ಮರಿಯಮ್ಮನಹಳ್ಳಿ: ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಿಎಂಎಂ ಸಂಸ್ಥೆ ಗರಗ ಗ್ರಾಮದ ದುರುಗಮ್ಮದೇವಿ ದೇವಸ್ಥಾನಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡಿದೆ ಎಂದು ಬಿಎಂಎಂ ಸಂಸ್ಥೆಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ಹೇಳಿದರು.ಬಿಎಂಎಂ ಕಾರ್ಖಾನೆಯ ಕಚೇರಿಯಲ್ಲಿ ಶನಿವಾರ ನಡೆದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಿ ಪರಿಶುದ್ಧ ಮನಸ್ಸು, ಜಪ. ತಪ, ಪೂಜೆ, ಪುರಷ್ಕಾರಗಳು. ಹೋಮ ಹವನಗಳು ನಡೆಯುತ್ತಿವೆಯೋ ಅಲ್ಲಿಯ ಜನರ ಬದುಕು ನಿಜಕ್ಕೂ ಶಾಂತಿ, ನೆಮ್ಮದಿಯ ತಾಣವಾಗಿದೆ ಎಂದು ಅವರು ಹೇಳಿದರು.
ಗರಗ ಗ್ರಾಮದ ದುರುಗಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಿಎಂಎಂ ಸಂಸ್ಥೆಯಿಂದ ₹10 ಲಕ್ಷ ಆರ್ಥಿಕ ನೆರವಿನ ಚೆಕ್‌ನ್ನು ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಿಗೆ ಹಸ್ತಾತರಿಸಲಾಯಿತು.ಬಿಎಂಎಂ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕ ಗಿರೀಶ್ ಕಾಕನೂರು, ಅರುಣ್ ಕುಮಾರ್, ಸ್ಥಳೀಯ ಮುಖಂಡರಾದ ಎಸ್. ಕೃಷ್ಣನಾಯ್ಕ, ಗರಗ ಗ್ರಾಮದ ಮುಖಂಡರಾದ ದುಡ್ಡ ಹೂಲ್ಯಪ್ಪ, ದೊಡ್ಡ ಹನುಮಂತಪ್ಪ, ಹನುಮಂತ ರೆಡ್ಡಿ, ಪ್ರಕಾಶ್ ಪೂಜಾರ್, ಪ್ರಭು, ವದ್ದಟ್ಟಿ ಪ್ರಕಾಶ್, ಮಂಜುನಾಥ.ಪಿ. ಸುಬಾನಸಾಬ್, ದಾದಾಪೀರ್, ಶ್ರೀನಿವಾಸ್ ಬ್ಯಾಲಕುಂದಿ ಸೇರಿದಂತೆ ದೇವಸ್ಥಾನದ ಧರ್ಮದರ್ಶಿಗಳು ಮತ್ತು ಹೊಸ ಗರಗ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದ ದುರುಗಮ್ಮ ದೇವಸ್ಥಾನಕ್ಕೆ ಬಿಎಂಎಂ ಸಂಸ್ಥೆಯಿಂದ ₹10 ಲಕ್ಷ ನೆರವನ್ನು ಬಿಎಂಎಂ ಸಂಸ್ಥೆಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ಗ್ರಾಮದ ಮುಖಂಡಡರಿಗೆ ಚೆಕ್ ವಿತರಿಸಿದರು.