ಕನ್ನಡಪ್ರಭವಾರ್ತೆ ತುರುವೇಕೆರೆ
ಪಟ್ಟಣದ ಸಮೀಪದಲ್ಲಿರುವ ಅವರ ಫಾರಂ ಹೌಸ್ ನಲ್ಲಿ ನಡೆದ ಬಿಎಸ್.ವೈ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಕೀರ್ತಿ ಬಿಎಸ್.ವೈಗೆ ಸಲ್ಲುತ್ತದೆ. ರಾಜ್ಯದಲ್ಲಿ ಕೇವಲ 2 ಸ್ಥಾನಗಳಿಂದ ಬಿಜೆಪಿ ಆರಂಭಿಸಿತ್ತು. ನಂತರ ಸ್ವಂತ ಬಲದಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸುವ ಹಂತಕ್ಕೆ ಬಂದಿರುವುದು ಬಿಎಸ್.ವೈ ರವರ ಶ್ರಮದಿಂದ. ಸೈಕಲ್ ನಲ್ಲಿ ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆ ಮಾಡಿದ ಫಲವಾಗಿ ಇಂದು ಬಿಜೆಪಿ ರಾಜ್ಯದಲ್ಲಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಸಾವಿರಾರು ರೈತರ ಪರ ಹೋರಾಟಗಳನ್ನು ಮಾಡಿ ರೈತ ನಾಯಕನಾಗಿ ಬೆಳೆದಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಜನಪರವಾದ ಯೋಜನೆಗಳನ್ನು ನೀಡಿದ್ದಾರೆ. ಶಾಲಾ ಮಕ್ಕಳಿಗೆ ಸೈಕಲ್, ಹಾಲಿಗೆ ಪ್ರೋತ್ಸಾಹ ಧನ, ಭಾಗ್ಯಲಕ್ಷ್ಮಿ ಯೋಜನೆ, ಕೃಷಿ ಬಜೆಟ್ ಮಂಡಿಸಿದ ಬಿಎಸ್.ವೈ ರವರನ್ನು ರಾಜ್ಯದ ಅಭಿವೃದ್ದಿಯ ಹರಿಕಾರ ಎಂದರೂ ತಪ್ಪಾಗಲಾರದು. ರೈತರ ಪರ ಹಲವು ಯೋಜನೆಗಳನ್ನು ನೀಡಿದ್ದಾರೆ. ನಾನು ಶಾಸಕನಾದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತಾಲೂಕಿನ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಮೇ 9 ರಂದು ಚಿತ್ರದುರ್ಗದ ಸಮಾರಂಭಕ್ಕೆ ಹೋಗುವುದೇ ನಮ್ಮ ಪುಣ್ಯ. ಅದು ಅವರಿಗೆ ನೀಡುವ ಗೌರವ. ನಮ್ಮ ಕ್ಷೇತ್ರದಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ಸಂತೋಷ್ ಕಂಟ್ಲಿ, ನವೀನ್ ಬಾಬು, ಸಿದ್ದಪ್ಪಾಜಿ, ಜಿಲ್ಲಾ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಹಿರಿಯ ಮುಖಂಡ ಅರಳಿಕೆರೆ ಶಿವಯ್ಯ, ಕಲ್ಕೆರೆ ಮೃತ್ಯುಂಜಯ, ಹಾಲೇಗೌಡ, ಉಗ್ರಯ್ಯ, ತೀರ್ಥಕುಮಾರ್, ಜಗದೀಶ್, ಪದ್ಮಾವತಿ, ರಾಧಾ, ಅನಿತಾ ನಂಜುಂಡಯ್ಯ, ಚೂಡಾಮಣಿ, ಸಾವಿತ್ರಮ್ಮ ಸೇರಿದಂತೆ ಎಲ್ಲಾ ಹೋಬಳಿ ಅಧ್ಯಕ್ಷರು, ಬೂತ್ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.