ಸಬ್‌ಸ್ಟೇಷನ್‌ ತಂದರೂ ಕಾಮಗಾರಿಗೆ ಗುತ್ತಿಗೆದಾರರೆ ಬರುತ್ತಿಲ್ಲ

KannadaprabhaNewsNetwork |  
Published : Sep 25, 2025, 01:00 AM IST
24ಎಚ್ಎಸ್ಎನ್4 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ಶಿವರಾಂ. | Kannada Prabha

ಸಾರಾಂಶ

ರೈತರು ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹರಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇದರ ನಡುವೆಯೂ ತಮ್ಮ ಪರಿಶ್ರಮದಿಂದ ಹೆಚ್ಚುವರಿ ವಿದ್ಯುತ್ ಸಬ್ ಸ್ಟೆಷನ್‌ಗಳನ್ನು ತಂದಿದ್ದರೂ ಟೆಂಡರ್‌ದಾರರು ಇಲ್ಲಿ ಟೆಂಡರ್‌ ಹಾಕಲು ಹಿಂದೇಟು ಹಾಕುತ್ತಿದ್ದು ಇದರ ಮೂಲ ಕಾರಣ ತಿಳಿದುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮಸ್ಯೆ ಇದ್ದರೂ ಸಹ ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇಳಿದರೆ ಸರ್ಕಾರದ ಮಂತ್ರಿಗಳ ಬಳಿ ನೀವೆ ಕೇಳಿ ಎಂದು ಸಬೂಬು ಹೇಳುತ್ತಾರೆ. ಕೇವಲ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿ ಕೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರುವಂತಹ ಇಚ್ಛಾ ಶಕ್ತಿಯನ್ನು ಹೊಂದಿ ಕೆಲಸ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಗಳು ಹೆಚ್ಚಾಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ಸಬ್‌ ಸ್ಟೇಷನ್‌ ಮಂಜೂರು ಮಾಡಿಸಿಕೊಂಡು ಬಂದಾಗಿದೆ. ಆದರೂ ಕಾಮಗಾರಿಯ ಗುತ್ತಿಗೆ ಪಡೆಯಲು ಯಾವೊಬ್ಬ ಗುತ್ತಿಗೆದಾರರು ಬಾರದಿರುವುದು ಚುನಾಯಿತ ಜನಪ್ರತಿನಿಧಿಗಳು ಹಾಗೂ ಆಡಳಿತ ಯಂತ್ರದ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ ಶಿವರಾಂ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹರಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇದರ ನಡುವೆಯೂ ತಮ್ಮ ಪರಿಶ್ರಮದಿಂದ ಹೆಚ್ಚುವರಿ ವಿದ್ಯುತ್ ಸಬ್ ಸ್ಟೆಷನ್‌ಗಳನ್ನು ತಂದಿದ್ದರೂ ಟೆಂಡರ್‌ದಾರರು ಇಲ್ಲಿ ಟೆಂಡರ್‌ ಹಾಕಲು ಹಿಂದೇಟು ಹಾಕುತ್ತಿದ್ದು ಇದರ ಮೂಲ ಕಾರಣ ತಿಳಿದುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮಸ್ಯೆ ಇದ್ದರೂ ಸಹ ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇಳಿದರೆ ಸರ್ಕಾರದ ಮಂತ್ರಿಗಳ ಬಳಿ ನೀವೆ ಕೇಳಿ ಎಂದು ಸಬೂಬು ಹೇಳುತ್ತಾರೆ. ಕೇವಲ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿ ಕೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರುವಂತಹ ಇಚ್ಛಾ ಶಕ್ತಿಯನ್ನು ಹೊಂದಿ ಕೆಲಸ ಮಾಡಬೇಕು ಎಂದರು.೧೫ ವರ್ಷಗಳ ಹಿಂದೆ ಸಬ್ ಸ್ಟೇಷನ್ ತಂದ ಸಂದರ್ಭದಲ್ಲಿ ಅವುಗಳ ಸ್ಥಿತಿಗತಿ ಏನಾಗಿದೆ ಎಂದು ನೀವುಗಳೆ ಆಲೊಚಿಸಬೇಕು. ತಾಲೂಕಿನಲ್ಲಿ ೬ ಎಮ್ ವಿ ಸಿ ಸಬ್ ಸ್ಟೇಷನ್ ಗಂಗೂರು, ಹಗರೆ, ಹಳೆಬೀಡು, ಅರೇಹಳ್ಳಿಯಲ್ಲಿ ಇದ್ದು ಅವುಗಳಿಗೆ ಹೆಚ್ಚುವರಿ ಅನುದಾನ ತಂದು ಟೆಂಡರ್ ಪ್ರಕ್ರಿಯೆ ಆಗಿದ್ದರೂ ಸಹ ಇಲ್ಲಿವರೆಗೂ ಯಾವುದೇ ಒಬ್ಬ ಗುತ್ತಿಗೆದಾರ ಕೆಲಸ ಮಾಡಲು ಮುಂದೆ ಬರದ ಉದ್ದೇಶವೇನು? ನಮ್ಮ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಆರ್‌ಡಿ ಪಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸರ್ಕಾರ ಸ್ಥಳೀಯ ಶಾಸಕರಿಗೆ ೨೫ ಕೋಟಿ ಅನುದಾನ ಅಭಿವೃದ್ಧಿಗೆ ನೀಡುತ್ತಿದೆ. ನಾವು ಈ ವಿಚಾರಕ್ಕೆ ತಲೆ ಹಾಕದೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ವಿದ್ಯುತ್ ಇಲಾಖೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಅದರ ಬಗ್ಗೆ ಹೋರಾಟ ಮಾಡಿ ಹೆಚ್ಚುವರಿ ಟಿಸಿ ಹಾಗು ಸಬ್ ಸ್ಟೇಷನ್ ತಂದಿದ್ದೇನೆ. ಆದರೆ ಇದರ ಕೆಲಸ ನಿರ್ವಹಿಸಲು ಗುತ್ತಿಗೆದಾರರು ಬರುತ್ತಿಲ್ಲ. ನಾವೇ ಕೆಲವು ಗುತ್ತಿಗೆದಾರರ ಬಳಿ ಮನವಿ ಮಾಡಿ ಕೆಲಸಗಳನ್ನು ಪ್ರಾರಂಭಿಸಲು ಮುಂದಾಗುತ್ತಿದ್ದೇವೆ. ಇಲ್ಲಿ ನಾನು ಜೆಡಿಎಸ್ ಹಾಗೂ ಬಿಜೆಪಿ ಬಗ್ಗೆ ಮಾತಾಡುತ್ತಿಲ್ಲ. ಯಾರೇ ಜನ ಪ್ರತಿನಿಧಿಗಳಾದರು ಸಾರ್ವಜನಿಕ ಸೇವೆಯಲ್ಲಿ ನಮಗೆ ಅವಕಾಶ ನೀಡಿದಾಗ ಅವರ ಋಣ ತೀರಸಬೇಕು. ನಾನೇ ತಪ್ಪು ಮಾಡಿದ್ದರೂ ನನ್ನನ್ನೇ ನೇರವಾಗಿ ಕೇಳುವ ಅಧಿಕಾರ ನನ್ನ ಕ್ಷೇತ್ರದ ಜನತೆಗೆ ಇದೆ ಎಂದರು. ಈಗಾಗಲೇ ಹನಿಕೆ ಹಾಗೂ ಬಿಕ್ಕೋಡು ಭಾಗದ ಹೆಚ್ಚುವರಿ ಸಬ್ ಸ್ಟೇಷನ್‌ಗೆ ಜಾಗದ ಸಮಸ್ಯೆ ಇದ್ದು ಸ್ಥಳೀಯ ರೈತರ ಮನವೊಲಿಸಿ ಕೆಲಸವನ್ನು ಪ್ರಾರಂಭಿಸಬಹುದು. ಅರೇಹಳ್ಳಿ ಭಾಗದ ಸಮಸ್ಯೆ ಬಗೆಹರಿದಿದ್ದು ಇನ್ನು ಸಣ್ಣಪುಟ್ಟ ಕೆಲಸಗಳು ಬಾಕಿ ಇದೆ. ತಾಲೂಕಿಗೆ ವಿದ್ಯುತ್ ಸಮಸ್ಯೆ ಬಂದಾಗ ಹಾಸನ ಚಿಕ್ಕಮಗಳೂರಿನಿಂದ ಹೆಚ್ಚುವರಿಯಾಗಿ ತೆಗೆದು ಕೊಳ್ಳುವ ಬದಲು ಇಲ್ಲೇ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇಲ್ಲಿ ಯಾವುದೇ ಕೆಲಸಗಳಿಗೆ ಅನುದಾನ ತಂದರೂ ಗುತ್ತಿಗೆದಾರ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗು ಸಾರ್ವಜನಿಕ ಸಹಕಾರ ಇದ್ದಾಗ ಮಾತ್ರ ಇಲ್ಲಿ ಅಭಿವೃದ್ಧಿ ಆಗಲು ಸಾಧ್ಯ‌ ಎಂದು ಹೇಳಿದರು. ಅದಕ್ಕಾಗಿ ನಾವೆ ಖುದ್ದಾಗಿ ಈ ಇಲಾಖೆಗೆ ಸಂಬಂಧಿಸಿದಂತೆ ೬ ಸಬ್ ಸ್ಟೇಷನ್‌ಗಳಿಗೆ ಮಂಜೂರಾತಿ ಮಾಡಿಸಿಕೊಂಡು ಟೆಂಡರ್ ಗಳನ್ನು ಮಾಡಿಸಿದ್ದೇನೆ. ಹಗರೆ ಭಾಗದ ಸಬ್ ಸ್ಟೇಷನ್ ಗೆ ೮.೭೬ ಲಕ್ಷ , ತಾಲೂಕಿಗೆ ಹೆಚ್ಚುವರಿಯಾಗಿ ೧೩೨.೬೬/೧೧ ಕೆವಿ ಪವರ್ ಸ್ಟೇಷನ್‌ಗೆ ೬೬/೧೧ ಕೆವಿ ಪವರ್ ಟ್ರಾನ್ಸ್ ಫರ್ಮ ಗೆ ೧೦.೬೦ ಲಕ್ಷ ಹಾಗು ಅದೇ ರೀತಿಯಾಗಿ ಹಳೆಬೀಡು ಹೋಬಳಿ ಗಂಗೂರು ಭಾಗದ ೬೬.೧೧ ಕೆವಿ ಪವರ್‌ ಸ್ಟೆಷನ್ ಗೆ ೮೩೮.೬೫ ಲಕ್ಷ ತರಲಾಗಿದ್ದು ಇನ್ನು ಹೆಚ್ಚುವರಿಯಾಗಿ ಈ ಭಾಗಕ್ಕೆ ಅನುದಾನ ಬರುತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಇಲ್ಲಿಯ ಸ್ಥಳೀಯ ಆಡಳಿತ ವರ್ಗ ಕೆಲಸ ಕಾರ್ಯಗಳಿಗೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ ಎಂದರು.ಸರ್ಕಾರ ಹಣವನ್ನು ಅಭಿವೃದ್ಧಿಗಾಗಿ ನೀಡುತ್ತದೆ. ಅದನ್ನು ಕಾರ್ಯ ರೂಪಕ್ಕೆ ತರುವುದರ ಜೊತೆಗೆ ಸಾರ್ವಜನಿಕರಿಗೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬುವುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ರಾಜಕಾರಣ ಅವರ ಚುನಾವಣಾ ಸಂದರ್ಭದಲ್ಲಿ ಮಾಡಲಿ ಸಾರ್ವಜನಿಕರಿಗೆ ತಮ್ಮ ಕಷ್ಟ ಹೇಳಿಕೊಂಡು ಬಂದಾಗ ಅದರ ಕಡೆ ಗಮನಹರಿಸಲಿ ಎಂದರು.ಈ ಸಂದರ್ಭದಲ್ಲಿ ಯೋಜನ ಪ್ರಾಧಿಕಾರದ ಸದಸ್ಯ ಸುದರ್ಶನ್ , ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್ ಹಾಜರಿದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ