ನಗರಸಭೆ ಆವರಣದಲ್ಲಿ ನಡೆಯುತ್ತಿರುವ ಪೌರಕಾರ್ಮಿಕರ ನಾಲ್ಕನೇ ದಿನದ ಹೋರಾಟಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರು ಶುಕ್ರವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರಲ್ಲದೆ ಶೀಘ್ರದಲ್ಲಿಯೇ ನಿಮ್ಮ ಬೇಡಿಕೆ ಈಡೇರಿಸಿ ತಾರ್ತಿಕ ಅಂತ್ಯ ಕಾಣುವುದಾಗಿ ಭರವಸೆ ನೀಡಿದರು. ನಿಮ್ಮ ಹೋರಾಟ ಯಶಸ್ವಿಯಾಗಲಿ. ಸರ್ಕಾರ ಪಂಚ ಗ್ಯಾರಂಟಿ ಜೊತೆ ಭರವಸೆ ನೀಡಿದಂತೆ ಪೌರಕಾರ್ಮಿಕರ ಭರವಸೆ ಈಡೇರಿಸಬೇಕು ವರತು ಇದರಲ್ಲಿ ಯಾವ ರಾಜೀ ಆಗುವ ಪ್ರಶ್ನೆಯೇ ಇಲ್ಲ ಎಂದರು.
ಹಾಸನ: ನಗರಸಭೆ ಆವರಣದಲ್ಲಿ ನಡೆಯುತ್ತಿರುವ ಪೌರಕಾರ್ಮಿಕರ ನಾಲ್ಕನೇ ದಿನದ ಹೋರಾಟಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರು ಶುಕ್ರವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರಲ್ಲದೆ ಶೀಘ್ರದಲ್ಲಿಯೇ ನಿಮ್ಮ ಬೇಡಿಕೆ ಈಡೇರಿಸಿ ತಾರ್ತಿಕ ಅಂತ್ಯ ಕಾಣುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಉದ್ದೇಶಿಸಿ ಮಾತನಾಡಿದ ಪ್ರೀತಂಗೌಡ ಅವರು, ಪೌರಕಾರ್ಮಿಕರ ಬೇಡಿಕೆ ನ್ಯಾಯಯುತವಾಗಿದೆ ಎನ್ನುವ ಕಾರಣಕ್ಕೆ ನಗರ ಪಾಲಿಕೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಕೂಡ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಎರಡು ವರ್ಷದಿಂದ ಯಾವತ್ತು ಕೂಡ ನಗರಸಭೆಗೆ ಕಾಲಿಟ್ಟಿರಲಿಲ್ಲ. ನಿಮ್ಮೆಲ್ಲರ ಹೋರಾಟಕ್ಕೆ ಬೆಂಬಲ ಸೂಚಿಸಲು ನಗರ ಪಾಲಿಕೆ ವ್ಯಾಪ್ತಿ ಒಳಗೆ ಬಂದು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದರು. ಈಗ ತಾನೇ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರೊಂದಿಗೆ ನಗರಸಭೆ ಕಾರ್ಮಿಕರೊಂದಿಗೆ ಫೋನಿನಲ್ಲಿ ಮಾತನಾಡಿಸಲಾಗಿದ್ದು, ವಿರೋಧ ಪಕ್ಷದ ನಾಯಕಾರದ ಆರ್. ಅಶೋಕಣ್ಣನವರು, ಛಲವಾದಿ ನಾರಾಯಣಸ್ವಾಮಿ ಇಬ್ಬರಿಗೂ ಮಾತನಾಡಿಸುವ ಕೆಲಸ ಮಾಡಲಾಗುವುದು, ಮುಂಬರುವ ಅಧಿವೇಶನದಲ್ಲಿ ನಿಮ್ಮ ಸಮಸ್ಯೆಯನ್ನು ಅಂತ್ಯ ಕಾಣಿಸಲು ಜನಪ್ರತಿನಿಧೀಯಾಗಿ ಕೆಲಸ ಮಾಡಿರುವ ನಿಮ್ಮ ಪ್ರೀತಂಗೌಡ ನಿಮ್ಮ ಸಹೋಧರನಾಗಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು. ನಿಮ್ಮ ಹೋರಾಟ ಯಶಸ್ವಿಯಾಗಲಿ. ಸರ್ಕಾರ ಪಂಚ ಗ್ಯಾರಂಟಿ ಜೊತೆ ಭರವಸೆ ನೀಡಿದಂತೆ ಪೌರಕಾರ್ಮಿಕರ ಭರವಸೆ ಈಡೇರಿಸಬೇಕು ವರತು ಇದರಲ್ಲಿ ಯಾವ ರಾಜೀ ಆಗುವ ಪ್ರಶ್ನೆಯೇ ಇಲ್ಲ. ನಿಮ್ಮೊಂದಿಗೆ ನಾವು ಕೂಡ ಧ್ವನಿ ಕೂಡಿಸುತ್ತಾ ಹೋರಾಟಕ್ಕೆ ತಾಯಿ ಹಾಸನಾಂಬೆ ಮತ್ತು ತಾಯಿ ಚಾಮುಂಡೇಶ್ವರಿ ತಾಯಿ ಶಕ್ತಿ ಕೊಡಲಿ ಎಂದು ಹಾರಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಉಪಾಧ್ಯಕ್ಷೆ ಹೇಮಾಲತಾ ಕಮಲ್ ಕುಮಾರ್, ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.