ಮಹಿಳೆ ಅಬಲೆಯಲ್ಲ, ಸಾಧನೆ ಮಾಡುವುದಕ್ಕೆ ಸಿದ್ಧ

KannadaprabhaNewsNetwork |  
Published : Sep 28, 2025, 02:00 AM IST
ಶಿವಮೊಗ್ಗದ ಬಂಜಾರ ಕನ್ವೇಷನ್ ಹಾಲ್‌ನಲ್ಲಿ ಜರುಗಿದ ಅಧಿಕಾರ ಪದಗ್ರಹಣ ಕಾರ್ಯಕ್ರಮದ ವೇದಿಕೆಯಲ್ಲಿ ಶ್ವೇತಾ ಬಂಡಿ ಅವರು ಅಧಿಕಾರ ಸ್ವೀಕಾರ ಮಾಡಿದರು. | Kannada Prabha

ಸಾರಾಂಶ

ಮಹಿಳೆಯರು ಅಬಲೆಯರಲ್ಲ, ಅವರು ದೊಡ್ಡ ಸಾಧನೆ ಮಾಡುವುದಕ್ಕೆ ಸಿದ್ಧ ಎನ್ನುವುದಕ್ಕೆ ಇಲ್ಲಿದ್ದವರು ಸಾಕ್ಷಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು.

ಶಿವಮೊಗ್ಗ: ಮಹಿಳೆಯರು ಅಬಲೆಯರಲ್ಲ, ಅವರು ದೊಡ್ಡ ಸಾಧನೆ ಮಾಡುವುದಕ್ಕೆ ಸಿದ್ಧ ಎನ್ನುವುದಕ್ಕೆ ಇಲ್ಲಿದ್ದವರು ಸಾಕ್ಷಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು.

ನಗರದ ಬಂಜಾರ ಕನ್ವೇಷನ್ ಹಾಲ್‌ನಲ್ಲಿ ಜರುಗಿದ ಶ್ವೇತಾ ಬಂಡಿ ಅವರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ವೇತಾ ಬಂಡಿಯವರು ತಮ್ಮ ಚುನಾವಣೆಯ ಪ್ರಚಾರದಲ್ಲಿ ಶ್ರಮಿಸಿದ್ದಾರೆ. ಇಂದಿನ ಸಮಾವೇಶ ಖುಷಿ ತಂದಿದೆ. ಮಹಿಳೆಯರು ಅಬಲೆಯರಲ್ಲ. ಅವರಿಗೆ ಎಲ್ಲಾ ಶಕ್ತಿಯಿದೆ. ಅವರು ಎಲ್ಲರನ್ನು ಜೊತೆಗೂಡಿಸಿಕೊಂಡು ಅವರು ಪಕ್ಷ ಸಂಘಟಿಸಲಿ ಎಂದರು.

ನಾನು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ಪಕ್ಷದ ಎಲ್ಲರ ಜೊತೆಗೂ ದೃಢವಾಗಿ ಇರುತ್ತೇನೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ ಬಾನು ಮಾತನಾಡಿ, ಇದೊಂದು ಅತ್ಯಂತ ಸಂತೋಷದ ದಿನ. ತುಂಬಾಹೆಮ್ಮೆ ಎನಿಸುತ್ತದೆ. ಮಂಜುನಾಥ್ ಭಂಡಾರಿ ಅವರ ಮೂಲಕ ಮಹಿಳೆಯರೆ ವೇದಿಕೆಯಲ್ಲಿ ಇರುವಂತಾಗಿದೆ. ಇದಕ್ಕೆಲ್ಲಾ ಕಾರಣರಾದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಅಧಿಕಾರ ಹಸ್ತಾಂತರಿಸಿದ ಬಳಿಕ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿ, ಮಹಿಳೆ ಅನೇಕ ನೋವುಗಳ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರುತ್ತಾಳೆ. ಅಧಿಕಾರಕ್ಕೆ ಮಾತ್ರವೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ತನ್ನನು ತಾನು ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ನಾವೆಲ್ಲ ಇಲ್ಲಿ ಬಂದಿದ್ದೇವೆ. ನಮಗೆ ಉತ್ತೇಜ ಮುಖ್ಯ ಎಂದು ಹೇಳಿದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ದೇಶದಲ್ಲಿ ಮಹಿಳೆಯರ ದೊಡ್ಡ ಶಕ್ತಿ ಎಂದರೆ ಇಂದಿರಾಗಾಂಧಿ ಅವರು. ಅವರ ಸ್ಫೂರ್ತಿಯೇ ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರು ಗುರುತಿಸಿಕೊಳ್ಳಲು ಸಾಧ್ಯ ವಾಗಿದೆ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಖ್ಯ ಆಗಬಾರದು, ಘೋಷಣೆ ಆಗಬಾರದು. ಅದು ಅವಳ ಬದುಕಿನ ಭಾಗವಾಗಿ ಇರಬೇಕು. ಇದುಕುಟುಂಬದಿಂದ ಹಿಡಿದು ರಾಜಕಾರಣದವರೆಗೂ ಕೂಡ ಇದು ಅನ್ವಯವಾಗಬೇಕಿದೆ ಎಂದರು.

ಇದೇ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಶ್ವೇತಾ ಬಂಡಿ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರದ ಜವಾಬ್ದಾರಿ ನೀಡಿದರು.

ಸಮಾರಂಭವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷೆ ಮಂಜುನಾಥ್ ಭಂಡಾರಿ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಚ ಆರ್.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಆಧ್ಯಕ್ಷ್ ಆರ್.ಎಂ.ಮಂಜುನಾಥ್ ಗೌಡ, ರಾಜ್ಯ ಜವಳಿ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಯೋಗೇಶ್, ಎಸ್.ರವಿಕುಮಾರ್, ಜಿ.ಪಲ್ಲವಿ, ಅನಿತಾ ಕುಮಾರಿ, ಪುಷ್ಪಾ ಶಿವಕುಮಾರ್, ರೇಖಾ ರಂಗನಾಥ್ ಇತರರಿದ್ದರು.

ಶೋಷಿತ ಮಹಿಳೆಯರಿಗೆ

ಧ್ವನಿಯಾಗುವೆ : ಶ್ವೇತಾಬಂಡಿ

ಇದೊಂದು ಐತಿಹಾಸಿಕ ಕ್ಷಣ. ತುಂಗಾ, ಭದ್ರ ನದಿಗಳ ಶಕ್ತಿಯ ಹಾಗೆ ಮಹಿಳಾ ಶಕ್ತಿಯ ನಡುವೆ ನಾನು ಅಧಿಕಾರ ಸ್ವೀಕರಿಸಿದ್ದು, ಅತ್ಯಂತ ಐತಿಹಾಸಿಕ ಕ್ಷಣ. ನಾನು ಇದೊಂದು ಅಧಿಕಾರ ಎಂದು ಭಾವಿಸುವುದಿಲ್ಲ. ಇದೊಂದು ಜವಾಬ್ದಾರಿ ಎಂದು ಭಾವಿಸುವೆ. ಯಾಕೆಂದರೆ ಧ್ವನಿ ಇಲ್ಲದ ಶೋಷಿತ ಮಹಿಳೆಯರ ಧ್ವನಿ ಯಾಗುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ನಾನು ಜವಾಬ್ದಾರಿ ಎಂದು ಭಾವಿಸಿದ್ದೇನೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ