ತೋಕಸಂದ್ರ ಗ್ರಾಪಂಗೆ 10.45 ಕೋಟಿ ಮಂಜೂರು

KannadaprabhaNewsNetwork |  
Published : Oct 20, 2025, 01:02 AM IST
19ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿ ತಾಲೂಕು ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ, ಮಲ್ಲಿಗೆಮೆಟ್ಟಿಲು ಗ್ರಮಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಇಕ್ಬಾಲ್ ಹುಸೇನ್  ಚಾಲನೆ ನೀಡಿದರು. | Kannada Prabha

ಸಾರಾಂಶ

ಹಾರೋಹಳ್ಳಿ: ತಾಲೂಕಿನ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ 10 ಕೋಟಿ 45 ಲಕ್ಷ ರುಪಾಯಿ ಮಂಜೂರಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಹಾರೋಹಳ್ಳಿ: ತಾಲೂಕಿನ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ 10 ಕೋಟಿ 45 ಲಕ್ಷ ರುಪಾಯಿ ಮಂಜೂರಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಮರಳವಾಡಿ ಹೋಬಳಿ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಹನುಮಂತಪುರ, ಮಲ್ಲಿಗೆಮೆಟ್ಟಿಲು ಗ್ರಾಮಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಗ್ರಾಪಂ ವ್ಯಾಪ್ತಿಗೆ ಸರ್ಕಾರದಿಂದ 10 ಕೋಟಿ 45 ಲಕ್ಷ ರು. ಮಂಜೂರಾಗಿದೆ. ಇಂದು 5 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಕೆಲಸ ಕಾರ್ಯಗಳಿಗೆ ವಿಶೇಷ ಕಾಳಜಿ ವಹಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಹೈಕಮಾಂಡ್ ಆದೇಶ ಮಾತನಾಡುವುದಿಲ್ಲ:

ಕೋನಾಳದೊಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಕೇಳಿದಾಗ, ನಾನು ಈ ಹಿಂದೆ ಆಡಿದ ಮಾತಿಗೆ ಇಗಲೂ ಬದ್ದನಾಗಿದ್ದೇನೆ. ನವಂಬರ್ ಕ್ರಾಂತಿಯ ಬಗ್ಗೆ ಯಾವ ಶಾಸಕರು ಮಾಧ್ಯಮದ ಬಳಿ ಮಾತನಾಡ ಬಾರದು ಎಂಬ ಕಟ್ಟಾಜ್ಞೆ ಇರುವುದರಿಂದ ನಾವು ಏನೂ ಉತ್ತರಿಸುವುದಿಲ್ಲ. ಪಕ್ಷದ ವರಿಷ್ಠರ ಆಜ್ಞೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರವರ ಸೂಚನೆಯ ಮೇರೆಗೆ ಕ್ಷೇತ್ರ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇನೆಂದಷ್ಟೆ ಹೇಳಿದರು.

ಈ ಸಂದರ್ಭದಲ್ಲಿ ಮರಳವಾಡಿ ಸಮೀಪದ ಹನುಮಂತಪುರ, ಮಲ್ಲಿಗೆಮೆಟ್ಟಿಲು ಗ್ರಾಮಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ, ಭೈರೇಗೌಡನದೊಡ್ಡಿಯಲ್ಲಿ 30 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಮಲ್ಲಿಗೆ ಮಟ್ಟಿಲು ಗ್ರಾಮದಲ್ಲಿ ಶಾಲಾ ಕಟ್ಟಡ ಉದ್ಘಾಟನೆ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಮರಿಗೌಡನದೊಡ್ಡಿ ಹಾಗೂ ಮಲ್ಲೇನಹಳ್ಳಿ, ತೋಕಸಂದ್ರ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆಸಿಬಿ ಅಶೋಕ್, ತಹಸೀಲ್ದಾರ್ ಹರ್ಷವರ್ಧನ್, ಇಒ ಅಪೂರ್ವ ಕುಲಕರ್ಣಿ, ಮುಖಂಡರಾದ ಕೀರಣಗೆರೆ ಜಗದೀಶ್, ರಾಮಕೃಷ್ಣ, ವೆಂಕಟೇಶ್, ಸ್ವಾಮಿ, ಹನುಮಂತು, ನಾಗರಾಜು, ಕುಳ್ಳಪ್ಪ, ರಾಜು, ಮಲ್ಲೇನಹಳ್ಳಿ ದೊಡ್ಡಯ್ಯ, ಕುಮಾರ್, ಸಿದ್ದೇಶ್, ಶಂಕರ್ ಇತರರು ಹಾಜರಿದ್ದರು.

19ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ತಾಲೂಕು ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ, ಮಲ್ಲಿಗೆಮೆಟ್ಟಿಲು ಗ್ರಮಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ