ದುಬೈನ ಕರ್ನಾಟಕ ಸಂಘದ ಸಹಯೋಗದೊಂದಿಗೆ ದುಬೈನಲ್ಲಿ ನ.22ರಂದು ‘ನಾವಿಕ’ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ‘ನಾವು ವಿಶ್ವ ಕನ್ನಡಿಗರು’(ನಾವಿಕ) ಸಂಘಟನೆಯ ಅಧ್ಯಕ್ಷೆ ಡಾ.ಅನ್ನಪೂರ್ಣ ಭಟ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುದುಬೈನ ಕರ್ನಾಟಕ ಸಂಘದ ಸಹಯೋಗದೊಂದಿಗೆ ದುಬೈನಲ್ಲಿ ನ.22ರಂದು ‘ನಾವಿಕ’ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ‘ನಾವು ವಿಶ್ವ ಕನ್ನಡಿಗರು’(ನಾವಿಕ) ಸಂಘಟನೆಯ ಅಧ್ಯಕ್ಷೆ ಡಾ.ಅನ್ನಪೂರ್ಣ ಭಟ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕವಾಗಿ ಕನ್ನಡಿಗರನ್ನು ಒಂದುಗೂಡಿಸಲು ತಮ್ಮ ಸಂಘಟನೆ ಶ್ರಮಿಸುತ್ತಿದ್ದು, ದುಬೈನ ಕರ್ನಾಟಕ ಸಂಘದ ಸಹಕಾರದೊಂದಿಗೆ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಅಲ್ಲದೆ, ಒಂಬತ್ತನೆ ನಾವಿಕ ವಿಶ್ವ ಅಂತಾರಾಷ್ಟ್ರೀಯ ಸಮ್ಮೇಳನವನ್ನು 2027 ಸೆ.3 ರಿಂದ 5ರವರೆಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ನಮ್ಮದು ಲಾಭರಹಿತ ಸಂಘಟನೆಯಾಗಿದ್ದು ಕನ್ನಡ ನಾಡು-ನುಡಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನಾವಿಕದ ಒಂಬತ್ತನೇ ಅಧ್ಯಕ್ಷೆಯಾಗಿರುವುದು ತಮ್ಮ ಸೌಭಾಗ್ಯವಾಗಿದೆ. ತಾಂತ್ರಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ವಿಷಯಗಳೊಡನೆ ನಾವು ಜಾಗತಿಕವಾಗಿ ಕನ್ನಡಿಗರನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದೇವೆ. ಯುವ ನಾಯಕತ್ವಕ್ಕೆ ಪ್ರೋತ್ಸಾಹ, ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತಿತರ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.
2009ರಲ್ಲಿ ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘವನ್ನು ಸ್ಥಾಪಿಸಲಾಯಿತು. 2010ರಲ್ಲಿ ನಾವು ವಿಶ್ವ ಕನ್ನಡಿಗರು(ನಾವಿಕ) ಎಂದು ಹೆಸರು ಬದಲಾಯಿಸಲಾಯಿತು. ಕೃತಕ ಬುದ್ಧಿಮತ್ತೆ, ವೈದ್ಯಕೀಯ ಶಿಕ್ಷಣ, ಉದ್ಯಮಶೀಲತೆ ಸಹಿತ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.