ಕನ್ನಡಪ್ರಭ ವಾರ್ತೆ ಕೋಲಾರಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಾಗಿ ಈ ಕ್ಷೇತ್ರದಲ್ಲಿ ಯಾವುದೇ ಚುನಾವಣೆಗಳಲ್ಲಿ ಬೇಕಾದರೂ ಜಯಬೇರಿ ಬಾರಿಸಬಹುದಾಗಿದೆ. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ೧೪ ಕ್ಷೇತ್ರಗಳಲ್ಲಿ ೧೦ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಈ ಪೈಕಿ ೨ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸೇರಿದಂತೆ ೮ ಕ್ಷೇತ್ರಗಳಲ್ಲಿ ಮೈತ್ರಿಯ ಸಹಕಾರ ಮತ್ತು ಸಮನ್ವಯತೆ ಮತ್ತು ಒಮ್ಮತದ ಶ್ರಮದ ಫಲವಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹರ್ಷ ವ್ಯಕ್ತಪಡಿಸಿದರು.ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ
ಒಟ್ಟಾಗಿ ಎದುರಿಸಿದ ಫಲ
ನಮಗೆ ಶಾಸಕರು ಇಲ್ಲದಿದ್ದರೂ ಸಹ ಜನತೆಯ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ನಾವುಗಳು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆಲವು ಸಾಧಿಸಿದ್ದೇವೆ. ವೇಮಗಲ್ ಕೆ.ಎಂ.ವೆಂಕಟೇಶ್, ವಕ್ಕಲೇರಿ ಮಂಜುನಾಥ್ ಎಂ., ಉತ್ತರ ಕಸಬಾ ಸೊಣ್ಣೇಗೌಡ, ವಡಗೂರು ವೆಂಕಟರಾಮಪ್ಪ, ಕೆಂದಟ್ಟಿ ಎ,ಶಿವಕುಮಾರ್, ಅವಿರೋಧವಾಗಿ ವಿಟ್ಟಪ್ಪನಹಳ್ಳಿ ವಿ.ಎಂ.ವೆಂಟೇಶ್, ದಕ್ಷಿಣ ಕಸವಾ ಮಹಿಳಾ ಮೀಸಲು ಕ್ಷೇತ್ರದಿಂದ ಅಂಬಿಕ, ಸಾಲಗಾರರಲ್ಲದ ಕ್ಷೇತ್ರದಿಂದ ಮೂರಂಡಹಳ್ಳಿ ನರೇಶ್ ಬಾಬು.ಜಿ ಆಯ್ಕೆಯಾಗಿದ್ದಾರೆ ತಿಳಿಸಿದ್ದಾರೆ.ಮುಂದೆ ಎ.ಪಿ.ಎಂ.ಸಿ. ತಾಪಂ, ಜಿಪಂ ಚುನಾವಣೆಗಳು ಬರಲಿದೆ. ಇದೇ ರೀತಿ ಎಲ್ಲರೂ ಒಗ್ಗಟ್ಟನ್ನು ಕಾಪಾಡಿಕೊಂಡರೆ ಮುಂಬರಲಿರುವ ಎಲ್ಲಾ ಚುನಾವಣೆಯಲ್ಲೂ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯ ಬಹುದೆಂಬ ವಿಶ್ವಾಸ ಉಂಟಾಗಿದೆ ಎಂದರು.ಪಕ್ಷಾಂತರ ಮಾಡದಂತೆ ಎಚ್ಚರಿಕೆ
ಒಗ್ಗಟ್ಟಾದರೆ ಗೆಲುವು ಸುಲಭ
ನಗರ ಪ್ರದೇಶಗಳಲ್ಲಿ ಮುಸ್ಲಿಂಮರು ಇರುವುದರಿಂದ ಎಂ.ಎಲ್.ಎ. ಸೀಟ್ ಹೊಡೆದುಕೊಂಡರು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಮರು ಎಲ್ಲಿದ್ದಾರೆ. ಜೆ.ಡಿ.ಎಸ್. ಹಾಗೂ ಬಿಜೆಪಿ ಒಂದಾದರೆ ನಾವು ಗೆಲ್ಲುವುದು ಸುಲಭವಾಗಲಿದೆ ಮುಂದಿನ ಎಲ್ಲಾ ಚುನಾವಣೆಗಳು ಕುಮಾರಣ್ಣ ಹಾಗೂ ಯಡಿಯುರಪ್ಪರ ನೇತೃತ್ವದಲ್ಲಿ ರಾಜ್ಯದ ಆಡಳಿತ ಚುನಾವಣೆ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು.ಈ ವೇಳೆ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ತಂಬಳ್ಳಿ ಮುನಿಯಪ್ಪ, ಬಾಬು ಮೌನಿ, ಟಮಕ ವೆಂಕಟೇಶ್, ವಡಗೂರು ರಾಮು, ಬಣಕನಹಳ್ಳಿ ನಟರಾಜ್, ಬಂಕ್ ಮಂಜುನಾಥ್, ಮದ್ದೇರಿ ವೆಂಕಟೇಶ್, ಮೂರಾಂಡಹಳ್ಳಿ ಗೋಪಾಲ್, ವಿಟಪನಹಳ್ಳಿ ವೆಂಕಟೇಶ್, ದಯಾನಂದ, ಕೃಷ್ಣಪ್ಪ ಇದ್ದರು.