ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಉದ್ಯಾನವನಗಳ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ವಿಶೇಷವಾಗಿ ಒಂದು ತಂಡ ರಚನೆ ಮಾಡಿ ಎಲ್ಲಾ ಭಾಗಗಳಲ್ಲಿಯೂ ಸ್ವಚ್ಛತೆ ಕಾಪಾಡುವುದು ಮತ್ತು ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲು ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ ಸಿದ್ಧವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ನಗರಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು. ಉದ್ಯಾನಗಳ ಸ್ವಚ್ಛತೆ ಕಾಪಾಡಿ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪಾದನೆ ಮಾಡುತ್ತಿರುವ ಗೊಬ್ಬರವನ್ನು ಪಾರ್ಕ್‌ಗಳಲ್ಲಿ ಗಿಡ ಮರಗಳಿಗೆ ಬಳಸಲು ಕ್ರಮವಹಿಸುವುದು. ಉದ್ಯಾನವನಗಳಲ್ಲಿ ಒಣಗಿ ಬೀಳುವ ಎಲೆಗಳನ್ನು ಉದ್ಯಾನವನದ ಮೂಲೆಯಲ್ಲಿ ಪಿಟ್ ಮಾದರಿ ನಿರ್ಮಿಸಿ, ಗೊಬ್ಬರ ತಯಾರಿಸಲು ಕ್ರಮವಹಿಸುವುದು ಎಂದರು.
ಕಾರಂಜಿಗಳ ದುರಸ್ತಿಗೆ ಕ್ರಮಉದ್ಯಾನವನಗಳಲ್ಲಿ ನೀರಿನ ಕಾರಂಜಿಗಳನ್ನು ದುರಸ್ತಿಪಡಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕ್ರಮವಹಿಸುವುದು. ಉದ್ಯಾನವನಗಳ ಸೂಕ್ತ ನಿರ್ವಹಣೆಗಾಗಿ ಉದ್ಯಾನವನದ ಸುತ್ತ ಮುತ್ತಲಿನ ಸಾರ್ವಜನಿಕರು ಮತ್ತು ಉದ್ಯಾನವನಗಳಲ್ಲಿ ವಾಯುವಿಹಾರ ವ್ಯಾಯಾಮ ಮಾಡುವ ಮತ್ತು ಆಟ ಆಡುವ ಜನರ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸದಸ್ಯರನ್ನೊಳಗಂಡಂತೆ ಒಂದು ಸಂಘವನ್ನು ರಚಿಸಲಾಗುವುದು ಎಂದು ತಿಳಿಸಿದರು.ಐವರು ನೇತೃತ್ವದ ಕಾರ್ಯಪಡೆ
ಪ್ರತಿ ಶನಿವಾರ ಸಾಂಸ್ಕೃತಿಕ ಸಂಜೆ
ಸಭೆಯಲ್ಲಿ ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್ ಇದ್ದರು.