
ಶ್ರೀಮಂಗಲ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರು.ಮೈಸೂರು -ಗೋಣಿಕೊಪ್ಪ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ 3.80 ಕೋಟಿ ರು. ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ದೇವರಪುರ ಪಟ್ಟಣದಲ್ಲಿ ಈ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಿಸಿದರು.
ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಯ ಬಾಲಾಜಿಯಿಂದ ಜೋಡುಬೀಟಿ (ಮಾಯಮುಡಿ-ಬಾಲಾಜಿ-ಜೋಡುಬೀಟಿ -ಕುಂದ) ಭಾಗದಲ್ಲಿ ಒಂದು ಕೋಟಿ ರು. ಅನುದಾನದಲ್ಲಿ ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಜೋಡುಬೀಟಿ ಭಾಗದಲ್ಲಿ ನಡೆಸಿದರು.ಹುದಿಕೇರಿಯಲ್ಲಿ ಶಾಸಕರು 5 ಲಕ್ಷ ರು. ಅನುದಾನದಲ್ಲಿ ನಿರ್ಮಾಣಗೊಂಡ ಹುದಿಕೇರಿ-ಕಳತ್ತೋಡು ನೂತನ ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ಬಳಿಕ ಹುದಿಕೇರಿಯ ಮುಕ್ಕಾಟಿಮಾನಿಯಲ್ಲಿ ಶಾಸಕರ ವಿಶೇಷ ಕಾಳಜಿಯಿಂದ 42 ಲಕ್ಷ ರು. ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ 11 ಕೆವಿ ವಿದ್ಯುತ್ ಮಾರ್ಗಕ್ಕೆ ಚಾಲನೆ ನೀಡಿದರು.ಬಳಿಕ ಮಡಿಕೇರಿ-ಕುಟ್ಟ ರಸ್ತೆಯ ಹುದಿಕೇರಿ ಬಳಿ ಪೊಕಳೆತೋಡು ಭಾಗದಲ್ಲಿರುವ ಸೇತುವೆಯ ಮರು ನಿರ್ಮಾಣಕ್ಕೆ ಎರಡು ಕೋಟಿ ರು. ಅನುದಾನವನ್ನು ಶಾಸಕರು ಒದಗಿಸಿದ್ದು, ಈ ಕಾಮಗಾರಿಗೆ ಭೂಮಿ ಪೂಜೆಯನ್ನು ಪೂಕಳೆತೋಡು ಬಳಿ ನೆರವೇರಿಸಿದರು.ಈ ಸಂದರ್ಭ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ನವೀನ್, ದೇವರಪುರ ವಲಯ ಅಧ್ಯಕ್ಷ ಬಸಂತ್, ಹುದಿಕೇರಿ ವಲಯ ಅಧ್ಯಕ್ಷ ಚಂಗುಲಂಡ ಸೂರಜ್, ಬೆನ್ನಿ, ಅಣ್ಣಳಮಾಡ ಹರೀಶ್, ಡಾ. ಮಧ್ಯಸ್ತ, ಮಣಿಕಂಠ, ಪಿ.ಸಿ. ರಾಮು, ಜಿಪಂ ಮಾಜಿ ಸದಸ್ಯೆ ಪಂಕಜ, ರಜನಿ, ಪುಷ್ಪ, ರವಿನಾ, ಸತೀಶ್, ಕಳ್ಳಿಚಂಡ ಸುರೇಶ್, ಗ್ರಾಪಂ ಸದಸ್ಯ ಚುಬ್ರು, ನವೀನ್, ಚೆಕ್ಕೇರ ವಾಸು ಕುಟ್ಟಪ್ಪ, ಮನೋಹರ್, ರಮೇಶ್, ರೀಕ್ಷಿತ್ ಕಾರ್ಯಪ್ಪ, ಅಜ್ಜಿಕುಟ್ಟಿರ ಪಮು, ಅಜ್ಜಿಕುಟ್ಟಿರ ಗಿರೀಶ್, ಮಂದಣ್ಣ , ಅಜ್ಜಿಕುಟ್ಟಿರ ಪೊನ್ನು, ಚೆಕ್ಕೇರ ಸುಧೀರ್, ಅಪ್ಪಚಂಗಡ ಮೋಟಯ್ಯ, ದಿಲು, ಚೊಟ್ಟೆಯಾoಡಮಾಡ ವಿಶು, ಉದಯ, ಮಧು ತಮ್ಮಯ್ಯ, ಕರುಂಬಯ್ಯ, ಕಿರಿಯಮಡ ಗಣೇಶ್ ಹಾಗೂ ಪಕ್ಷದ ಮುಖಂಡರು ಪ್ರಮುಖರು ಉಪಸ್ಥಿತರಿದ್ದರು.