ಕನ್ನಡಪ್ರಭ ವಾರ್ತೆ ಸಾವಳಗಿ
ಹಾಳಟ್ಟಿ, ಟಕ್ಕೋಡ, ಜಂಬಗಿ ಬಿಕೆ, ಜಂಬಗಿ ಕೆಡಿ, ಶೂರಪಾಲಿ ಸೇರಿದಂತೆ ಸುತ್ತ - ಮುತ್ತಲಿನ ಹಳ್ಳಿಗಳ ರೈತರು ಹೆಸ್ಕಾ ಕಛೇರಿಯಲ್ಲಿ ಪ್ರತಿಭಟಣೆ ಮಾಡಿದರು. ಸ್ಥಳಕ್ಕೆ ಮೇಲಾಧಿಕಾರಿಗಳು ಬರುವವರೆಗೂ ಪ್ರತಿಭಟಣೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಸಾವಳಗಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿ ಆಕ್ರೋಶ ಹೊರಹಾಕಿದರು.
ಈಗಾಗಲೇ ಮುಂಗಾರು ಹಾಗೂ ಹಿಂಗಾರು ಮಳೆ ಇಲ್ಲದ್ದರಿಂದ ಬೆಳೆನಾಶವಾಗಿ ಸಂಕಷ್ಟು ಅನುಭವಿಸಿದ್ದೇವೆ. ಈಗ ನಮ್ಮ ಹೊಲದಲ್ಲಿರುವ ಬೆಳೆಗಳಿಗೆ ನೀರು ಹಾಯಿಸಲು ಪಂಪ್‌ಸೆಟ್‌ಗಳಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ಹೋಗುತ್ತಿವೆ, ಮೊದಲೆ ಬರಗಾಲ ಇದ್ದರಿಂದ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾದ ನೀರು ಸಿಗುತ್ತಿಲ್ಲ. ಹೊಳೆ ದಂಡಿ ಮೋಟಾರ್‌ನಿಂದ ನೀರು ಹಾಯಿಸಬೇಕಂದರೆ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ನಮ್ಮದು ಹೆಂತಾ ಕೆಟ್ಟ ಹಣೆಬರಹ ಇದೆ ನೋಡಿ ಎಂದು ರೈತರು ಸಂಕಷ್ಟು ತೋಡಿಕೊಂಡರು.ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗಾಗಿ 1 ಗಂಟೆ ಕರೆಂಟ್ ಕೊಡುತ್ತೇವೆ ಅಂತಾ ಭರವಸೆ ನೀಡಿದ್ದಾರೆ. 20 - 25 ಸಾವಿರ ಎಕರೆ ಜಮೀನು ಇದೆ. ಎಲ್ಲೆಡೆ ಕಬ್ಬು, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಇವೆ. ಕುಡಿಯಲು ಅಷ್ಟೇ ನೀರು ಎಂದರೆ ರೈತರ ಪರಿಸ್ಥಿತಿ ಹೇಗೇ?. 11 ಗಂಟೆ ಕರೆಂಟ್ ಬರುತ್ತಿತ್ತು. ಈಗ 1 ಗಂಟೆ ವಿದ್ಯುತ್ ಪೂರೈಸಿದರೆ ರೈತರು ಬದುಕುವುದರು ಹೇಗೆ? ದಯವಿಟ್ಟು ನಮ್ಮ ರೈತರ ಪರಿಸ್ಥಿತಿ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
--