ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ದೇವಾಂಗ ಬೀದಿಯ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಮಾಡುವುದರಿಂದ ತಾಯಂದಿರು ಹಾಗೂ ಪೋಷಕರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಸಿ. ಮಾತನಾಡಿ, ತಾಯಿ ಮತ್ತು ಶಿಶುಗಳ ಮರಣ ತಗ್ಗಿಸುವಿಕೆ ಹಾಗೂ ಅಪೌಷ್ಠಿಕತೆ ಹೋಗಲಾಡಿ, ತಾಯಂದಿರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಳಿದರು. ಪೌಷ್ಟಿಕ ಆಹಾರದ ಬಗ್ಗೆ, ಗರ್ಭಿಣಿ ಬಾಣಂತಿಯರ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಸಮತೋಲನ ಆಹಾರ ಬಳಕೆ, ಹಸಿರು ಸೊಪ್ಪು ತರಕಾರಿಗಳು ಹಾಗೂ ಜೀವಸತ್ವಗಳ ಬಗ್ಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಸೀಮಂತ ಶಾಸ್ತ್ರ ಮತ್ತು ಆರು ತಿಂಗಳ ಒಳಗಿನ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ಆಯೋಜನೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ರೇಣುಕುಮಾರ್ ವೈ.ಎಂ., ತಾ. ಪಂ. ಇಒ ಮುನಿರಾಜು, ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ, ಶಿವಕುಮಾರ್ ಮಾತನಾಡಿದರು.
ಅಂಗನವಾಡಿ ಶಿಕ್ಷಕಿಯರು ಸಾಮೂಹಿಕವಾಗಿ ಪ್ರಾರ್ಥಿಸಿದರು, ಶೈಲಜಾ ಸ್ವಾಗತಿಸಿದರು, ವಿಜಯಕುಮಾರಿ ನಿರೂಪಿಸಿದರು ಹಾಗೂ ಕೆ.ಪಿ.ವೀಣಾ ವಂದಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲ್ವಿಚಾರಕರಾದ ಪುಷ್ಪಲತಾ ಹಾಗೂ ಫನಿಬಂದ, ನ್ಯಾಯಾಂಗ ಇಲಾಖೆಯ ಕುಮಾರ್ ಕೆ.ಆರ್ ಹಾಗೂ ಕೃತಿಕ ಎಚ್.ಎಸ್., ಅಂಗನವಾಡಿ ಕಾರ್ಯಕರ್ತೆಯರಾದ ಕಾಂತಮ್ಮ, ಲೀಲಾವತಿ, ತಾರಾ, ಲತಾ, ಯಶೋಧ, ವಿಜಯ, ಇತರರು ಇದ್ದರು.