ಮಳೆಹಾನಿ ಮುಂಜಾಗ್ರತೆ ಬಗ್ಗೆ ಅಧಿಕಾರಿಗಳೊಂದಿಗೆ ಶಾಸಕ ಮಂಜು ಸಭೆ

KannadaprabhaNewsNetwork |  
Published : May 29, 2025, 12:12 AM IST
28ಎಚ್ಎಸ್ಎನ್5 : ಸಕಲೇಶಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಮಳೆ ಹಾನಿ ಎದುರಿಸಲು ಅಧಿಕಾರಿಗಳ ಸಭೆ ನಡೆಯಿತು. | Kannada Prabha

ಸಾರಾಂಶ

ಮಳೆಹಾನಿ ಎದುರಿಸುವ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಹಾನಿಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ೭೫ಲ್ಲಿ ಭೂಕುಸಿತಗಳು, ಅಲ್ಲಲ್ಲಿ ಮರಗಳು ಬೀಳುತ್ತಿರುವುದು, ಮನೆ ಕುಸಿತ ಸೇರಿದಂತೆ ಇನ್ನು ಹಲವು ಹಾನಿಗಳು ಉಂಟಾಗಿದೆ. ಮುಂಗಾರು ಆರಂಭವಾಗುವ ಮೊದಲೇ ಈ ರೀತಿಯಾದರೆ ಇನ್ನು ಮುಂಗಾರು ಪ್ರಾರಂಭವಾದ ಮೇಲೆ ಇನ್ನು ಯಾವ ರೀತಿ ಆಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮುನ್ನಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಳೆಗಾಲದ ಸಂಭಾವ್ಯ ಹಾನಿ ತಡೆಯಲು ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಸಿದ್ದರಿರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಳೆಹಾನಿ ಎದುರಿಸುವ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಹಾನಿಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ೭೫ಲ್ಲಿ ಭೂಕುಸಿತಗಳು, ಅಲ್ಲಲ್ಲಿ ಮರಗಳು ಬೀಳುತ್ತಿರುವುದು, ಮನೆ ಕುಸಿತ ಸೇರಿದಂತೆ ಇನ್ನು ಹಲವು ಹಾನಿಗಳು ಉಂಟಾಗಿದೆ. ಮುಂಗಾರು ಆರಂಭವಾಗುವ ಮೊದಲೇ ಈ ರೀತಿಯಾದರೆ ಇನ್ನು ಮುಂಗಾರು ಪ್ರಾರಂಭವಾದ ಮೇಲೆ ಇನ್ನು ಯಾವ ರೀತಿ ಆಗಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮುನ್ನಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ, ಅರಣ್ಯ ಇಲಾಖೆ, ಚೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ತಾಪಂ ಇಲಾಖೆಗಳ ಜವಾಬ್ದಾರಿ ಹೆಚ್ಚಾಗಿದೆ. ಮರಗಳು ಬೀಳುವುದು ಸಾಮಾನ್ಯವಾಗಿರುವುದರಿಂದ ಅರಣ್ಯ ಇಲಾಖೆಯವರು ಮರಗಳನ್ನು ತೆರವು ಮಾಡಲು ಸನ್ನದ್ಧರಾಗಿರಬೇಕು. ವಿದ್ಯುತ್ ಇಲಾಖೆಯವರ ಜವಾಬ್ದಾರಿ ಹೆಚ್ಚಾಗಿದ್ದು ಸಾರ್ವಜನಿಕರ ಸೇವೆಯಲ್ಲಿ ಅಡಚಣೆಯಾಗದಂತೆ ಸ್ಪಂದನೆ ಮಾಡಬೇಕು. ಯಾರಾದರು ಚೆಸ್ಕಾಂ ಸಿಬ್ಬಂದಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವಾಗ ದುರ್ವತನೆ ತೋರಿದರೆ ಅಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ೨೪ ಗಂಟೆಗಳ ಕಾಲವು ಹೆದ್ದಾರಿಯಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸಜ್ಜಾಗಿರಬೇಕು. ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಪ್ರತಿಯೊಂದು ಅನಾಹುತಗಳ ವರದಿಯನ್ನು ನಿಖರವಾಗಿ ತೆಗೆದುಕೊಳ್ಳಬೇಕು. ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಗಮನಿಸಬೇಕು. ನೆರೆಹಾನಿಗೆ ತಕ್ಷಣ ಸ್ಫಂದಿಸಲು ಆರೋಗ್ಯ ಇಲಾಖೆಗೆ ಒಂದು ಹೆಚ್ಚುವರಿ ಆ್ಯಂಬುಲೆನ್ಸ್ ಅವಶ್ಯಕತೆಯಿದ್ದು ಇದನ್ನು ನಾನು ಸಚಿವರ ಗಮನಕ್ಕೆ ತರುತ್ತೇನೆ. ಇನ್ನು ಕಂದಾಯ ಇಲಾಖೆಯವರು ರೈತರಿಗೆ ಸರಿಯಾಗಿ ಸ್ಪಂದಿಸಬೇಕು, ರೈತರಿಗೆ ವಿಳಂಬವಾಗದಂತೆ ಕೆಲಸ ಮಾಡಿಕೊಡಬೇಕು. ಒಟ್ಟಾರೆಯಾಗಿ ಎಲ್ಲಾ ಇಲಾಖೆಯವರು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಬೇಕು ಹಾಗೂ ತುರ್ತು ಸ್ಪಂದನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅರವಿಂದ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿ ಗಂಗಾಧರ್, ಚೆಸ್ಕಾಂ ಮುಖ್ಯ ಅಭಿಯಂತರ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.*ಹೇಳಿಕೆ-1 ಮಳೆ ಹಾನಿ ಎದುರಿಸುವುದು ಕೇವಲ ಕಂದಾಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯ ಜವಾಬ್ದಾರಿಯಲ್ಲ, ಇತರೆ ಇಲಾಖೆಯವರು ಸಹ ಕೈಜೋಡಿಸಬೇಕು. ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಅಧಿಕಾರಿಗಳಿಗೆ ನೀಡಬೇಕು.

- ಡಾ.ಶೃತಿ, ಉಪವಿಭಾಗಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ