ಕನ್ನಡಪ್ರಭ ವಾರ್ತೆ ಉಡುಪಿ
ಈ ಬಗ್ಗೆ ಹೋರಾಟ ನಡೆಸಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವಿಂದ್ರ ಶ್ಯಾನುಭಾಗ್ಯೀ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಕಳದ ಸಾಣೂರಿನ ವೆಂಕಟೇಶ ಕಾಮತ್ ಅವರು 2001ರಲ್ಲಿ ತಮ್ಮ ಕುಟುಂಬ ಸದಸ್ಯರ ರಕ್ಷಣೆಗಾಗಿ ಹಾಗೂ ತಮ್ಮ ಇಳಿವಯಸ್ಸಿನ ಜೀವನಾಧಾರಕ್ಕಾಗಿ ಕಾರ್ಕಳದ ಅಂಚೆ ಕಚೇರಿಯಲ್ಲಿ 15 ವರ್ಷಗಳ ಅವಧಿಯ ಕುಟುಂಬ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆದಿದ್ದರು. ಪ್ರತಿ ವರ್ಷ ಪಿ.ಪಿ.ಎಫ್ ದೇಣಿಗೆಯನ್ನು ತಪ್ಪದೇ ಪಾವತಿಸುತ್ತಿದ್ದರು.೨೦೧೬ರಲ್ಲಿ ತಮ್ಮ ಹಣವನ್ನು ಹಿಂದೆ ಪಡೆಯಲು ಅಂಚೆ ಕಚೇರಿಯನ್ನು ಸಂಪರ್ಕಿಸಿದರು. ಆಗ ಅಂಚೆ ಅಧಿಕಾರಿಗಳು ಈ ಖಾತೆಯನ್ನು 5 ವರ್ಷಗಳ ಕಾಲ ವಿಸ್ತರಿಸಲು ಅವಕಾಶವಿದೆ ಎಂದು ಹೇಳಿದಂತೆ ಕಾಮತ್ ಅವರು, ಖಾತೆಯನ್ನು ೨೦೨೧ರ ವರೆಗೆ ಮುಂದುವರಿಸಿದರು. ೨೦೨೧ರಲ್ಲಿ ಮತ್ತೆ ಅಂಚೆ ಅಧಿಕಾರಿಗಳ ಸಲಹೆಯಂತೆ ಇನ್ನೂ ಐದು ವರ್ಷಗಳ ವರೆಗೆ ಮುಂದುವರಿಸಿದರು.
ಗಾಬರಿಗೊಂಡ ಕಾಮತರು ಕೂಡಲೇ ಅಂಚೆ ಮಾಸ್ಟರರನ್ನು ಭೇಟಿ ಮಾಡಿ ವಿಚಾರಿಸಿದಾಗ ೨೦೦೫ರಲ್ಲಿ ಹೊಸ ನಿಯಮವೊಂದು ಜಾರಿಯಾಗಿದ್ದು, ಇನ್ನು ಮುಂದೆ ಪಿ.ಪಿ.ಎಫ್. ಖಾತೆಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾತ್ರ ತೆರೆಯಬಹುದು, ಕುಟುಂಬ ಖಾತೆಯನ್ನು ತೆರೆಯಲು ಅವಕಾಶವಿಲ್ಲ. ಆದ್ದರಿಂದ ೨೦೦೫ರ ನಂತರ ಖಾತೆಗೆ ಬಡ್ಡಿ ಕೊಡಲಾಗುವುದಿಲ್ಲ ಎಂದು ಹೇಳಿದರು.
ಅದಕ್ಕೆ ಅಂಚೆ ಇಲಾಖೆಯ ಲೆಕ್ಕ ಪರಿಶೋಧಕರು 2023ರಲ್ಲಿ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾಗ ಈ ವಿಚಾರ ಗಮನಕ್ಕೆ ಬಂತು. ಆದುದರಿಂದ ೨೦೨೩ರಲ್ಲಿಯೇ ನಿಮ್ಮ ಖಾತೆಯನ್ನು ೩೨,೬೩,೯೦೨ ರು.ಗಳಿಗೆ ಮುಕ್ತಾಯಗೊಳಿಸಲಾಗಿದೆ. ಈಗಾಗಲೇ ನೀಡಿರುವ ಅಧಿಕ ಬಡ್ಡಿ ೧೦,೪೪,೨೮೬ ರು.ಗಳನ್ನು ಕಳೆದು ಉಳಿದ ೨೨,೧೯,೬೧೬ ರು.ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಲಿಖಿತ ವಿವರಣೆ ನೀಡಿದರು.
ನಂತರ ಉಡುಪಿಯ ಬಳಕೆದಾರರ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಸುದೀರ್ಘ ವಿಚಾರಣೆಯ ನಂತರ ಇದೀಗ ಬಳಕೆದಾರರ ಆಯೋಗವು ತೀರ್ಪು ಪ್ರಕಟಿಸಿದ್ದು, ಕಾಮತರ ಖಾತೆಯ ಬಡ್ಡಿ ಹಣ ಸುಮಾರು ೧೧,೦೦,೪೪೪ ರು. ಹಾಗೂ ಅಂಚೆ ಇಲಾಖೆಯ ಸೇವಾ ನ್ಯೂನತೆಗಾಗಿ ೫೦,೦೦೦ ರು. ದಂಡ ಮತ್ತು ವ್ಯಾಜ್ಯದ ಖರ್ಚು ೧೦,೦೦೦ ರು. ಆದೇಶಿಸಿದೆ ಎಂದು ಶ್ಯಾನುಭಾಗ್ ಹೇಳಿದರು.