10ರಿಂದ ದಕ್ಷಿಣ ವಲಯ ಖೇಲೋ ಇಂಡಿಯಾ ಮಹಿಳಾ ವುಶು: ಚರಂತಿಮಠ

KannadaprabhaNewsNetwork |  
Published : Jun 09, 2024, 01:36 AM IST
ಇದೇ ದಿ.10 ರಿಂದ 13 ರವರೆಗೆ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ದಕ್ಷಿಣ ವಲಯದ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ಮಹಿಳಾ ವುಶು ಕ್ರೀಡಾಕೂಟ | Kannada Prabha

ಸಾರಾಂಶ

ಜೂ.10 ರಿಂದ 13ರವರೆಗೆ ಬಾಗಲಕೋಟೆಯ ಬಿವಿವಿ ಸಂಘದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ದಕ್ಷಿಣ ವಲಯದ ಖೇಲೋ ಇಂಡಿಯಾ ಮಹಿಳಾ ವುಶು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕರ್ನಾಟಕ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜೂ.10 ರಿಂದ 13ರವರೆಗೆ ಬಿವಿವಿ ಸಂಘದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ದಕ್ಷಿಣ ವಲಯದ ಖೇಲೋ ಇಂಡಿಯಾ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಮಹಿಳಾ ವುಶು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವುಶು ಸಂಸ್ಥೆಯ ಸಹಭಾಗಿತ್ವದಲ್ಲಿ ಕರ್ನಾಟಕ ವುಶು ಸಂಸ್ಥೆ ಮತ್ತು ಬಿವಿವಿ ಸಂಘದ ಜಂಟಿಯಾಗಿ ಈ ಕ್ರೀಡಾಕೂಟ ಆಯೋಜಿಸಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ಓಡಿಶಾ, ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರ್‌ ಸೇರಿ ದಕ್ಷಿಣ ರಾಜ್ಯಗಳ 400 ಕ್ರೀಡಾಪಟುಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ವಿಜೇತ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ನಗದು ಬಹುಮಾನವಾಗಿ ₹ 7.20 ಲಕ್ಷ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಿದೆ. ಜೊತೆಗೆ ಪ್ರಶಸ್ತಿ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕ್ರೀಡಾಸಕ್ತರು ಕ್ರೀಡಾಕೂ ಟಕ್ಕೆ ಆಗಮಿಸಿ ಪಂದ್ಯಗಳನ್ನು ವೀಕ್ಷಸಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕೆಂದರು.

ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಲು ಮತ್ತು ಆಗಮಿಸಲಿರುವ ಭಾರತೀಯ ವುಶು ಸಂಸ್ಥೆಯ ಅಧಿಕಾರಿಗಳು, ಕ್ರೀಡಾಪಟುಗಳ ಉಸ್ತುವಾರಿಗಾಗಿ ಅನೇಕ ಸಮಿತಿ ರಚಿಸಲಾಗಿದೆ. ವಸತಿ, ಆಹಾರ, ಸಾರಿಗೆ, ಮಾಧ್ಯಮ, ವೈದ್ಯ ಕೀಯ, ಕ್ರೀಡಾಂಗಣದ ಉಸ್ತುವಾರಿ ಸೇರಿ ಹಲವು ಸಮಿತಿ ರಚಿಸಲಾಗಿದ್ದು, ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಲು ಎಲ್ಲ ಸಮಿತಿಗಳು ಈಗಾಗಲೇ ಕಾರ್ಯನಿರತವಾಗಿವೆ ಎಂದರು. ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಜ್ಯೂನಿಯರ್ ವುಶು ತಂಡದ ಆಯ್ಕೆಯ ಪ್ರಕ್ರಿಯೆಯನ್ನು ಜೂ.14 ರಿಂದ 15ರವರೆಗೆ ವಿದ್ಯಾಗಿರಿಯ ಬಿವಿವಿ ಸಂಘದ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸೆ.22 ರಿಂದ 30ರವರೆಗೆ ಬ್ರೂನಿ ದೇಶದಲ್ಲಿ ಆಯೋಜಿಸಲಾಗಿರುವ 9ನೇ ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗಿಯಾಗುವ ಭಾರತೀಯ ಜ್ಯೂನಿಯರ್ ವುಶು ತಂಡ ವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಥಮ ಬಾರಿಗೆ ಬಾಗಲಕೋಟೆಯಲ್ಲಿ ನಡೆಯುತ್ತಿರುವುದು ನಗರಕ್ಕೆ ಮತ್ತು ಬಿವಿವಿ ಸಂಘಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ 200 ವುಶು ಕ್ರೀಡಾಪಟುಗಳು ಭಾಗವಹಿಸುವರು. ಭಾರತೀಯ ವುಶು ತಾಂತ್ರಿಕ ಸಮಿತಿ ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಯ್ಕೆ ಮಾಡಲಿದೆ. ಈ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವುಶು.ಕ್ರೀಡಾಪಪುಟಗಳ ಜೊತೆಗೆ ಭಾರತೀಯ ವುಶು ಪ್ರಾಧಿಕಾರದ ಅಧಿಕಾರಗಳು, ರೆಫರಿಗಳು ಹಾಗೂ ಇನ್ನಿತರ ವಿಷಯ ಪರಿಣಿತರು ಆಗಮಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಸಜ್ಜನ (ಬೇವೂರ) ಸಿಇಒ ಸೊಹೇಲ್ ಅಹಮದ್, ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ, ರಾಜು ನಾಯ್ಕರ್, ಸಂಗಮೇಶ ಲಾಯದಗುಂದಿ, ಆರ್.ಎಂ. ಹಿರೇಮಠ ಮತ್ತಿತರರು ಇದ್ದರು.ಭಾರತೀಯ ಜ್ಯೂನಿಯರ್ ವುಶು ತಂಡದ ಆಯ್ಕೆಯ ಪ್ರಕ್ರಿಯೆಯನ್ನು ಜೂ.14 ರಿಂದ 15ರವರೆಗೆ ವಿದ್ಯಾಗಿರಿಯ ಬಿವಿವಿ ಸಂಘದ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸೆ.22 ರಿಂದ 30ರವರೆಗೆ ಬ್ರೂನಿ ದೇಶದಲ್ಲಿ ಆಯೋಜಿಸಲಾಗಿರುವ 9ನೇ ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗಿಯಾಗುವ ಭಾರತೀಯ ಜ್ಯೂನಿಯರ್ ವುಶು ತಂಡ ವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಥಮ ಬಾರಿಗೆ ಬಾಗಲಕೋಟೆಯಲ್ಲಿ ನಡೆಯುತ್ತಿರುವುದು ನಗರಕ್ಕೆ ಮತ್ತು ಬಿವಿವಿ ಸಂಘಕ್ಕೆ ಅತ್ಯಂತ ಹೆಮ್ಮೆಯ ವಿಷಯ.

-ವೀರಣ್ಣ ಚರಂತಿಮಠ ಬಿವಿವಿ ಸಂಸ್ಥೆ ಕಾರ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ