ಹೊದ್ದೂರಿನಲ್ಲಿ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ-2024

KannadaprabhaNewsNetwork | Published : Jun 13, 2024 12:50 AM

ಸಾರಾಂಶ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಅವರ ಕುಟುಂಬದವರಿಗಾಗಿ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ-2024 ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಅವರ ಕುಟುಂಬದವರಿಗಾಗಿ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ-2024 ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ನಡೆಯಿತು.ಹೊದ್ದೂರಿನ ಮುಕ್ಕೋಲೆ ಎಸ್ಟೇಟ್ ಸ್ಟೇ ಆವರಣದಲ್ಲಿ ನಡೆದ ಕಾರ್ಯಕ್ರಮ ಸಾಂಪ್ರದಾಯಿಕ ‘ಅಬ್ಲ್ ಕೊಯೆ’ (ಅವಲಕ್ಕಿಯಿಂದ ಮಾಡಲಾಗುವ ವಿಶೇಷ ಖಾದ್ಯ) ತಯಾರಿಕೆಗೆ ಚಾಲನೆ ನೀಡುವ ಮೂಲಕ ಆರಂಭಗೊಂಡಿತು. ನಂತರ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೌಟುಂಬಿಕ ಸಂತೋಷಕೂಟ ಆಯೋಜಿಸುವುದರಿಂದ ಸದಸ್ಯರ ಕುಟುಂಬ ವರ್ಗದವರ ಮಧ್ಯೆ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕೋಶಾಧಿಕಾರಿ, ಹೊದ್ದೂರು ಗ್ರಾ. ಪಂ. ಅಧ್ಯಕ್ಷ ಹರಿಶ್ಚಂದ್ರ ಎ. ಹಂಸ ಮಾತನಾಡಿ, ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ ಏರ್ಪಡಿಸುವುದರಿಂದ ಕೌಟುಂಬಿಕ ಪ್ರೀತಿ ಹೆಚ್ಚಾಗುತ್ತದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈತಲತಂಡ ರಫೀಕ್ ತೂಚಮಕೇರಿ ಅವರನ್ನು ಸನ್ಮಾನಿಸಲಾಯಿತು.

ಸಂತೋಷಕೂಟದ ಅಂಗವಾಗಿ ಪದಾಧಿಕಾರಿಗಳ ಕುಟುಂಬದವರಿಗಾಗಿ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪುಟಾಣಿಗಳ ಕಾಳು ಎರಚುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ (ಪ್ರಥಮ), ಆಶ್ಮ್ ಮೊಹಮ್ಮದ್ (ದ್ವಿತೀಯ) ಮತ್ತು ರಿಫಾನ್ ರಫೀಕ್ (ತೃತೀಯ), ಪುಟಾಣಿಗಳ ಬಕೆಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ (ಪ್ರಥಮ), ಆಶ್ಮ್ ಮೊಹಮ್ಮದ್ (ದ್ವಿತೀಯ), ರಿಫಾನ್ ರಫೀಕ್ (ತೃತೀಯ) ಮತ್ತು ಮಿನ್ಹಾ ಮರಿಯಂ (4ನೇ ಸ್ಥಾನ), ಬಾಲಕರ ವಿಭಾಗದ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಕುಂಡಂಡ ರಝೀನ್ ರಜಾಕ್ (ಪ್ರಥಮ), ಮಂಡೆಂಡ ಮುಜಮಿಲ್ ಮೊಯ್ದು (ದ್ವಿತೀಯ) ಮತ್ತು ಕುಂಡಂಡ ಸುಹೈಬ್ ರಜಾಕ್ (ತೃತೀಯ) ಬಹುಮಾನ ಪಡೆದುಕೊಂಡರು.

ಬಾಲಕರ ಸಂಗೀತ ಕುರ್ಚಿ ವಿಭಾಗದಲ್ಲಿ ಆಲೀರ ರಮೀಜ್ ರಶೀದ್ (ಪ್ರಥಮ), ಪುಡಿಯಂಡ ಆಶೀರ್ ಹನೀಫ್ (ದ್ವಿತೀಯ) ಮತ್ತು ಮಂಡೆಂಡ ಮುಜ್ತಬಾ ಮೊಯ್ದು (ತೃತೀಯ), ಪುರುಷರ ಸಂಗೀತ ಕುರ್ಚಿ ವಿಭಾಗದಲ್ಲಿ ಮಂಡೆಂಡ ಮುಶ್ರಫ್ ಮೊಯ್ದು (ಪ್ರಥಮ), ಕರ್ತೊರೆರ ಶರ್ಪುದ್ದೀನ್ (ದ್ವಿತೀಯ) ಮತ್ತು ಕರ್ತೊರೆರ ಮುಸ್ತಫ (ತೃತೀಯ), ಮಹಿಳೆಯರ ಸಂಗೀತ ಕುರ್ಚಿ ವಿಭಾಗದಲ್ಲಿ ಕರ್ತೊರೆರ ರಝಿಯಾ ಮುಸ್ತಫ (ಪ್ರಥಮ), ಪುಡಿಯಂಡ ಫಾಹಿಲಾ ಸಾದುಲಿ (ದ್ವಿತೀಯ) ಮತ್ತು ಮಿತಲತಂಡ ಅಜ್ಮಿಯ ಇಸ್ಮಾಯಿಲ್ (ತೃತೀಯ) ಸ್ಥಾನ ಪಡೆದುಕೊಂಡರು.

ಪುರುಷರ ಹೌಸಿ ಹೌಸಿ (ತಾಂಬೋಲ) ಸ್ಪರ್ಧೆಯ ಫುಲ್ ಹೌಸ್ ವಿಭಾಗದಲ್ಲಿ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ (ಪ್ರಥಮ), ಫಾಸ್ಟ್ ಫೈವ್ ವಿಭಾಗದಲ್ಲಿ ಕರ್ತೊರೆರ ಮುಸ್ತಫ (ಪ್ರಥಮ), ಮೊದಲ ಸಾಲು ವಿಭಾಗದಲ್ಲಿ ಕುಂಡಂಡ ರಮೀಜ್ (ಪ್ರಥಮ), 2ನೇ ಸಾಲು ವಿಭಾಗದಲ್ಲಿ ದುದ್ಧಿಯಂಡ ಮಾಶೂಕ್ ಸೂಫಿ (ಪ್ರಥಮ) ಮತ್ತು 3ನೇ ಸಾಲು ವಿಭಾಗದಲ್ಲಿ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ (ಪ್ರಥಮ) ಬಹುಮಾನ ಪಡೆದರೆ, ಮಹಿಳೆಯರ ಹೌಸಿ ಹೌಸಿ ಸ್ಪರ್ಧೆಯ ಫುಲ್ ಹೌಸ್ ವಿಭಾಗದಲ್ಲಿ ಕುಂಡಂಡ ರಿಶಾನ ರಜಾಕ್ (ಪ್ರಥಮ), ಫಾಸ್ಟ್ 5 ವಿಭಾಗದಲ್ಲಿ ಮತ್ತು ಮೊದಲ ಸಾಲು ವಿಭಾಗದಲ್ಲಿ ಅಕ್ಕಳತಂಡ ಫಿದಾ ಸಾನಿಯಾ (ಪ್ರಥಮ), 2ನೇ ಸಾಲು ವಿಭಾಗದಲ್ಲಿ ಆಲೀರ ಆಯಿನ್ (ಪ್ರಥಮ) ಮತ್ತು 3ನೇ ಸಾಲು ವಿಭಾಗದಲ್ಲಿ ದುದ್ಧಿಯಂಡ ಮುಸ್ಕಾನ್ ಸೂಫಿ (ಪ್ರಥಮ) ಸ್ಥಾನ ಪಡೆದುಕೊಂಡರು.

ಸಂಸ್ಥೆ ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಜಂಟಿ ಕಾರ್ಯದರ್ಶಿ ಕರ್ತೊರೆರ ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಹಿರಿಯ ಪದಾಧಿಕಾರಿಗಳಾದ ಕುಪ್ಪಂದಿರ ಯೂಸೂಫ್ ಹಾಜಿ, ಆಲೀರ ಬಿ. ಅಬ್ದುಲ್ಲಾ, ಪುಡಿಯಂಡ ಸಾದುಲಿ, ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ) ಹಾಜಿ, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಮಂಡೇಂಡ ಎ. ಮೊಯ್ದು ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ವಂದಿಸಿದರು.

Share this article