ಕನ್ನಡಪ್ರಭ ವಾರ್ತೆ ರಾಮದುರ್ಗ
2024-25ನೇ ಸಾಲಿನಲ್ಲಿ ಪುರಸಭೆಗೆ ವಿವಿಧ ಮೂಲಗಳಿಂದ ಸಂಗ್ರಹವಾಗುವ ಸಂಪನ್ಮೂಲ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ ನಿರೀಕ್ಷಿಸಿ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಹಾಗೂ ಪಟ್ಟಣದ ಸೌಂದರೀಕರಣ ಹೆಚ್ಚಿಸಲು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ, ಕುಡಿಯುವ ನೀರು ಪೂರೈಕೆ, ಬೀದಿದೀಪಗಳ ನಿರ್ವಹಣೆ, ನೈರ್ಮಲ್ಯಕರಣ ಸೇರಿದಂತೆ ವಿವಿಧ ಕಾರ್ಯಕ್ಕಾಗಿ ಈ ಬಜೆಟ್‌ನಲ್ಲಿ ಹಣ ಮೀಸಲೀಡಲಾಗಿದೆ ಎಂದು ತಿಳಿಸಿದ್ದಾರೆ.
₹4.20 ಕೋಟಿ ಆದಾಯ ಪುರಸಭೆಯ ಕರ ಸೇರಿ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ. ₹ 13.44 ಕೋಟಿ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ (ಎಸ್‌ಎಫ್‌ಸಿ, ಮುಕ್ತ ನಿಧಿ, ಎಸ್‌ಎಫ್‌ಸಿ ವಿಶೇಷ ಅನುದಾನ ಮತ್ತು 15ನೇ ಹಣಕಾಸು ಯೋಜನೆಯಿಂದ ಅನುದಾನ ನಿರೀಕ್ಷಿಸಿದರೆ, ವಿಶೇಷ ಅನುದಾನಿತ ಖಾತೆಗಳಿಂದ ಆದಾಯ ಮತ್ತು ಅಸಾಧರಣ (ಜಿಎಸ್‌ಟಿ, ಆಧಾಯ ತೆರಿಗೆ ಇತರೆ) ಮೂಲಗಳಿಂದ ನಿರೀಕ್ಷಿಸಿ ಒಟ್ಟು ₹20.36 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್ ತಯಾರಿಸಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.ನಗರದಲ್ಲಿ ರಸ್ತೆ ನಿರ್ಮಾಣ ಮತ್ತು ದುರಸ್ಥಿಗೆ ₹180 ಲಕ್ಷ, ರಸ್ತೆಬದಿ ಚರಂಡಿ ನಿರ್ಮಾಣ, ಗಟಾರಗಳ ಮೇಲೆ ಸ್ಲ್ಯಾಬ ಅಳವಡಿಸುವುದು, ಸಿ.ಡಿ. ನಿರ್ಮಾಣ, ಒಳಚರಂಡಿ ಕಾಮಗಾರಿಗೆ ₹74 ಲಕ್ಷ, ಕುಡಿಯುವ ನೀರು ಪೂರೈಕೆ ವಿತರಣೆಗೆ ₹123.60 ಲಕ್ಷ, ಘನತ್ಯಾಜ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದ ಕಾಮಗಾರಿಗೆ ₹75 ಲಕ್ಷ, ಬೀದಿದೀಪಗಳ ಜೋಡಣೆಗಾಗಿ ₹59.60 ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹20 ಲಕ್ಷ, ಉದ್ಯಾನವನ ಅಭಿವೃದ್ಧಿಗೆ ₹15 ಲಕ್ಷ, ಬೀದಿದೀಪಗಳ ನಿರ್ವಹಣೆಗೆ ₹24 ಲಕ್ಷ.