ಸಿದ್ದೇಶ್ವರ ಶ್ರೀಗಳ ಪುಣ್ಯಸ್ಮರಣೆ

KannadaprabhaNewsNetwork |  
Published : Jan 04, 2024, 01:45 AM IST
ಸಿಂದಗಿ  | Kannada Prabha

ಸಾರಾಂಶ

ಶ್ರೀಗಳು ಅತ್ಯಂತ ಸರಳ ಸಜ್ಜನಿಕೆಯ ಸಹಕಾರ ಮೂರ್ತಿ. ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರು

ಸಿಂದಗಿ: ಶ್ರೀ ಸಿದ್ದೇಶ್ವರ ಶ್ರೀಗಳು ಅತ್ಯಂತ ಸರಳ ಸಜ್ಜನಿಕೆಯ ಸಹಕಾರ ಮೂರ್ತಿ. ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರು. ಅವರು ಸಂತರಷ್ಠೇ ಅಲ್ಲ ಜ್ಞಾನೋಪಾಸಕರು ಕೂಡ ಆಗಿದ್ದವರು. ಅವರ ಜ್ಞಾನದ ಸಿರಿ ಜಗತ್ತಿಗೆ ಪಸರಿಸಿದೆ. ವಿಜಯಪುರದಲ್ಲಿನ ವಿಶ್ವವಿಖ್ಯಾತ ಗೊಳಗುಮ್ಮಟ ಒಂದು ಕಡೆಯಾದರೆ ಶ್ರೀಗಳು ಜಗತ್ತಿನ ಜ್ಞಾನ ಗುಮ್ಮಟ ಆಗಿದ್ದರು ಎಂದು ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ. ಆರ್‌. ಹೆಗ್ಗಣದೊಡ್ಡಿ ಹೇಳಿದರು. ಎಚ್.ಜಿ.ಪಾಲೇಜಿನಲ್ಲಿ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆಯ ನಿಮಿತ್ತ ಆಯೋಜಿಸಿದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಎ.ಪಾಟೀಲ, ಬಿ.ಎಸ್.ಬಿರಾದಾರ, ಆರ್‌.ಬಿ.ಹೊಸಮನಿ, ಎಂ.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ, ಡಾ.ಶಾಂತುಲಾಲ ಚವ್ಹಾಣ, ಎ.ಬಿ.ಪಾಟೀಲ, ಎ.ಆರ್‌.ಸಿಂದಗೀಕರ, ಆರ್.ವೈ.ಪರೀಟ, ಗಂಗಾರಾಮ ಪವಾರ, ಸುರೇಶ ಮಂಗೊಂಡಿ, ಸಚಿನ ಕನಾಲ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ