ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಮುಬಾರಕ್ ಪಠಾಣ್ ಆಯ್ಕೆಯಾಗಿದ್ದಾರೆ.ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ಸರ್ಕಲ್‌ನಲ್ಲಿ ಏರ್ಪಡಿಸಿದ ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಶ್ರವಣಬೆಳಗೂಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ. ಎನ್. ಬಾಲಕೃಷ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಅಧ್ಯಕ್ಷ ಮುಬಾರಕ್ ಪಠಾಣ್‌ರಿಗೆ ಆಯ್ಕೆ ಪ್ರಮಾಣಪತ್ರ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ, ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರನ್ನು ಈ ದಿನ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾದ ಮುಬಾರಕ್ ಅವರು ಮುಸ್ಲಿಂ ಸಮಾಜದ ಹಿರಿಯ ಮತ್ತು ಕಿರಿಯ ಮುಖಂಡರ ಸಲಹೆ, ಸಹಕಾರ ಪಡೆದು ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲಿ ಎಂದು ಸಲಹೆ ನೀಡಿದರು. ಮುಸ್ಲಿಂ ಸಮಾಜದ ಬಂಧುಗಳು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ನನಗೆ ಮೂರು ಬಾರಿ ಶಾಸಕನಾಗಲು ಕಾರಣಕರ್ತರಾಗಿದ್ದೀರಾ, ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಇರಲಿ ಎಂದರು. ಮೊಟ್ಟಮೊದಲ ಬಾರಿಗೆ ಮುಸ್ಲಿಂ ಸಮಾಜದ ವ್ಯಕ್ತಿಗಳಿಗೆ ಚನ್ನರಾಯಪಟ್ಟಣ ಪುರಸಭಾ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಜೆಡಿಎಸ್ ಪಕ್ಷ ಮಾತ್ರ ಎಂದರು.ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಪುರಸಭಾ ಅಧ್ಯಕ್ಷ ಮೋಹನ್, ಟಿಎಪಿಎಂಎಸ್ ಅಧ್ಯಕ್ಷ ಎಮ್. ಆರ್. ಅನಿಲ್, ಶ್ರವಣಬೆಳಗೊಳ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ಬು, ಮಾಜಿ ಪುರಸಭಾ ಅಧ್ಯಕ್ಷರಾದ ಅನ್ಸರ್ ಬೇಗ್, ಮಾಜಿ ಪುರಸಭಾ ಸದಸ್ಯರಾದ ರವೀಶ್, ವೈಹೀದ್, ಸಫೀರ್, ಮುಸ್ಲಿಂ ಮುಖಂಡರಾದ ಅಬ್ದುಲ್ ಹಕ್, ಬಿಲಾಲ್ ಪಠಾಣ್ ಸೇರಿದಂತೆ ಇತರರು ಹಾಜರಿದ್ದರು.