ಡಾ.ಆಶಾದೇವಿ ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದರಿಂದ ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ರಾಣಿ ಚನ್ನಮ್ಮ, ಬ್ರಮರಾಂಭಾ, ಇನ್ನರ್ ವ್ಹಿಲ್ ಕ್ಲಬ್ ಸೇರಿ ವಿವಿಧ ಮಹಿಳಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಜರುಗಿತು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪ್ರತಿಭಾನ್ವಿತ ಹೆಣ್ಣು ಮಕ್ಕಳ ಬೆಂಬಲಕ್ಕೆ ಸದಾ ಸಿದ್ಧವಿರುವುದಾಗಿ ಡಾ.ಆಶಾದೇವಿ ಗುಡಗುಂಟಿ ತಿಳಿಸಿದರು. ಡಾ.ಆಶಾದೇವಿ ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದರಿಂದ ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ರಾಣಿ ಚನ್ನಮ್ಮ, ಬ್ರಮರಾಂಭಾ, ಇನ್ನರ್ ವ್ಹಿಲ್ ಕ್ಲಬ್ ಸೇರಿ ವಿವಿಧ ಮಹಿಳಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ಹೆಣ್ಣು ಮಕ್ಕಳು ಸಮಾಜದಲ್ಲಿ ಚೆನ್ನಾಗಿ ಬೆಳೆಯಬೇಕು. ಅವರಲ್ಲಿರುವ ಪ್ರತಿಭೆಗೆ ಅವಕಾಶಗಳು ದೊರೆಯಬೇಕು. ಯಾವುದೇ ಕಾರಣದಿಂದ ಮಹಿಳೆಯರು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸಮಾಜಮುಖಿಯಾಗಿ, ಮಹಿಳಾ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವಿದೆ ಎಂದು ತಿಳಿಸಿದರು.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನನ್ನ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಹರ್ಷ ತಂದಿದೆ. ಇದರಿಂದ ಸಮಾಜ ಸೇವೆಗೆ ಪ್ರೋತ್ಸಾಹ ಮತ್ತು ಜವಾಬ್ದಾರಿ ಹೆಚ್ಚಿಸಿದೆ.. ಡಾಕ್ಟರೇಟ್ ಪದವಿ ಬಂದಿರುವುದು ತಮ್ಮ ತಾಯಿಯ ಕನಸು ನನಸಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅನೇಕರಿಗೆ ಸೇವೆ ಸಲ್ಲಿಸುವ ಬಯಕೆಯನ್ನು ಮಕ್ಕಳು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.ಸಾಹಿತಿ ಡಾ. ಶಾರದಾ ಮುಳ್ಳೂರು ಮಾತನಾಡಿ, ಡಾ.ಆಶಾದೇವಿ ಗುಡಗುಂಟಿ ಅವರು ಧಾರ್ಮಿಕ ಕಾರ್ಯಕ್ರಮ ಸೇರಿ ಸಾಹಿತ್ಯ, ಸಂಗೀತ, ಕಲೆಗಳನ್ನು ಪ್ರೋತ್ಸಾಹಿಸಿದ್ದಾರೆ. ಶ್ರೀಮಂತರು ಹಲವರಿದ್ದರೂ ಕೊಡುವ ಗುಣ ಇರುವುದು ದೊಡ್ಡತನವಾಗಿದೆ. ಅನೇಕ ಹೆಣ್ಣು ಮಕ್ಕಳ ವಿದ್ಯಾಅಭ್ಯಾಸಕ್ಕೆ, ಶುಭ ಕಾರ್ಯಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಅವರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ಮಹಿಳೆಯರು ಸಾಧನೆ ಮಾಡಬೇಕು. ಎಲ್ಲಾ ಕ್ಷೇತ್ರದಲ್ಲೂ ಮುಂದೆ ಸಾಗಬೇಕು, ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದ ಅವರು, ಡಾ, ಆಶಾದೇವಿ ರೋಲ್ ಮಾಡಲ್ ಆಗಿದ್ದಾರೆ. ಅವರ ಸಮಾಜ ಸೇವೆಯನ್ನು ಸರ್ಕಾರ ಗುರುತಿಸಿ ಗೌರವಿಸಿದೆ. ಇದು ಜಮಖಂಡಿ ನಗರದ ಮಹಿಳೆಯರ ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು.ಗಿರಿಜಾ ಮೇತ್ರಿ, ಗೀತಾ ಹಿರೇಮಠ ಸವಿತಾ ಸನದಿ ವೇದಿಕೆಯಲ್ಲಿದ್ದರು. ರಜನಿ ಕರಡಿ ಪ್ರಾರ್ಥನಾ ಗೀತೆ ಹಾಡಿದರು. ಕೀರ್ತಿ ಗುಡಗುಂಟಿ ಸ್ವಾಗತಿಸಿದರು. ಗೀತಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ತುಪ್ಪದ, ಉಷಾ ರುದ್ರಸ್ವಾಮಿಮಠ, ಡಾ,ಅಶ್ವಿನಿ ಪೂಜಾರ, ಅಂಜು ಮಾಳಿ, ಮಾತನಾಡಿದರು. ದಾನಮ್ಮ ಪಂಚಗಟ್ಟಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತನ್ನ ತಾಯಿ ನಡೆದು ಬಂದ ದಾರಿ ಅಷ್ಟು ಸರಳವಾಗಿರಲಿಲ್ಲ. ಧಿಟ್ಟತನದಿಂದ ಅನೇಕ ಕಷ್ಟಗಳನ್ನು ಎದುರಿಸಿ ಮಕ್ಕಳನ್ನು ಸಾಕಿ ಬೆಳೆಸಿದ್ದಾರೆ. ವಿದ್ಯಾರ್ಥಿ ಜೀವನದಿಂದ ತನ್ನ ತಾಯಿ ಹೋರಾಟ ಮಾಡುತ್ತ ಬಂದಿದ್ದಾರೆ. ಅವರ ಒಳ್ಳೆತನ ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ದೊರೆತಿದೆ.- ಗೌರಿ ಈಶ್ವರಿ ಗುಡಗುಂಟಿ ಶಾಸಕ ಜಗದೀಶ ಗುಡಗುಂಟಿಯವರ ಪುತ್ರಿ