ಕನ್ನಡಪ್ರಭ ವಾರ್ತೆ ಉಡುಪಿ
ನಂತರ ಮಾತನಾಡಿದ ಅವರು, ತುಳು ನಾಡಿನ ವೈಭವವನ್ನು ವಿವರಿಸುತ್ತ ತುಳು ಸಂಸ್ಕೃತಿಯನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೊತೆಗೆ ದಿನ ನಿತ್ಯದ ಪಾಠ ಪ್ರವಚನಗಳೊಂದಿಗೆ ಇಂತಹ ಉತ್ಸವಗಳ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಬಾಳ್ವೆ, ಶಾಂತಿ, ಸೌಹಾರ್ದತೆಗಳು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.
ತುಳು ಉತ್ಸವದ ಸಂಯೋಜಕ ಚಂದ್ರಶೇಖರ್, ತುಳು ಸಂಸ್ಕೃತಿಯ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಜಾವೇದ್, ರಾಘವೇಂದ್ರ ಜಿ.ಜಿ., ಹರಿಕೇಶವ್ ಸಹಕರಿಸಿದರು.ಉದ್ಘಾಟನೆಯ ನಂತರ ಕರದರ್ಪುನಿ, ಕೆರೆದಡ, ಟೊಂಕಾಟ, ಗುಂಟಾಟ, ಲಗೋರಿ, ಸೊಪ್ಪಾಟ ಮೊದಲಾದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆನಂದಿಸಿದರು.
ನೌಶಿನ್ ತೃತೀಯ ಬಿ.ಕಾಂ ಸ್ವಾಗತಿಸಿದರು. ಕಾವ್ಯ ಶೆಟ್ಟಿ ತೃತೀಯ ಬಿಬಿಎ ವಂದಿಸಿದರು. ಚೈತ್ರಾ ದೇವಾಡಿಗ ತೃತೀಯ ಬಿಬಿಎ ಕಾರ್ಯಕ್ರಮ ನಿರೂಪಿಸಿದರು.