ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ನಮೂನೆಗಳನ್ನು ವಿತರಿಸುತ್ತಿದ್ದು, ಗಣಕೀಕರಣ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
- ಸ್ಥಳಾಂತರ, ಮರಣ, ದ್ವಿಪ್ರತಿ ಇತರೆ ಕಾರಣಗಳಿಂದ ಗುರುತಿಸಲಾದವರು 4,327 ಮತದಾರರು: ಡಿಸಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ನಮೂನೆಗಳನ್ನು ವಿತರಿಸುತ್ತಿದ್ದು, ಗಣಕೀಕರಣ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 14,91,918 ನಮೂನೆಗಳನ್ನು ವಿತರಿಸಲಾಗಿದ್ದು, ಆ ಪೈಕಿ 3,78,421 ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಕ್ಷೇತ್ರವಾರು ಪ್ರಗತಿ:
103-ಜಗಳೂರು ಕ್ಷೇತ್ರದಲ್ಲಿ 2,00,836 ಮತದಾರರಿದ್ದು 2,00,818 ನಮೂನೆಗಳನ್ನು ವಿತರಿಸಿ 47,270 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ ಕ್ಷೇತ್ರದಲ್ಲಿ 2,11,023 ಮತದಾರರಿದ್ದು , 2,10, 977 ನಮೂನೆಗಳನ್ನು ವಿತರಿಸಿದ್ದು 77,125 ನಮೂನೆಗಳು ಗಣಕೀಕರಿಸಲಾಗಿದೆ . 106- ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 2,58,718 ಮತದಾರರಿದ್ದು, 2,57,124 ನಮೂನೆಗಳನ್ನು ವಿತರಿಸಿದ್ದು 19,526 ನಮೂನೆಗಳು ಗಣಕೀಕರಣಗೊಂಡಿವೆ. 107-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,27,996 ಮತದಾರರಿದ್ದು ವಿತರಿಸಲಾದ 2,27,774 ನಮೂನೆಗಳಲ್ಲಿ 17,323 ನಮೂನೆಗಳನ್ನು ಕಂಪ್ಯೂಟರೀಕರಿಸಲಾಗಿದೆ.
108-ಮಾಯಕೊಂಡ ಕ್ಷೇತ್ರದಲ್ಲಿ 1,97,048 ಮತದಾರರಿದ್ದು 1,97,047 ನಮೂನೆಗಳನ್ನು ವಿತರಿಸಲಾಗಿದ್ದು ಅತ್ಯಧಿಕವಾಗಿ 91,971 ನಮೂನೆಗಳನ್ನು ಗಣಕೀಕರಿಸಲಾಗಿದೆ . 109-ಚನ್ನಗಿರಿ ಕ್ಷೇತ್ರದಲ್ಲಿ 2,03,628 ಮತದಾರರಿದ್ದು ವಿತರಿಸಲಾದ 203612 ನಮೂನೆಗಳ ಪೈಕಿ 75,180 ಗಣಕೀಕರಿಸಲಾಗಿದೆ, ಮತ್ತು 110-ಹೊನ್ನಾಳಿ ಕ್ಷೇತ್ರದಲ್ಲಿ 2,00,033 ಮತದಾರರಿದ್ದು , 1,94,566 ವಿತರಿಸಲಾದ ನಮೂನೆಗಳಲ್ಲಿ 50,026 ನಮೂನೆಗಳ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ.
ಸ್ಥಳಾಂತರ, ಮರಣ, ದ್ವಿಪ್ರತಿ ಮತದಾರರ ವಿವರ:
ಜುಲೈ 01, 2026 ರಿಂದ ಆರಂಭವಾದ ಪರಿಶೀಲನಾ ಕಾರ್ಯದಲ್ಲಿ ಜಿಲ್ಲೆಯಾದ್ಯಂತ ಒಟ್ಟು 4,327 ಮತದಾರರನ್ನು ಸ್ಥಳಾಂತರ, ಮರಣ, ದ್ವಿಪ್ರತಿ ಅಥವಾ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. 58 ಸಂಗ್ರಹವಾಗದ/ ಗೈರು ಮತದಾರರು ಇಡೀ ಜಿಲ್ಲೆಯಲ್ಲಿ ಒಟ್ಟು 1,546 ಶಾಶ್ವತ ವಲಸೆ, 2,023 ಮರಣ, 668 ದ್ವಿಪ್ರತಿ ಹಾಗೂ 32 ಇತರೆ ಪ್ರಕರಣಗಳು ಪತ್ತೆಯಾಗಿವೆ.
ಕ್ಷೇತ್ರವಾರು ವಿವರ:
ಜಗಳೂರು ಕ್ಷೇತ್ರದಲ್ಲಿ ಒಟ್ಟು 302 ಪ್ರಕರಣಗಳು (103 ವಲಸೆ, 121 ಮರಣ, 70 ದ್ವಿಪ್ರತಿ, 8 ಇತರೆ) ಕಂಡುಬಂದಿವೆ. ಹರಿಹರ ಕ್ಷೇತ್ರದಲ್ಲಿ ಒಟ್ಟು 588 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 166 ವಲಸೆ, 307 ಮರಣ, 105 ದ್ವಿಪ್ರತಿ ಹಾಗೂ 10 ಇತರೆ ಸೇರಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗುರುತಿಸಲಾದ ಒಟ್ಟು 655 ಪ್ರಕರಣಗಳಲ್ಲಿ 219 ವಲಸೆ, 345 ಮರಣ, 76 ದ್ವಿಪ್ರತಿ ಮತ್ತು 15 ಇತರೆ ಪ್ರಕರಣಗಳಾಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 477 ಮತದಾರರನ್ನು (170 ವಲಸೆ, 193 ಮರಣ, 104 ದ್ವಿಪ್ರತಿ, 10 ಇತರೆ) ಪಟ್ಟಿಯಿಂದ ಗುರುತಿಸಲಾಗಿದೆ. ಮಾಯಕೊಂಡ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 807 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 286 ವಲಸೆ, 395 ಮರಣ, 111 ದ್ವಿಪ್ರತಿ ಮತ್ತು 15 ಇತರೆ ಪ್ರಕರಣಗಳು ಸೇರಿವೆ. ಚನ್ನಗಿರಿ ಕ್ಷೇತ್ರದಲ್ಲಿ ಅತ್ಯಧಿಕವಾಗಿ ಒಟ್ಟು 848 ಪ್ರಕರಣಗಳು (362 ವಲಸೆ, 327 ಮರಣ, 134 ದ್ವಿಪ್ರತಿ, 25 ಇತರೆ) ಕಂಡುಬಂದಿದ್ದರೆ, ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 650 ಪ್ರಕರಣಗಳನ್ನು (240 ವಲಸೆ, 335 ಮರಣ, 68 ದ್ವಿಪ್ರತಿ, 7 ಇತರೆ) ನಿಯಮಾನುಸಾರ ಪರಿಷ್ಕರಣೆಗೆ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.