ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕದಲ್ಲಿ ಮಿಂಚಿ ಮರೆಯಾದ ಯುವ ಕಣ್ಮಣಿ, ನಟ ಕರ್ನಾಟಕ ರತ್ನ ದಿವಂಗತ ಪುನಿತ್ ರಾಜ್ ಕುಮಾರ್ ಅವರ 50 ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಕರ್ನಾಟಕ ಪುಲಕೇಶಿ ಸಂಘದ ವತಿಯಿಂದ ನಗರದ 4 ನೇ ವಾರ್ಡ್ ನ ಪ್ರಶಾಂತ ನಗರದಲ್ಲಿ ಅವರ ಪ್ರಥಮ ಪ್ರತಿಮೆ ಅನಾವರಣಗೊಳಿಸಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ ಮಾತನಾಡಿದರು.
ಸಮಜದ ಮಾದರಿ ವ್ಯಕ್ತಿನಗರಸಭಾಧ್ಯಕ್ಷ ಎ.ಗಜೇಂದ್ರ ಮಾತನಾಡಿ,“ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ದೊಡ್ಡ ಮನೆಯ ಪುನೀತ್ ರಾಜ್‌ಕುಮಾರ್ ಎಂದಿಗೂ ಬೀಗಲಿಲ್ಲ. ಸಮಾಜಕ್ಕೆ ಮಾದರಿಯಾಗಿ ಬದುಕಿದ್ದರು. ನೂರಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು. ಅವರ ಈ ಸೇವೆಯೂ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ'''''''' ಎಂದರು.
ಈ ವೇಳೆ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಬಿ.ಮಹೇಶ್, ಕರ್ನಾಟಕ ಪುಲಕೇಶಿ ಸಂಘದ ರಾಜ್ಯ ಉಪಾಧ್ಯಕ್ಷ ಸುಂದರೇಶ್, ಜಿಲ್ಲಾಧ್ಯಕ್ಷ ಜಿ.ಟಿ. ಪ್ರತಾಪ್,ಜೆಡಿಎಸ್ ಮುಖಂಡೆ ಶಿಲ್ಪಾಗೌಡ, ರಾಮಾಂಜಿ, ವೆಂಕಟೇಶ್, ವಿಜಯಕುಮಾರ್, ಚೆಲುವ ಮೂರ್ತಿ,ಜಿ.ಪಿ.ಮಂಜುನಾಥ್, ನಾರಾಯಣಸ್ವಾಮಿ, ನಟರಾಜ್ ಮತ್ತಿತರರು ಇದ್ದರು.