ಮೇ 16ರಿಂದ ‘ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ’ ಆರಂಭ

KannadaprabhaNewsNetwork |  
Published : May 16, 2026, 03:15 AM ISTUpdated : May 16, 2026, 08:37 AM IST
E Khatha

ಸಾರಾಂಶ

ನಗರದಲ್ಲಿ ಇ-ಖಾತಾ ವಿತರಣೆಗೆ ವೇಗ ನೀಡುವುದು ಹಾಗೂ ಇ-ಖಾತಾಗೆ ಸಂಬಂಧಿಸಿದಂತೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಆರಂಭಿಸಿರುವ ‘ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ’ ಶನಿವಾರ ಆರಂಭವಾಗಲಿದೆ.

 ಬೆಂಗಳೂರು :  ನಗರದಲ್ಲಿ ಇ-ಖಾತಾ ವಿತರಣೆಗೆ ವೇಗ ನೀಡುವುದು ಹಾಗೂ ಇ-ಖಾತಾಗೆ ಸಂಬಂಧಿಸಿದಂತೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಆರಂಭಿಸಿರುವ ‘ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ’ ಶನಿವಾರ ಆರಂಭವಾಗಲಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 52 ಸ್ಥಳಗಳಲ್ಲಿ ಅಭಿಯಾನ ನಡೆಯಲಿದೆ. ಮುಂದಿನ 3 ತಿಂಗಳಗಳ ಕಾಲ ಪ್ರತಿ ಶನಿವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿಶೇಷ ಕೇಂದ್ರಗಳು ತೆರೆದಿರಲಿವೆ. ಅಭಿಯಾನ ನಡೆಯುವ ಸ್ಥಳಗಳನ್ನು ಜಿಬಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಬಹುದು. ನಾಗರಿಕರು ಖಾತಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡುವ ವೇಳೆ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಹಾಜರಾಗಬೇಕು ಎಂದು ಜಿಬಿಎ ಕೋರಿದೆ.

ಒಟ್ಟು 23 ಲಕ್ಷ ಇ-ಖಾತಾ ದಾಖಲೆಗಳನ್ನು ಈಗಾಗಲೇ ಜಿಬಿಎ ಕಂದಾಯ ಇಲಾಖೆ ಬಿಡುಗಡೆ ಮಾಡಿದೆ. ನಾಗರಿಕರು ಅರ್ಜಿ ಸಲ್ಲಿಸುವ ಮೂಲಕ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.

ರಜಾದಿನಗಳಾದ ಎರಡು ಮತ್ತು ನಾಲ್ಕನೇ ಶನಿವಾರವೂ ಸಹ ‘ನನ್ನ ಇ-ಖಾತಾ, ನನ್ನ ಹಕ್ಕು ಅಭಿಯಾನ’ ನಡೆಯಲಿದೆ. ಈ ಅವಧಿಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೇರೆ ದಿನ ರಜೆ ನೀಡಲಾಗುತ್ತದೆ.

ಶೇ.2ರಷ್ಟು ಶುಲ್ಕ ಪಾವತಿಗೆ ಅವಕಾಶ:

ಬಿ ಖಾತಾದಿಂದ ಎ ಖಾತಾ ಪರಿವರ್ತನೆಗಾಗಿ ಮಾರ್ಗಸೂಚಿ ಬೆಲೆಯನ್ನು ಶೇ.5ರ ಬದಲಿಗೆ ಶೇ.2 ರಷ್ಟು ಮಾತ್ರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಸುಮಾರು 100 ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ಅಂತಹವರಿಗೆ ಟೋಕನ್ ನೀಡಿ ಮುಂದಿನ ವಾರ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಶನಿವಾರ ನಗರದ ಸುಮಾರು 5000 ನಾಗರಿಕಗೆ ಸೇವೆ ಒದಗಿಸುವ ಗುರಿಯಿದೆ ಎಂದು ಜಿಬಿಎ ತಿಳಿಸಿದೆ. ಬಾಕಿ ಇರುವ ಅರ್ಜಿಗಳು ಅಥವಾ ಕುಂದುಕೊರತೆಗಳನ್ನು ಹೊಂದಿರುವ ಎಲ್ಲ ನಾಗರಿಕರನ್ನು ಎಸ್‌ಎಂಎಸ್, ಫೋನ್ ಕರೆಗಳ ಮೂಲಕ ಸಂಪರ್ಕಿಸಿ ಆಹ್ವಾನಿಸಲಾಗುವುದು. ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಸ್ಥಳದಲ್ಲೇ ಅರ್ಜಿ ವಿಲೇವಾರಿ ಮಾಡಿ ಪರಿಹಾರ ಒದಗಿಸಲಾಗುವುದು.

ಅಭಿಯಾನ ಸ್ಥಳದಲ್ಲಿ ಸಿಗುವ ಸೇವೆಗಳು

-ಇ-ಖಾತಾ

- ಹೊಸ ಇ-ಖಾತಾ

- ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ

- ಬಾಕಿ ಇರುವ ಅರ್ಜಿಗಳು, ತಿದ್ದುಪಡಿಗಳು ಹಾಗೂ ಅಹವಾಲುಗಳು, ಹೊಸ ಅರ್ಜಿಗೆ ಅವಕಾಶ.

- ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗೆ ಅಗತ್ಯ ತರಬೇತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಧಾರ್ಮಿಕ ಪರಂಪರೆ ರಕ್ಷಗಾಗಿ ಪಂಚಪೀಠಗಳ ಉಗಮ
ಮಾನವನ ಬದುಕು ವಿಶ್ವ ಮಾನ್ಯವಾಗಲು ಸಂವಿಧಾನ ಬಳಸಿಕೊಳ್ಳಿ