ಸುಪಾ ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork |  
Published : Aug 28, 2024, 12:53 AM IST
ನೀರು ಹೊರಬಿಡಲಾಯಿತು  | Kannada Prabha

ಸಾರಾಂಶ

ಈಗಾಗಲೇ ಜಲಾಶಯದಿಂದ ನೀರು ಬಿಡುಗಡೆ ಕುರಿತು ವಿದ್ಯುತ್ ನಿಗಮ ನದಿ ಪಾತ್ರದ ಜನತೆಗೆ ಮೂರು ಬಾರಿ ಎಚ್ಚರಿಕೆಯ ನೋಟಿಸ್ ನೀಡಿತ್ತು. ಸುರಕ್ಷಿತವಾಗಿ ಸ್ಥಳಾಂತರಗೊಳ್ಳುವಂತೆ ಆಸುಪಾಸಿನ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.

ಜೋಯಿಡಾ: ಸುಪಾ ಜಲಾಶಯದಿಂದ ಮಂಗಳವಾರ ಹತ್ತು ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯ ತುಂಬಲು ಇನ್ನೂ 4 ಮೀಟರ್ ಬಾಕಿ ಇದೆ.

ಗರಿಷ್ಠ ಮಟ್ಟ 564 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 559 ಮೀಟರ್ ದಾಟಿತ್ತು. ಈ ಹಿಂದೆ 4 ಸಲ ಜಲಾಶಯ ತುಂಬಿದೆ. ಇದು ಐದನೇ ಸಲ. ಮಂಗಳವಾರ ನೀರು ಬಿಡುವ ಸಂದರ್ಭದಲ್ಲಿ ಕವಿನಿ ಅಧಿಕಾರಿಗಳು ಆರಕ್ಷಕರು ಉಪಸ್ಥಿತರಿದ್ದರು.

ಈಗಾಗಲೇ ಜಲಾಶಯದಿಂದ ನೀರು ಬಿಡುಗಡೆ ಕುರಿತು ವಿದ್ಯುತ್ ನಿಗಮ ನದಿ ಪಾತ್ರದ ಜನತೆಗೆ ಮೂರು ಬಾರಿ ಎಚ್ಚರಿಕೆಯ ನೋಟಿಸ್ ನೀಡಿತ್ತು. ಸುರಕ್ಷಿತವಾಗಿ ಸ್ಥಳಾಂತರಗೊಳ್ಳುವಂತೆ ಆಸುಪಾಸಿನ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ

ಹೊನ್ನಾವರ: ಗೇರುಸೊಪ್ಪ ಜಲಾಶಯ (ಶರಾವತಿ ಟೇಲರೇಸ್‌) ಭರ್ತಿಯಾಗಿದ್ದು, ಮಂಗಳವಾರ 52380 ಕ್ಯುಸೆಕ್‌ ನೀರನ್ನು 5 ಗೇಟ್‌ಗಳ ಮೂಲಕ ನದಿಗೆ ಬಿಡಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹೀಗಾಗಿ ಲಿಂಗನಮಕ್ಕಿ ಅಣೆಕಟ್ಟು ಬಹುತೇಕ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಆ ನೀರು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹವಾಗುತ್ತಿದ್ದು, ಅಲ್ಲಿಂದಲೂ ನೀರನ್ನು ಹೊರಬಿಡಲಾಗುತ್ತಿದೆ.ಲಿಂಗನಮಕ್ಕಿ ಅಣೆಕಟ್ಟೆಯು 1819 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಂಗಳವಾರ 1817.55 ಅಡಿಗೇರಿದೆ. ಶೇ. 96.59ರಷ್ಟು ತುಂಬಿದೆ. 33140 ಕ್ಯುಸೆಕ್‌ ಒಳಹರಿವಿದೆ. 40660 ಕ್ಯುಸೆಕ್‌ ನೀರನ್ನು 11 ಗೇಟ್‌ಗಳ ಮೂಲಕ ಬಿಡಲಾಗುತ್ತಿದೆ.

ಈ ನೀರು ಜೋಗ ಜಲಪಾತದಲ್ಲಿ ಧುಮುಕಿ ಗೇರುಸೊಪ್ಪಾ ಅಣೆಕಟ್ಟಿಗೆ ಸೇರುತ್ತಿದೆ. ಅಲ್ಲಿ ಸಂಗ್ರಹಣಾವಕಾಶ (50 ಟಿಎಂಸಿ) ಕಡಿಮೆ ಇರುವ 52380 ಸಾವಿರ ಕ್ಯುಸೆಕ್‌ ನೀರನ್ನು 5 ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!