ಜೋಧಪುರ ಅರಣ್ಯ ಸಂಶೋಧನಾ ಸಂಸ್ಥೆಗೆ ಶರತ್ ವಿಜ್ಞಾನಿ

KannadaprabhaNewsNetwork |  
Published : Oct 08, 2023, 12:02 AM IST
ಶರತ್ ಕೊಠಾರಿ | Kannada Prabha

ಸಾರಾಂಶ

ಶಿರಸಿ ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಮಂಜುನಾಥ ಕೊಠಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಬರುವ ರಾಜಸ್ಥಾನದ ಜೋಧಪುರದ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಶಿರಸಿ: ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಮಂಜುನಾಥ ಕೊಠಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಬರುವ ರಾಜಸ್ಥಾನದ ಜೋಧಪುರದ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಕೃಷಿಕ ಮಂಜುನಾಥ ಕೊಠಾರಿ ಹಾಗೂ ಸಾವಿತ್ರಿ ದಂಪತಿಯ ಪುತ್ರನಾದ ಇವರು, ಹಾಸನ ಕೃಷಿ ವಿದ್ಯಾಲಯದಿಂದ ಪದವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಕೃಷಿ ಮಣ್ಣು ಹಾಗೂ ಕೃಷಿ ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ICAR-JRF ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದು ಶಿಷ್ಯವೇತನ ಪಡೆದಿದ್ದಾರೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ನ್ಯಾನೋಕ್ಲೆಬಯೋಪಾಲಿಮರ್ ರಾಸಾಯನಿಕ ಗೊಬ್ಬರಗಳ ಮೇಲೆ ನಡೆಸಿದ ಸಂಶೋಧನೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಹಾಗೂ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆಯ ಚಿನ್ನದ ಪದಕವನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ಸ್ವೀಕರಿಸಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಚಿನ್ನದ ಪದಕದ ಜತೆ ಒಟ್ಟು 13 ಚಿನ್ನದ ಪದಕಗಳೊಂದಿಗೆ 2019ರಲ್ಲಿ ಕೃಷಿ ಪದವಿ ಪಡೆದಿದ್ದಾರೆ. ಇದೀಗ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಇವರ ಈ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ