ಕೆಳಗಳಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಲ್ಲೇಶ್ವರ, ಶ್ರೀ ಬಸವೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯದ ಉದ್ಘಾಟನಾ ಸಮಾರಂಭ ಫೆ. 8, 9, 10ರಂದು ಆಯೋಜಿಸಲಾಗಿದೆ ಎಂದು ಶ್ರೀ ಕಲ್ಲೇಶ್ವರ ದೇವಾಲಯ ಸಮಿತಿ ಸದಸ್ಯ ಕೆ. ಎನ್. ಮಧು ತಿಳಿಸಿದರು. ಮಹಾ ಮೃತ್ಯುಂಜಯ ಹೋಮ, ಮಹಾನ್ಯಾಸ ಪೂರ್ವಕ ಪ್ರತಿಷ್ಠಾಪನಾಂಗ ಹೋಮಗಳು, ಅಗ್ನಿದರ್ಶನ, ಕದಳಿ ಚೇದನ, ಅಷ್ಟೋತ್ತರ ರಾಜೋಪಚಾರ ಸೇವೆಯೊಂದಿಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ, ರಾಷ್ಟ್ರಶೀರ್ವಾದ ಮತ್ತು ಗೋಪುರ ಕಳಸರೋಹಣ ನೆರವೇರಲಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡುಮಲ್ಲಿಪಟ್ಟಣ ಹೋಬಳಿಯ ಕೆಳಗಳಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಲ್ಲೇಶ್ವರ, ಶ್ರೀ ಬಸವೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯದ ಉದ್ಘಾಟನಾ ಸಮಾರಂಭ ಫೆ. 8, 9, 10ರಂದು ಆಯೋಜಿಸಲಾಗಿದೆ ಎಂದು ಶ್ರೀ ಕಲ್ಲೇಶ್ವರ ದೇವಾಲಯ ಸಮಿತಿ ಸದಸ್ಯ ಕೆ. ಎನ್. ಮಧು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ. 8ರಂದು ಸಂಜೆ ಗೋಧೂಳಿ ಲಗ್ನದಲ್ಲಿ 4.30ಕ್ಕೆ ಗಂಗಾಪೂಜೆ, ಮಹಾಗಣಪತಿ ಪೂಜೆ, ಗೋಪೂಜೆ, ಸಂಕಲ್ಪ ಪೂರ್ವಕ ನೂತನ ವಿಗ್ರಹಗಳ ಮೆರವಣಿಗೆಯು ವೀರಗಾಸೆ ಮಂಗಳವಾದ್ಯದೊಂದಿಗೆ ಸಾಗಿ ಆಲಯ ಪ್ರವೇಶ ಸ್ಥಳ ಶುದ್ದಿ ವಿಗ್ರಹ ಸಂಸ್ಕಾರ ಮಹಾಗಣಪತಿ ಹೋಮ, ವಾಸ್ತು ಹೋಮ, ರುದ್ರಹೋಮ, ಲಘು ಪೂರ್ಣಹುತಿ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ, ಫೆ. 9ರಂದು ಬೆಳಿಗ್ಗೆ 4.40ರಿಂದ 5.30ಕ್ಕೆ ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಕಲ್ಲೇಶ್ವರ, ಶ್ರೀ ಬಸವೇಶ್ವರ ಸ್ವಾಮಿ ಮೂರ್ತಿಯ ಪ್ರಾಣಾ ಪ್ರತಿಷ್ಠಾಪನೆ, ಪಂಚಕಳಸ, ನವಗ್ರಹ ಪೂಜೆ, ಮಹಾ ಮೃತ್ಯುಂಜಯ ಹೋಮ, ಮಹಾನ್ಯಾಸ ಪೂರ್ವಕ ಪ್ರತಿಷ್ಠಾಪನಾಂಗ ಹೋಮಗಳು, ಅಗ್ನಿದರ್ಶನ, ಕದಳಿ ಚೇದನ, ಅಷ್ಟೋತ್ತರ ರಾಜೋಪಚಾರ ಸೇವೆಯೊಂದಿಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ, ರಾಷ್ಟ್ರಶೀರ್ವಾದ ಮತ್ತು ಗೋಪುರ ಕಳಸರೋಹಣ ನೆರವೇರಲಿದೆ ಎಂದರು.ಶ್ರೀ ಕ್ಷೇತ್ರ ಅಧಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆ, ಶ್ರೀ ಕ್ಷೇತ್ರ ಅಧಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಹಾಸನದ ಶ್ರೀ ಶಂಭುನಾಥ ಸ್ವಾಮೀಜಿ, ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಮತ್ತಿತರೇ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಗೌರವಧ್ಯಕ್ಷರಾಗಿ ಭಾಗವಹಿಸಲಿದ್ದಾರೆ. ಶಾಸಕ ಎ. ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅವರು ಉದ್ಘಾಟಿಸಲಿದ್ದಾರೆ ಎಂದರು.ವಿಶೇಷ ಆಹ್ವಾನಿತರಾಗಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು, ಶಾಸಕ ಎಚ್. ಡಿ. ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಜುರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ, ಶಾಸಕ ಮಂತರ್ ಗೌಡ ಮತ್ತಿತರರು ಭಾಗವಹಿಸಲಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ನಿಂಗಪ್ಪ, ಕಾರ್ಯದರ್ಶಿ ಸುಧಾಕರ್, ಸದಸ್ಯರಾದ ಪೊನ್ನಪ್ಪ, ನಂದೀಶ್ ಮತ್ತಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.