ಈ ಬಾರಿ ಬಜೆಟ್‌ನಲ್ಲಿ ಹಾಸನ ಜಿಲ್ಲೆಯನ್ನು ಮರೆತಿದ್ದಾರೆ

KannadaprabhaNewsNetwork |  
Published : Mar 11, 2025, 12:48 AM IST
20ಎಚ್ಎಸ್ಎನ್3 :  | Kannada Prabha

ಸಾರಾಂಶ

ಈ ಬಾರಿ ರಾಜ್ಯದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯನ್ನು ಮರೆತಿದ್ದಾರೆ. ಅಭಿವೃದ್ಧಿಗಳ ಬದಲಿಗೆ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯು ಕರ್ನಾಟಕ ಬಜೆಟ್ ಪುಸ್ತಕದಲ್ಲಿ ಇಲ್ಲ. ದೆಹಲಿ ಬಜೆಟ್‌ ಬುಕ್‌ನಲ್ಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು. ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮಟ್ಕಾ, ಜೂಜು, ಮದ್ಯ ಸೇವನೆಯಿಂದ ಜನರ ಮನೆಗಳ ಹೆಣ್ಣುಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿ ರಾಜ್ಯದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯನ್ನು ಮರೆತಿದ್ದಾರೆ. ಅಭಿವೃದ್ಧಿಗಳ ಬದಲಿಗೆ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯು ಕರ್ನಾಟಕ ಬಜೆಟ್ ಪುಸ್ತಕದಲ್ಲಿ ಇಲ್ಲ. ದೆಹಲಿ ಬಜೆಟ್‌ ಬುಕ್‌ನಲ್ಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಐದು ಗ್ಯಾರಂಟಿಗಳು ಮುಂದುವರೆದಿದ್ದರೂ, ಹಾಸನ ಜಿಲ್ಲೆಗೆ ಯಾವುದೂ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು. ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮಟ್ಕಾ, ಜೂಜು, ಮದ್ಯ ಸೇವನೆಯಿಂದ ಜನರ ಮನೆಗಳ ಹೆಣ್ಣುಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ೨೦೨೫-೨೬ನೇ ಸಾಲಿನ ಬಜೆಟ್ ಮಂಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹಾಸನ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆ ಸಿಕ್ಕಿಲ್ಲ. ರಾಜ್ಯದಲ್ಲಿ ಐದು ಗ್ಯಾರಂಟಿಯನ್ನು ಮುಂದುವರಿಸಿದ್ದಾರೆ ಹೊರತು ಹಾಸನ ಜಿಲ್ಲೆಗೆ ರಾಜ್ಯದ ಬೆಜಟ್‌ನಲ್ಲಿ ಏನೂ ನೀಡಿಲ್ಲ. ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರಂಟಿ ಮಾತ್ರ ಸಿಕ್ಕಿದೆ ಎಂದು ಕಿಡಿಕಾರಿದರು.

ಈ ಬಜೆಟ್‌ನಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆ ಈಗ ವ್ಯರ್ಥವಾಗಿದೆ. ಫ್ಲೈಓವರ್‌ಗೆ ಅನುದಾನ ನಿರೀಕ್ಷಿಸಿದ್ದರೂ, ಬಜೆಟ್‌ನಲ್ಲಿ ಏನೂ ಸಿಕ್ಕಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳಿಗೆ ಮುಂದುವರಿದ ಅನುದಾನ ನೀಡಲಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ನೀಡಬೇಕಿತ್ತು, ಆದರೆ ಕೊಟ್ಟಿಲ್ಲ. ಹಾಸನ ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಇಲ್ಲ, ದೆಹಲಿ ಹಾಸನ ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಇಲ್ಲ, ದೆಹಲಿ ಬಜೆಟ್ ಬುಕ್‌ನಲ್ಲಿ ಮಾತ್ರ ಇದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಯಾವ ಯೋಜನೆ ಬೇಕು ತರುವ ಶಕ್ತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅಲ್ಪಸಂಖ್ಯಾತರು ವಾಸಿಸುವ ರಸ್ತೆಗಳ ನಿರ್ಮಾಣ ಮಾಡಲು ಹಣ ನೀಡಬಹುದಿತ್ತು. ಆದರೆ ಪ್ರದೇಶಗಳ ಕಡೆಗಣನೆ ಮಾಡಲಾಗಿದೆ. ಕನಿಷ್ಠ ೧,೦೦೦ ವಸತಿ ಗೃಹಗಳನ್ನಾದರೂ ಮಂಜೂರು ಮಾಡಬಹುದಿತ್ತು. ಕೆಲವರು ಟೀಕೆ ಮಾಡ್ತಾರೆ, ಆದರೆ ನಾನು ಎದೆಗುಂದುವುದಿಲ್ಲ. ಹಾಸನ ಮಹಾನಗರ ಪಾಲಿಕೆ ಘೋಷಣೆಯಾಗಿದ್ದರೂ, ಅದರ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಮುಂದಿನ ಚುನಾವಣೆಗೆ ಹಾಸನ ಮಹಾನಗರ ಪಾಲಿಕೆ ಆಗಬಹುದು, ಆದರೆ ಬೆಳವಣಿಗೆಗೆ ಹಣವೇ ಇಲ್ಲ ಎಂದು ದೂರಿದರು. ಈ ಸರ್ಕಾರ ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಸಹಿಸಲಾರದು ಎಂದು ಟೀಕಿಸಿದರು.

ಇದೇ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಇತರರು ಉಪಸ್ಥಿತರಿದ್ದರು.

==

* ಬಾಕ್ಸ್‌: ಎಸ್ಪಿ ನಿಯಂತ್ರಣ ಕಳೆದುಕೊಂಡಿದ್ದಾರೆ:

ಕರ್ತವ್ಯದಲ್ಲಿರುವಾಗಲೇ ಕೆಲವು ಪೊಲೀಸರು ಸಂಜೆ ಏಳು ಗಂಟೆಗೆ ಎಣ್ಣೆ ಹಾಕ್ತಾರೆ! ಹಾಸನ ಜಿಲ್ಲೆಯ ಎಸ್ಪಿಯವರು ಇದನ್ನು ತಡೆಗಟ್ಟಬೇಕು. ಕೆಳಮಟ್ಟದ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿಯಂತ್ರಣದಲ್ಲಿಲ್ಲ ಎಂದು ಆರೋಪಿಸಿದರು. ಕೂಡಲೇ ಎಸ್ಪಿ ಅವರು ಕ್ರಮಕೈಗೊಳ್ಳಲು ಮುಂದಾಗಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ