ಉಮಾಶಂಕರ ಕಾರ್ಯ
ಹೊರ ರಾಜ್ಯದಿಂದ ಬೆಂಗಳೂರಿಗೆ ಪ್ರತಿದಿನ 10 ಸಾವಿರ ಜನ ಬಂದಿಳಿಯುತ್ತಿದ್ದು, ಇವರಿಗೆಲ್ಲ ನೀರು, ವಸತಿ ಸೇರಿ ಮೂಲ ಸೌಕರ್ಯ ಒದಗಿಸುವುದೇ ಸವಾಲಾಗಿದ್ದು, ಕನ್ನಡ ಕಲಿಸುವುದಂತೂ ದೂರದ ಮಾತಾಗಿದೆ.
ನಗರದ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೃಷ್ಣರಾಜಪುರಂ ರೈಲ್ವೆ ನಿಲ್ದಾಣಗಳಿಗೆ ಉತ್ತರ ಭಾರತದಿಂದ ಸುಮಾರು 22 ರೈಲುಗಳು ಪ್ರಯಾಣಿಕರನ್ನು ಹೊತ್ತು ತರುತ್ತವೆ.ಅತ್ಯಂತ ಪ್ರಮುಖವಾದ ರೈಲು ಗಾಡಿಯಾಗಿರುವ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ದೆಹಲಿ, ಮಥುರಾ ಜಂಕ್ಷನ್, ಆಗ್ರಾ, ಗ್ವಾಲಿಯರ್, ಬೀನಾ, ಭೋಪಾಲ್ ಜಂಕ್ಷನ್, ಖಾಂಡ್ವಾ, ಬುಹ್ರಾನ್ ಪುರ, ಜಳಗಾಂವ್, ಕೊಪರ್‌ಗಾಂವ್, ಬೇಲಾಪುರ, ಅಹಮದ್‌ನಗರ, ದೌಂಡ್ ಜಂಕ್ಷನ್, ಕುರ್ಡುವಾಡಿ, ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರವೇಶಿಸಿ ಅನಂತಪುರ, ಮಂತ್ರಾಲಯಂ ಮೂಲಕ ಕಲಬುರ್ಗಿಗೆ ಪ್ರವೇಶಿಸಿ ಸುಮಾರು 2,395 ಕಿಲೋಮೀಟರ್ ಗಳಿಂದ ಪ್ರತಿದಿನ ಪ್ರಯಾಣಿಕರನ್ನು ಹೊತ್ತು ತರುತ್ತದೆ.
ಈ ರೈಲುಗಳಿಂದ ಸುಮಾರು 6 ರಿಂದ 8 ಸಾವಿರ ಮಂದಿ ಪ್ರತಿದಿನ ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದು ತಲುಪುತ್ತಾರೆ. ಇವರೆಲ್ಲರೂ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದು ಸೇರುತ್ತಾರೆ. ನಗರದ ಪೂರ್ವ ವಿಭಾಗದ ವೈಟ್ ಫೀಲ್ಡ್, ಕಾಡುಗೋಡಿ, ಕೆ.ಆರ್.ಪುರಂ, ರಾಮಮೂರ್ತಿ ನಗರ, ಬೈಯಪ್ಪನಹಳ್ಳಿ ಪ್ರದೇಶಗಳಲ್ಲಿ ಸ್ನೇಹಿತರ ಮನೆಗಳು, ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡುತ್ತಾ ದಿನಕ್ಕೆ ತಿಂಗಳಿಗೆ 15 ರಿಂದ 20 ಸಾವಿರಕ್ಕೆ ದುಡಿಯುತ್ತಾರೆ.
-ಬಾಕ್ಸ್-
ಅನಿವಾರ್ಯತೆ ಸೃಷ್ಟಿ ಮಾಡಲಿಆಂಧ್ರ, ತಮಿಳುನಾಡು, ಕೇರಳದಿಂದ ಬರುವ ವಲಸಿಗರು ಹೆಚ್ಚಾಗಿ ಸಾಫ್ಟ್‌ವೇರ್ ಉದ್ಯೋಗ, ಹೋಟೆಲ್ ಉದ್ಯಮ, ಬೇಕರಿ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರೆಲ್ಲರಿಗೂ ಕನ್ನಡ ಕಲಿಸುವವರು ಯಾರೂ ಇಲ್ಲ. ಕನ್ನಡಿಗರೇ ಹೆಚ್ಚಾಗಿ ಹಿಂದಿ ಭಾಷೆ ಮಾತನಾಡಿ ಅವರ ಜೊತೆ ಸಂಪರ್ಕದಲ್ಲಿರುತ್ತಾರೆ. ಕನ್ನಡ ಮಾತನಾಡಲೇ ಬೇಕು ಎಂಬ ಸಂದರ್ಭ ಸೃಷ್ಟಿ ಮಾಡುವುದೇ ಇಲ್ಲ. ಇದು ಅನ್ಯ ಭಾಷಿಕರು ಕನ್ನಡ ಕಲಿಯದಿರಲು ಬಹುಮುಖ್ಯ ಕಾರಣ ಎಂದು ಕೆ.ಆರ್.ಪುರಂನ ಆಶಾ ಅಭಿಪ್ರಾಯಪಟ್ಟರು.
-ಬಾಕ್ಸ್-ಸರ್ಕಾರ ವಲಸೆ ತಡೆಯಲಿ: ನಾರಾಯಣಗೌಡ
ತಮಿಳುನಾಡಿಗೆ ಬೇರೆ ರಾಜ್ಯದಿಂದ ಯಾರಾದರೂ ಹೋದರೆ ಅಲ್ಲಿ ಯಾರೂ ಆಟೋ ಹತ್ತಿಸುವುದಿಲ್ಲ. ಆದರೆ, ನಮ್ಮಲ್ಲಿ ಮೆಜೆಸ್ಟಿಕ್ ನಲ್ಲಿ ಅನ್ಯಭಾಷಿಕ ಏನಾದರೂ ಬಂದರೆ ಆತನನ್ನು ಆತನ ಭಾಷೆಯಲ್ಲೇ ಮಾತನಾಡಿಸಿ ಅವನ ಮನೆವರೆಗೂ ಬಿಟ್ಟುಬರುವ ಆಟೋಚಾಲಕರಿದ್ದಾರೆ. ಇದು ನಮ್ಮ ಕನ್ನಡದ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಎಕ್ಸ್‌ಪ್ರೆಸ್‌ನವದೆಹಲಿಬೆಂಗಳೂರುಬೆಳಗ್ಗೆ 7.50
ರಾಜಧಾನಿ ಎಕ್ಸ್‌ಪ್ರೆಸ್‌ನಿಜಾಮುದ್ದೀನ್‌ಬೆಂಗಳೂರುಬೆಳಗ್ಗೆ 6.30ಸಂಪರ್ಕ ಕ್ರಾಂತಿನಿಜಾಮುದ್ದೀನ್‌ಯಶವಂತಪುರಬೆಳಗ್ಗೆ 4.15 (ಸೋಮ, ಮಂಗಳ, ಗುರು, ಶನಿ, ಭಾನು)ಸಂಪರ್ಕ ಕ್ರಾಂತಿಚಂಡೀಗಢಯಶವಂತಪುರ ಬೆಳಗ್ಗೆ 5.25 (ಮಂಗಳ, ಶನಿ)ಲಕ್ನೋ ಎಕ್ಸ್‌ಪ್ರೆಸ್‌ಲಕ್ನೋಯಶವಂತಪುರಮಧ್ಯಾಹ್ನ 1.30 (ಗುರುವಾರ)
ಬಿಕಾನೇರ್ ಎಕ್ಸ್‌ಪ್ರೆಸ್‌ಬೀಕಾನೇರ್ (ರಾಜಸ್ಥಾನ)ಯಶವಂತಪುರಬೆಳಗ್ಗೆ 6ಕ್ಕೆ (ವಾರಕ್ಕೆ 1ದಿನ)ಸಂಘಮಿತ್ರ ಎಕ್ಸ್‌ಪ್ರೆಸ್‌ಪಾಟ್ನಾಬೆಂಗಳೂರುಬೆಳಗ್ಗೆ 7.40 (ಪ್ರತಿದಿನ)