ದೆಹಲಿ ಹೋರಾಟ ಬೆಂಬಲಿಸಿ ರೈತ ಸಂಘದಿಂದ ಧರಣಿ

KannadaprabhaNewsNetwork |  
Published : Feb 28, 2024, 02:35 AM IST
27ಕೆಬಿಪಿಟಿ.3.ಬಂಗಾರಪೇಟೆ ಕೋಲಾರ ರಾಜ್ಯ ಹೆದ್ದಾರಿ ರಸ್ತೆಯನ್ನು ರೈತರು ಬಂದ್ ಮಾಡಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಉದ್ಯೋಗ ಸೃಷ್ಟಿ ನೆಪದಲ್ಲಿ ಕೃಷಿ ಭೂಮಿಯನ್ನು ಕಬಳಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಾವಿರಾರು ಕೋಟಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಮೋಜು, ಮಸ್ತಿಗಾಗಿ ದೇಶ ಬಿಟ್ಟು ಹೋಗುವ ಉದ್ಯಮಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ.

ಬಂಗಾರಪೇಟೆ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಮೃತಪಟ್ಟಿರುವ ರೈತ ಕುಟುಂಬಗಳಿಗೆ ೧ ಕೋಟಿ ಪರಿಹಾರ ವಿತರಿಸಿ, ರೈತರೊಡನೆ ಶಾಂತಿಯುತ ಮಾತುಕತೆ ನಡೆಸಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ರಾಜ್ಯ ಹೆದ್ದಾರಿ ಕೋಲಾರ- ಬಂಗಾರಪೇಟೆ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು.

ಕೃಷಿ ಕ್ಷೇತ್ರದಲ್ಲಿ ಶೇ.೬೦ ರಷ್ಟು ಉದ್ಯೋಗ ಸೃಷ್ಟಿಸಿ ರಾತ್ರಿ-ಹಗಲು ಬೆವರು ಸುರಿಸಿ, ದೇಶಕ್ಕೆ ಅನ್ನ ಹಾಕುವ ಅನ್ನದಾತನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕಾದ ಕೇಂದ್ರ ಸರ್ಕಾರ ನೊಂದ ರೈತರ ಮೇಲೆ ಪೋಲಿಸ್‌ ಮೂಲಕ ದಬ್ಬಾಳಿಕೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ರೈತ ವಿರೋಧಿ ದೋರಣೆಯನ್ನು ಖಂಡಿಸಿದರು.

ಉದ್ಯೋಗ ಸೃಷ್ಟಿ ನೆಪದಲ್ಲಿ ಕೃಷಿ ಭೂಮಿಯನ್ನು ಕಬಳಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಾವಿರಾರು ಕೋಟಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಮೋಜು, ಮಸ್ತಿಗಾಗಿ ದೇಶ ಬಿಟ್ಟು ಹೋಗುವ ಉದ್ಯಮಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ೨೪ ಗಂಟೆಯೊಳಗೆ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಂತಿಯುತ ಮಾತುಕತೆ ಮೂಲಕ ಬಗೆಹರಿಸಿ ಮೃತ ರೈತ ಕುಟುಂಬಗಳಿಗೆ ೧ ಕೋಟಿ ಪರಿಹಾರ ನೀಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರ ಶಕ್ತಿ ಏನೆಂಬುದನ್ನು ತೋರಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ತಾ.ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಕಿರಣ್, ಚಾಂದ್‌ಪಾಷ, ಬಾಬಾಜಾನ್, ಮುನಿಕೃಷ್ಣ, ಮುನಿರಾಜು, ವಿಶ್ವ, ಗೋವಿಂದಪ್ಪ, ಲಕ್ಷ್ಮಣ್, ಶ್ರೀರಾಮ್, ಗುಲ್ಲಟ್ಟಿ ರಾಮಕೃಷ್ಣಪ್ಪ, ಗಣೇಶ್, ತಿಮ್ಮಣ್ಣ, ಗಿರೀಶ್, ರಾಮಸಾಗರ ವೇಣು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ