, ಇನ್ಸ್‌ಪೆಕ್ಟರ್ ತಿಮ್ಮ ಶೆಟ್ಟರು, ಸೇರಿದಂತೆ ದೇವಾಂಗ ಸಮಾಜದ ಅನೇಕ ಮುಖಂಡರು, ಯುವಕರು ಮತ್ತು ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!
ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ