ಕನ್ನಡಪ್ರಭ ವಾರ್ತೆ ಕೋಲಾರಇನ್ನು ೩ ತಿಂಗಳೊಳಗೆ ೧೦೦ ಹೊಸ ಹಾಲು ಉತ್ಪಾದಕ ಸಂಘಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಎಲ್ಲಾ ಸಂಘಗಳಲ್ಲಿ ಸಾಮಾನ್ಯ ಸಾಫ್ಟ್‌ವೇರ್ ಅಳವಡಿಸುವುದು ಮತ್ತು ಶೇ.೧೦೦ ಎಲ್ಲಾ ರೈತರಿಗೆ ಮತ್ತು ಹಸುಗಳಿಗೆ ವಿಮೆ ಮಾಡಲಾಗುವುದೆಂದು ಕೋಮುಲ್ ನೂತನ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಬೆಳಗಾನಹಳ್ಳಿ ಕೋಮುಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ತಾಲೂಕುಗಳಲ್ಲಿ ನಿರ್ದೇಶಕರಿದ್ದು ಅವರು ಕಾರ್ಯನಿರ್ವಹಿಸಲು ಕಚೇರಿ ಪ್ರಾರಂಭಿಸಿ ಅವರವರ ಕ್ಷೇತ್ರಗಳಲ್ಲಿ ಒಕ್ಕೂಟಕ ಕಾರ್ಯನಿರ್ವಹಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಪ್ರೋತ್ಸಾಹಧನ ಹೆಚ್ಚಿಸಲು ಆಗ್ರಹ
ಎಸ್.ಎನ್. ಏನೇನು ಹೇಳುತ್ತಾರೋ ಅದಕ್ಕೆ ನನಗೇನು ಹೇಳಬೇಡಿ, ನಾನು ಲೈವಲ್ಲಿ ನೋಡುತ್ತೇನೆ, ಬೇರೆ ಪಕ್ಷದವರಾಗಿದ್ದರೆ ಉತ್ತರಿಸಲು ಸಿದ್ದನಿದ್ದೇ, ಏನು ಮಾಡೋದು, ಇಬ್ಬರೂ ಒಂದೇ ಪಕ್ಷ ಅಲ್ವಾ ಹಾಹಾಗಿ ಸುಮ್ಮನಿದ್ದೇನೆ, ಆದರೂ ಅವರು ಯಾಕೋ ಏನೂ ಮಾತಾಡಿ ಮಾತಾಡಿ ಮೇಲೆ ಹಾಕೋಳ್ಳುತ್ತಿದ್ದಾರೆ. ಅವರು ಮಾತಾಡುತ್ತಿರುವಂತೆ ನಾನು ಮಾತಾಡುವುದಿಲ್ಲ. ಯಾವುದೇ ಕಾರಣಕ್ಕೂ ಅವರು ಎಷ್ಟು ಮಾತಾಡಿದರೂ ನಾನು ಮಾತಾಡಲ್ಲ ಎಂದರು.ಕೇಳಿದ ದಾಖಲೆ ಕೊಡುತ್ತೇವೆ
ಡೈರೆಕ್ಟರ್ ಆಗಿ ಬಂದಿದ್ದಾರೆ, ಎಲ್ಲಾ ಅರ್ಜಿಗಳು ಹಾಕಿದ್ದಾರೆ, ಡೈರೆಕ್ಟರಾಗಿ ಅವರು ಕೇಳಿದ್ದೆಲ್ಲಾ ದಾಖಲೆ ಸಿಗುತ್ತದೆ, ಮಾಡಿರುವುದೇ ೩೦೦ ಕೋಟಿ ಪ್ರಾಜೆಕ್ಟ್ ಇದರಲ್ಲಿ ನೂರಾರು ಕೋಟಿ ಹಗರಣ ಎನ್ನುತ್ತಾರೆ, ಮಾಡಿರುವ ಸೋಲಾರ್ ಪ್ಲಾಂಟ್, ಎಂವಿಕೆ ಗೋಲ್ಡ್ ಡೇರಿ, ಐಸ್ ಕ್ರೀಮ್ ಪ್ಲಾಂಟ್ ಎಲ್ಲವೂ ಕಣ್ಣು ಮುಂದೆ ಇದೆ, ಇಲ್ಲದೆ ಹೋಗೋಕ್ಕೆ ಇದೇನು ರಿಯಲ್ ಎಸ್ಟೇಟಾ ಎಂದು ಪ್ರಶ್ನಿಸಿದರು. ಸೋಲಾರ್ ಪ್ಲಾಂಟ್ ನಿರ್ಮಾಣಇದು ಸರ್ಕಾರದ ಹಣವನಲ್ಲ, ರೈತರು ಹಾಕಿದ ಹಾಲನ್ನು ಮಾರಾಟ ಮಾಡಿ ಅದರಲ್ಲಿ ಬಂದಿರುವ ಲಾಭದಲ್ಲಿ ಈ ಎಲ್ಲಾ ಯೋಜನೆಗಳನ್ನು ಮಾಡಿರೋದು, ಕರ್ನಾಟಕದಲ್ಲಿ ಯಾರೂ ಮಾಡಲಾಗದ ಸಾಧನೆ ಕೋಲಾರ ಒಕ್ಕೂಟ ಮಾಡಿದೆ, ದೇಶದಲ್ಲೇ ಮಿಲ್ಕ್ ಯೂನಿಯನ್ ಸೋಲಾರ್ ಪ್ಲಾಂಟ್ ಹಾಕಿರೋದು ನನ್ನ ಅಧ್ಯಕ್ಷತೆಯಲ್ಲಿ ಇದು ರೆಕಾರ್ಡ್ ಎಂದು ತಿಳಿಸಿದರು.
ತಾವು ಅಧ್ಯಕ್ಷರಾಗಿ ಬಂದೆ ಮೇಲೆ ಎಲ್ಲಾ ಯೋಜನೆಗಳನ್ನು ಮತ್ತು ನಂದಿನಿಯ ಲಾಭದಾಯಕ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿರುವುದು ಇವೆಲ್ಲಾ ಮಾಡಿರೋದು ತಪ್ಪಾ ಎಂದು ಪ್ರಶ್ನಿಸಿದರು.