ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿ ಜೆನೆಟ್ ಅವರು ನೀಡಿದ ಮನವಿಯನ್ನು ಆಧರಿಸಿ, ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಒಟ್ಟು ೨೦ ಕುರ್ಚಿ, ೪ ಟೇಬಲ್‌ಗಳೊಂದಿಗೆ, ‘ನಲಿ-ಕಲಿ’ ವಿಭಾಗಕ್ಕೆ ೧೮ ಕುರ್ಚಿ ಹಾಗೂ ೪ ಟೇಬಲ್ಗಳನ್ನು ವಿತರಿಸಲಾಯಿತು ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಎಚ್. ಎಸ್. ಹರೀಶ್ ಮಾಹಿತಿ ನೀಡಿದರು. ಸರ್ಕಾರಿ ಶಾಲೆಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಗುಂಡೆಗೌಡನಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳ ಶೈಕ್ಷಣಿಕ ಸೌಕರ್ಯ ಹೆಚ್ಚಿಸುವ ಉದ್ದೇಶದಿಂದ ಶ್ರೀ ರಾಮಧೂತ ಹನುಮಾನ್ ದಂಢ್, ಹಾಸನ ಟ್ರಸ್ಟ್ ವತಿಯಿಂದ ಕುರ್ಚಿ ಮತ್ತು ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿ ಜೆನೆಟ್ ಅವರು ನೀಡಿದ ಮನವಿಯನ್ನು ಆಧರಿಸಿ, ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಒಟ್ಟು ೨೦ ಕುರ್ಚಿ, ೪ ಟೇಬಲ್‌ಗಳೊಂದಿಗೆ, ‘ನಲಿ-ಕಲಿ’ ವಿಭಾಗಕ್ಕೆ ೧೮ ಕುರ್ಚಿ ಹಾಗೂ ೪ ಟೇಬಲ್ಗಳನ್ನು ವಿತರಿಸಲಾಯಿತು ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಎಚ್. ಎಸ್. ಹರೀಶ್ ಮಾಹಿತಿ ನೀಡಿದರು. ಸರ್ಕಾರಿ ಶಾಲೆಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶಾಂತಿ ಜೆನೆಟ್, ಶ್ರೀ ರಾಮದೂತ ಹನುಮಾನ್ ದಂಢ್, ಹಾಸನ ಟ್ರಸ್ಟ್ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ. ಅನ್ನದಾನ, ಆರೋಗ್ಯ ಶಿಬಿರಗಳು, ಸರ್ಕಾರಿ ಶಾಲೆಗಳಿಗೆ ಅಗತ್ಯ ವಸ್ತುಗಳ ವಿತರಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವುದೇ ಪಲಾಪೇಕ್ಷೆ ಇಲ್ಲದೆ ನಡೆಸಿಕೊಂಡು ಬರುತ್ತಿರುವುದನ್ನು ನಾವು ಹಲವು ವರ್ಷಗಳಿಂದ ಗಮನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಶಾಲೆಯ ಅಗತ್ಯವನ್ನು ತಿಳಿಸಿ ಮನವಿ ಸಲ್ಲಿಸಿದಾಗ, ಟ್ರಸ್ಟ್ ಅಧ್ಯಕ್ಷರು ತಕ್ಷಣ ಸ್ಪಂದಿಸಿ ಇಂದು ಸುಮಾರು ೨೫ಕ್ಕೂ ಹೆಚ್ಚು ಸದಸ್ಯರೊಂದಿಗೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕುರ್ಚಿ, ಟೇಬಲ್ ವಿತರಣೆ ಮಾಡಿ, ಮಕ್ಕಳೊಂದಿಗೆ ಸಮಯ ಕಳೆದಿರುವುದು ನಮಗೆ ಅಪಾರ ಸಂತೋಷ ತಂದಿದೆ ಎಂದು ಹೇಳಿದರು.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗ್ರಾಂಡ್ ರೇಖಿ ಮಾಸ್ಟರ್ ರುಕ್ಮಿಣಿ ವಿಶ್ವನಾಥ್ ಹಾಗೂ ವಕೀಲರಾದ ಡಿ. ವಿಶ್ವನಾಥ್ ದಂಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹರೀಶ್ ಮತ್ತು ಅವರ ತಂಡವನ್ನು ನಾವು ಬಹಳ ವರ್ಷಗಳಿಂದ ಹತ್ತಿರದಿಂದ ನೋಡಿದ್ದೇವೆ. ಯಾವುದೇ ದೊಡ್ಡಮಟ್ಟದ ಸಹಾಯ, ಸಹಕಾರಗಳಿಲ್ಲದೆ, ತಮ್ಮದೇ ಖರ್ಚಿನಲ್ಲಿ ಕಳೆದ ೧೦-೧೫ ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಸಣ್ಣ ಕಾರ್ಯಗಳಿಗೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಈ ತಂಡಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ದೊರಕಬೇಕು ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಶ್ರೀ ರಾಮದೂತ ಹನುಮಾನ್ ದಂಢ್, ಹಾಸನ ಟ್ರಸ್ಟ್ನ ಅಧ್ಯಕ್ಷರಾದ ಎಚ್.ಎಸ್. ಹರೀಶ್, ಕಾರ್ಯದರ್ಶಿ ವಿಕಾಸ್, ಖಜಾಂಚಿ ಚೇತನ್, ಯೋಗೀಶ್, ದುಶ್ವಾಶ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಾಂತಿ ಜೆನೆಟ್, ಅಂಗನವಾಡಿ ಕಾರ್ಯಕರ್ತೆ ಪುಷ್ಪ, ವಕೀಲರಾದ ಡಿ. ವಿಶ್ವನಾಥ್, ಗ್ರಾಂಡ್ ರೇಖಿ ಮಾಸ್ಟರ್ ರುಕ್ಮಿಣಿ ವಿಶ್ವನಾಥ್ ಸೇರಿದಂತೆ ಟ್ರಸ್ಟ್ನ ೨೫ಕ್ಕೂ ಹೆಚ್ಚು ಸದಸ್ಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.