ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಜ್ಯೋತಿ ಬರಮಾಡಿಕೊಂಡು ಮಾತನಾಡಿದ ಅವರು, ಸರ್ಕಾರದ ಕಾರ್ಯಾಂಗವಾಗಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಕ್ರೀಡಾಕೂಟವನ್ನು ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡರು ಆಯೋಜನೆ ಮಾಡಿದ್ದು, ಜಿಲ್ಲಾಧ್ಯಕ್ಷರಾದ ಮೇಲೆ ಮೊದಲ ಕೆಲಸ ನೌಕರರ ಸಂಘದ ಕಟ್ಟಡದ ದುರಸ್ತಿ ಕಾರ್ಯ ಮಾಡುತ್ತಿರುವುದು ಉತ್ತಮವಾಗಿದೆ ಎಂದರು.
ಕೋಪಕ್ಕೆ ಮದ್ದು ಧ್ಯಾನ:ರಾಜಕಾರಣಿಗಳಿಗೆ ಎಷ್ಟು ಒತ್ತಡ ಇರುತ್ತದೆ ಅದರ ಎರಡರಷ್ಟು ಒತ್ತಡ ನೌಕರರಿಗೆ ಇರುತ್ತದೆ. ನಾವು ಐದು ವರ್ಷ ನಾವು ಈ ಒತ್ತಡ ಅನುಭವಿಸುತ್ತೇವೆ. ಆದರೆ ನೀವು ಅವಧಿ ಮುಗಿಯುವವರೆಗೂ ಒತ್ತಡ ಇರುವುದು ಒಂದು ಕಡೆ ಬೇಸರದ ವಿಚಾರ ಎಂದರು. ದಿನದ ಒಂದುವರೆ ಗಂಟೆಗಳ ಕಾಲವಾದರೂ ತಮ್ಮ ಕುಟುಂಬ ಆರೋಗ್ಯದ ಕಡೆ ನೀವು ಗಮನಹರಿಸಬೇಕು. ಆರೋಗ್ಯ ಚೆನ್ನಾಗಿದ್ದರೇ ನಮ್ಮ ಕುಟುಂಬ ಚೆನ್ನಾಗಿರುತ್ತದೆ. ಎಲ್ಲರೂ ಆರೋಗ್ಯದ ಕಡೆ ಗಮನಕೊಡಬೇಕು. ನಾವು ಕೆಲಸ ಮಾಡಿಸೋದು, ನೌಕರರು ಕೆಲಸ ಮಾಡುವುದು ಒಂದು ರೀತಿ ಸಾರ್ವಜನಿಕರ ಒತ್ತಡ ಹೆಚ್ಚು ಇರುತ್ತದೆ ಎಂದು ಕಿವಿಮಾತು ಹೇಳಿದರು. ಕೋಪಕ್ಕೆ ಒಂದು ಮದ್ದು ಇದ್ದರೇ ಧ್ಯಾನ. ಎಲ್ಲಾ ನೌಕರರು ಕೆಲ ಸಮಯ ಮೀಸಲಿಡಿ. ನೌಕರರ ಕ್ಷೇಮಾಭಿವೃದ್ಧಿಗೆ ಖಂಡಿತ ದುಡಿಯುವ ಕೆಲಸ ಮಾಡಲಾಗುವುದು. ಶಾಸಕರಾದ ಸ್ವರೂಪ್ ಮತ್ತು ನಾನು ಒಟ್ಟಿಗೆ ಸೇರಿ ನಿಮ್ಮ ಜೊತೆ ಇರುತ್ತೇವೆ. ಯಾವುದೇ ರೀತಿ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾಗಬೇಡಿ. ಆರೋಗ್ಯವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಖಂಡಿತವಾಗಿ ಇರುತ್ತೇನೆ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಎಂದರೆ ಕ್ರಿಯಾಶೀಲ ಅಧ್ಯಕ್ಷರು. ಸಂಘವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಇರಲಿ ಕಾರ್ಯಾಂಗ ಒತ್ತಡದಿಂದ ಕೆಲಸ ಮಾಡಬೇಕು. ಪ್ರತಿನಿತ್ಯ ಕೆಲಸದ ಒತ್ತಡ ಇದ್ದರೂ ಕುಟುಂಬಕ್ಕೆ ಕೆಲ ಸಮಯ ಕೊಡಬೇಕು. ಸುಖ, ಶಾಂತಿ ಜೊತೆ ನೆಮ್ಮದಿ ಇರಬೇಕು. ದೊಡ್ಡ ಮಟ್ಟದ ಕ್ರೀಡಾಕೂಡ ಹಮ್ಮಿಕೊಳ್ಳಲಾಗಿದ್ದು, ಸಂಜೆಯ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಬಿ.ಆರ್. ಪೂರ್ಣಿಮಾ ಮಾತನಾಡಿ, ಇಂತಹ ಕ್ರೀಡೆ ಒಂದೆರಡು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ದಿನದ ೨ ಗಂಟೆಗಳನ್ನು ವ್ಯಾಯಾಮ, ಧ್ಯಾನಕ್ಕೆ ನೀಡಿ. ಅನುಕಂಪ ಆಧಾರದ ಮೇಲೆ ನಿಮ್ಮ ಕಚೇರಿಗೆ ಬರುವುದನ್ನು ತಪ್ಪಿಸಿ ನಿಮ್ಮ ಕುಟುಂಬಕ್ಕೆ ಆಧಾರವಾಗಿ ಆರೋಗ್ಯದಿಂದ ನಿವೃತ್ತಿಯಾಗಿ ಎಂದು ಕಿವಿಮಾತು ಹೇಳಿದರು. ಎಲ್ಲಾರ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ನಾಯ್ಡು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಉಪಾಧ್ಯಕ್ಷ ಕೆ.ವಿ. ಪಾರ್ಥೇಶ್, ಎಚ್.ವಿ. ಪಲ್ಲವಿ. ಕ್ರೀಡಾ ಕಾರ್ಯದರ್ಶಿ ಆರ್. ಆಶಾ, ಖಜಾಂಚಿ ಕೆ.ಆರ್. ಹೇಮಂತ್, ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಲಕ್ಷ್ಮೀಕಾಂತ್, ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಈ ಕೃಷ್ಣೇಗೌಡ, ನಾಯಕರಹಳ್ಳಿ ಮಂಜೇಗೌಡ ಇತರರು ಉಪಸ್ಥಿತರಿದ್ದರು.