ಉಳ್ಳಾಲದಲ್ಲಿ ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಹುಲಿ!

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ
ಕನ್ನಡಪ್ರಭ ವಾರ್ತೆ ಮಂಗಳೂರು ನವರಾತ್ರಿ ಬಂತೆಂದರೆ ಕರಾವಳಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಫೇಮಸ್‌. ಆದರೆ ಈ ವರ್ಷ ವಿಶೇಷ ಹುಲಿಗಳು ಬಂದಿವೆ. ಇವು ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಹುಲಿಗಳು! ಹೌದು, ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್‌ ವಿದ್‌ ಇಸ್ರೇಲ್‌’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ. ಇಸ್ರೇಲ್‌- ಪ್ಯಾಲಿಸ್ತೇನ್ ಯುದ್ಧದ ಈ ಸಂದರ್ಭದಲ್ಲಿ ಭಾರತವು ಇಸ್ರೇಲ್‌ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಈ ಹುಲಿವೇಷ ಹಾಕಲಾಗಿದೆ. ಈ ಹುಲಿಗಳ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Share this article